ಕರ್ನಾಟಕ

karnataka

ETV Bharat / state

ಡಿ.ಕೆ. ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನೂ ಇರಲಿಲ್ಲ: ಸಚಿವ ಸತೀಶ್ ಜಾರಕಿಹೊಳಿ - MINISTER SATISH JARKIHOLI

ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನೂ ನಡೆದಿಲ್ಲ ಎಂದು ಹೇಳಿದ್ದಾರೆ.

minister-satish-jarkiholi
ಸಚಿವ ಸತೀಶ್ ಜಾರಕಿಹೊಳಿ (ETV Bharat)

By ETV Bharat Karnataka Team

Published : Jan 6, 2025, 9:12 PM IST

Updated : Jan 6, 2025, 10:04 PM IST

ರಾಯಚೂರು :ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನೂ ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದು. ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ. ಸಭೆಯಲ್ಲಿ ಅಂತಾ ಚರ್ಚೆ ಯಾವುದೂ ಆಗಿಲ್ಲ. ಸಂಪುಟ ವಿಸ್ತರಣೆಯೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಸಿಎಂ ಬದಲಾವಣೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಇದ್ದಾರೆ, ಅಂತಹ ಅವಶ್ಯಕತೆ ಬರಲ್ಲ. ಈ ಅವಧಿಗೆ ಸಿಎಂ ಆಗುವುದು ಬರಲ್ಲ. ಮುಂದಿನ ಅವಧಿಗೆ ನಾನು ಸಿಎಂ ಅಂತ ಹೇಳಿದ್ದೇನೆ, ಕಾದು ನೋಡಬೇಕು ಎಂದರು.

ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿದರು (ETV Bharat)

ಗುತ್ತಿಗೆದಾರರ ಬಿಲ್​ಗೆ ಹಣ ಬಿಡುಗಡೆ ಆಗದ ವಿಚಾರಕ್ಕೆ ಮಾತನಾಡಿದ ಅವರು, ಈ ರೀತಿಯ ಇನ್ ಬ್ಯಾಲೆನ್ಸ್​ ಆಗಲು ಏನ್ ಕಾರಣ. 1000 ಕೋಟಿ ಬಜೆಟ್ ಇದೆ. ಸಾವಿರ ಕೋಟಿ ಕೆಲಸ ಆಗಿದ್ರೆ ಅದು ಬಿಡುಗಡೆ ಮಾಡಬೇಕು. 1000 ಕೋಟಿ ಬಜೆಟ್ ಇಟ್ಟುಕೊಂಡು 3 ಸಾವಿರ ಕೋಟಿ ಕೆಲಸ ಮಾಡಿದ್ರೆ ಹೇಗೆ ಆಗುತ್ತೆ. ಫೈನಾನ್ಸ್ ಸಪೋರ್ಟ್ ಇಲ್ಲದೇ ಕೆಲಸ ಮಾಡಿದ್ದಾರೆ. ಹೀಗಾಗಿ ಬಿಲ್​ಗಳು ಕೊಡಲು ಲೇಟ್ ಆಗುತ್ತಿದೆ. ನಮ್ಮ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.

ಹಿಂದಿನ ಸರ್ಕಾರ ಬಜೆಟ್ ಸಪೋರ್ಟ್ ಇಲ್ಲದೇ ಕೆಲಸ ಮಾಡಿದ್ದಾರೆ. ಈಗ ಆ ಕಾಮಗಾರಿಗೆ ದುಡ್ಡು ಕೊಡಬೇಕು ಎಂದರೆ ಎಲ್ಲಿಂದ ಹಣ ಕೊಡಬೇಕು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಶೇ.60 ರಷ್ಟು ಕಮಿಷನ್ ಸರ್ಕಾರ ಆರೋಪಕ್ಕೆ, ಬಿಜೆಪಿಯವರು ಆರೋಪ ಮಾಡುತ್ತಾರೆ, ಫ್ರೂ ಮಾಡಬೇಕು. ಸುಮ್ಮನೆ ಹೇಳುವುದು ಆಗುವುದಿಲ್ಲ. ಸಚಿನ್ ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಇದೆ. ಈಶ್ವರಪ್ಪ ಅವರ ಹೆಸರು ನೇರವಾಗಿ ಪತ್ರದಲ್ಲಿ ಇತ್ತು. ಆಪ್ತರು, ಪಿಎಗಳ ಹೆಸರು ಇದ್ರೆ ಸಚಿವರು ನೇರವಾಗಿ ಹೊಣೆಗಾರರು ಆಗಲ್ಲ.‌ ತನಿಖೆ ನಡೆಯುತ್ತಿದೆ ನಡೆಯಲಿ ಎಂದು ಹೇಳಿದರು.

ಬಸ್ ದರ ಏರಿಕೆಗೆ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಹಣಕಾಸು ಸಚಿವರು ಹಳೆಗಾಡಿಗಳಿಗೆ ಶೇ.18ರಷ್ಟು ಜಿಎಸ್ಟಿ ಹಾಕಿದ್ದಾರೆ. ಅದರ ಬಗ್ಗೆ ಪ್ರತಿಭಟನೆ ಇಲ್ಲ. ಬರಿ ರಾಜ್ಯದ ಬಸ್ ದರ ಒಂದೇ ನೋಡಿದ್ರೆ ಹೇಗೆ?. ಸಕ್ಕರೆ, ಕಾರ್ ಸೇರಿದ್ರೆ ಶೇ. 12ರಷ್ಟು ಜಿಎಸ್​ಟಿ, ಇದನ್ನ ಕೇಳಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ :ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದೇನು? - KPCC PRESIDENT CHANGE ISSUE

Last Updated : Jan 6, 2025, 10:04 PM IST

ABOUT THE AUTHOR

...view details