ಕರ್ನಾಟಕ

karnataka

ETV Bharat / state

ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ - SATISH JARKIHOLI ON SRIRAMULU

ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಚರ್ಚೆಯ ಬಗ್ಗೆ ಟಿವಿಯಲ್ಲಿ ನೋಡಿದ್ದೇನಷ್ಟೇ. ಈ ಕುರಿತ ಬೆಳವಣಿಗೆ ಬಗ್ಗೆ ಆಗಿದೆ ಗೊತ್ತಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ

SATISH JARKIHOLI ON SRIRAMULU
ಸಚಿವ ಸತೀಶ ಜಾರಕಿಹೊಳಿ (ETV Bharat)

By ETV Bharat Karnataka Team

Published : Jan 24, 2025, 1:26 PM IST

ಬೆಳಗಾವಿ:ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಂಗಳೂರಿಗೆ ಹೋಗಿ ಸಂಪೂರ್ಣ ಮಾಹಿತಿ ಪಡೆಯುವೆ. ಪೂರ್ಣ ಪ್ರಮಾಣದಲ್ಲಿ ಏನು ಬೆಳವಣಿಗೆ ಆಗಿದೆ ಗೊತ್ತಿಲ್ಲ‌. ಟಿವಿಯಲ್ಲಿ ನೋಡಿದ್ದೇನಷ್ಟೇ. ಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದರು.

ಸಚಿವ ಸತೀಶ ಜಾರಕಿಹೊಳಿ (ETV Bharat)

ರಾಜ್ಯದಲ್ಲಿ ಫೈನಾನ್ಸ್ ಕಿರುಕುಳ ಆರೋಪಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ ಅವರು, ಸುಮಾರು ಕಡೆ ಕಿರುಕುಳ ಕೊಡುವ ವರದಿಗಳು ಬರುತ್ತಿವೆ. ತೊಂದರೆ ಕೊಟ್ಟರೆ ದೂರು ದಾಖಲು ಮಾಡುವಂತೆ ತಿಳಿಸಿದ್ದೇವೆ. ಫೈನಾನ್ಸ್ ಕಿರುಕುಳದ ಬಗ್ಗೆ ಗೊಂದಲ ಇದೆ. ಸಾಲ‌ ಪಡೆಯೋದು, ಕಿರುಕುಳ ಕೋಡೊದು ಬೇರೆ ವಿಚಾರ. ಆದರೆ, ಸಬ್ಸಿಡಿ ಹೆಸರಿನಲ್ಲಿ ಸಾವಿರಾರು ಜನರಿಗೆ ಸಾಲ ಕೊಟ್ಟಿದ್ದಾರೆ. ಹಣ ತುಂಬುವ ವಿಚಾರದಲ್ಲಿ ಈಗ ಸಂಘರ್ಷ ಆರಂಭವಾಗಿದೆ. ಈಗಾಗಲೇ ಡಿಸಿ ನೇತೃತ್ವದಲ್ಲಿ ಒಂದು ಸಭೆ ನಡೆಸಿದ್ದೇನೆ. ಎರಡು ತಿಂಗಳ‌ ಸಮಯ ಕೇಳಿದ್ದೇವೆ, ಏನಾದರೂ ಅದಕ್ಕೆ ಪರಿಹಾರ ಹುಡುಕುತ್ತೇವೆ. ಒಂದು ತಿಂಗಳಲ್ಲಿ ಏನು ಸಾಧ್ಯವೋ ಅದಕ್ಕೆ ಪರಿಹಾರಕ್ಕೆ ಮಾಡುತ್ತೇವೆ. ಶಿರೂರಿನಲ್ಲಿ ಕೂಡ ಮಹಿಳೆ ಆತ್ಮಹತ್ಯೆ ಪ್ರಕರಣ ನಡೆದಿದೆ. ಸಂಬಂಧಪಟ್ಟವರಿಗೆ ಈ ಬಗ್ಗೆ ದೂರು ಕೊಡಲು ತಿಳಿಸಿರುವೆ ಎಂದರು.

ಮಧ್ಯವರ್ತಿಗಳ ಜೊತೆಗೆ ಫೈನಾನ್ಸ್​ನವರು ಭಾಗಿಯಾಗಿದ್ದಾರೆ ಎಂಬ ಆರೋಪ ಕುರಿತು ಪೊಲೀಸ್ ತನಿಖೆಗೆ ಸೂಚನೆ ಕೊಟ್ಟಿದ್ದೇನೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ತಾರಿಹಾಳದಲ್ಲಿ‌ ಹಸುಗೂಸು ಸಮೇತ ಬಾಣಂತಿಯನ್ನು ಮನೆಯಿಂದ ಹೊರಹಾಕಿ ಮನೆ ಹರಾಜಿಗಿಟ್ಟ ಪ್ರಕರಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ, ಕುಟುಂಬಸ್ಥರು ದೂರು ಕೊಟ್ಟರೆ ಫೈನಾನ್ಸ್​ನವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ:

ಶ್ರೀರಾಮುಲು ವಿರುದ್ಧ ಛಾಡಿ ಹೇಳಿಲ್ಲ, ಅವರು ಶತ್ರುಗಳ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ: ಜನಾರ್ದನ ರೆಡ್ಡಿ - MLA JANARDHANA REDDY

ನನ್ನನ್ನು ಯಾರೂ ಭೇಟಿ ಮಾಡಿಲ್ಲ: ಜನಾರ್ದನ ರೆಡ್ಡಿ ಹೇಳಿಕೆಗೆ ಡಿ ಕೆ ಶಿವಕುಮಾರ್ ಸ್ಪಷ್ಟನೆ - D K SHIVAKUMAR

ಬಾಣಂತಿ, ಹಸುಗೂಸು ಹೊರಹಾಕಿ ಮನೆ ಜಪ್ತಿ ಮಾಡಿದ ಫೈನಾನ್ಸ್ ಸಿಬ್ಬಂದಿ; ಬೀದಿ ಪಾಲಾದ ಕುಟುಂಬ; ಡಿಸಿ ಹೇಳಿದ್ದಿಷ್ಟು - MICRO FINANCE TORTURE

ABOUT THE AUTHOR

...view details