ಕರ್ನಾಟಕ

karnataka

ಗ್ಯಾರಂಟಿ ಯೋಜನೆ ಸ್ಥಗಿತ ವಿಚಾರ: ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದೇನು? - Guarantee Schemes

By ETV Bharat Karnataka Team

Published : Aug 15, 2024, 7:49 PM IST

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿ, ಅವುಗಳನ್ನು ಸ್ಥಗಿತಗೊಳಿಸುವ ಚಿಂತನೆ ಇಲ್ಲ ಎಂದರು.

minister-sathish-jarakiholi
ಸಚಿವ ಸತೀಶ್​ ಜಾರಕಿಹೊಳಿ (ETV Bharat)

ಸಚಿವ ಸತೀಶ್​ ಜಾರಕಿಹೊಳಿ ಹೇಳಿಕೆ (ETV Bharat)

ಬೆಳಗಾವಿ:ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಚಿಂತನೆಯಿಲ್ಲ. ಆದರೆ, ಜನರ ಅಭಿಪ್ರಾಯದ ಮೇರೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ನಾನೇ ಹೇಳಿದ್ದೇನೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ವಿಚಾರದಲ್ಲಿ ನನ್ನ ಹೆಸರು ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಜನರ ಅಭಿಪ್ರಾಯದ ಮೇರೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಜನರು ಗ್ಯಾರಂಟಿ ಇರಲಿ ಎಂದರೆ ಅವು ಮುಂದುವರೆಯುತ್ತವೆ. ಜನರೇ ಬೇಡ ಅಂದ್ರೆ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

5 ವರ್ಷ ಸಿದ್ದರಾಮಯ್ಯ ಸಿಎಂ: ಮುಖ್ಯಮಂತ್ರಿಯಾಗಿ ಐದು ವರ್ಷ ಸಿದ್ದರಾಮಯ್ಯನವರೇ ಇರುತ್ತಾರೆ ಎಂದು ಹೇಳಿದ್ದೇವೆ. ಇನ್ನು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಬೆಳಗಾವಿ ವಿಭಜನೆ ವಿಚಾರ: ಬೆಳಗಾವಿ ಜಿಲ್ಲೆ ಮತ್ತು ತಾಲೂಕು ವಿಭಜನೆ ವಿಚಾರ ನಮ್ಮ ಕೈಯಲ್ಲಿ ಇದ್ದಿದ್ದರೆ ಆಗಲೇ ಮಾಡುತ್ತಿದ್ದೆವು. 8 ಲಕ್ಷ ಜನಸಂಖ್ಯೆ ಇರುವ ಬೆಳಗಾವಿ ಎರಡು ತಾಲೂಕು ಆಗಬೇಕು. ಜಿಲ್ಲೆಯ ವಿಭಜನೆಗೆ ಸಮಯ ಕೂಡಿ ಬರಬೇಕು. ಯಾವಾಗ ಆಗುತ್ತದೆ ಎಂದು ಹೇಳಲು ಆಗಲ್ಲ. ಸರ್ಕಾರ ನಿರ್ಣಯ ಕೈಗೊಳ್ಳಬೇಕು. ವಿಭಜನೆ ಆಗುತ್ತದೆ ಎಂಬ ಆಶಯವಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲಾಗಿದೆ.‌ 12 ವರ್ಷಗಳ ಹಿಂದೆ ಕೊಟ್ಟ 20 ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಲು ಅವರು ಸೂಚಿಸಿದ್ದಾರೆ. ನಮ್ಮಿಂದ‌ ವಿಳಂಬವಾಗಿದೆ. ಭೂಸ್ವಾಧೀನ, ಅರಣ್ಯ ಇಲಾಖೆ ಅನುಮತಿ ಸಿಗುತ್ತಿಲ್ಲ. ಡಿಸೆಂಬರ್​ವರೆಗೆ ಅವಕಾಶ ಕೇಳಿದ್ದೇವೆ ಎಂದ ಜಾರಕಿಹೊಳಿ, ರಿಂಗ್ ರೋಡ್ ಮಂಜೂರಾಗಿದೆ. ಒಂದು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ, ವಿಳಂಬವಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ಸಚಿವ ಮಧು ಬಂಗಾರಪ್ಪ - Guarantee Schemes

ABOUT THE AUTHOR

...view details