ಕರ್ನಾಟಕ

karnataka

ETV Bharat / state

ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್​ಗೆ ಸಚಿವ ಸಂತೋಷ್ ಲಾಡ್​ ಬೇಸರ

ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಅ​ನ್ನು ಸಚಿವ ಸಂತೋಷ್ ಲಾಡ್ ಖಂಡಿಸಿದ್ದು, ವೈಯಕ್ತಿಕವಾಗಿ ಇದರ ಬಗ್ಗೆ ನನಗೆ ಆಘಾತವಿದೆ ಎಂದಿದ್ದಾರೆ.

MINISTER SANTOSH LAD
ಸಚಿವ ಸಂತೋಷ್ ಲಾಡ್ (ETV Bharat)

By ETV Bharat Karnataka Team

Published : 4 hours ago

ಬೆಳಗಾವಿ:ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್​ಗೆ ಸಚಿವ ಸಂತೋಷ್ ಲಾಡ್​ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವರು ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ಲಾಠಿ ಚಾರ್ಜ್​​​ ಆಗಿರುವಂತಹ ಘಟನೆಯನ್ನು ನಾನು ಖಂಡಿಸುತ್ತೇನೆ. ಸರಿಯೋ, ತಪ್ಪೋ ಎನ್ನುವಂತದ್ದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಿಎಂ ತಪ್ಪಿಗೆ ಕ್ಷಮೆ ಕೇಳುವಂತದ್ದು ಯಾವ ಮಟ್ಟಿಗೆ ಸರಿಯೋ ಎನ್ನುವಂತದ್ದು ನನಗೆ ಅರ್ಥವಾಗುತ್ತಿಲ್ಲ. ಆದರೆ ಶಾಂತಿಯುತವಾಗಿ ಆಗಬೇಕಾದ ಘಟನೆ ಹೀಗೆ ಆಗಿದೆ. ವೈಯಕ್ತಿಕವಾಗಿ ಇದರ ಬಗ್ಗೆ ನನಗೆ ಆಘಾತವಿದೆ. ಆದರೆ ಯಾಕೆ ಆಗಿದೆ, ಏನು ಕಾರಣ ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಬಹಳ ಯೋಚಿಸಿ ಕ್ರಮ ಕೈಗೊಳ್ಳಬೇಕು" ಎಂದು ಅವರು ಇದೇ ವೇಳೆ ಹೇಳಿದರು.

ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ. (ETV Bharat)

ಮುಂದುವರೆದು, "ನಮ್ಮ ಸರ್ಕಾರದಲ್ಲಿ 80 ರಿಂದ 90 ದಿನಗಳ ಕಾಲ ಸದನ ನಡೆಸಿದ್ದೇವೆ. ಬಿಜೆಪಿಯವರು ಎಷ್ಟು ದಿನ ಸದನ ನಡೆಸಿದ್ದಾರೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ನಾವು ಸದನದಲ್ಲಿ ಚರ್ಚೆ ನಡೆಸಲು ಸಿದ್ಧರಿದ್ದಾಗಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಕೇವಲ ಅನಾವಶ್ಯಕ ವಿಚಾರಗಳನ್ನೇ ಚರ್ಚೆಗೆ ತರುತ್ತಿದೆ. ಅಭಿವೃದ್ಧಿ ಬಿಟ್ಟು ಕೇವಲ ಮೈಲೇಜ್​ ನೀಡುವ ವಿಚಾರಗಳನ್ನೇ ಎಳೆದು ತರುತ್ತದೆ" ಎಂದು ಬಿಜೆಪಿ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲರೂ ಒಪ್ಪುವ ರೀತಿಯಲ್ಲಿ ಸರ್ಕಾರ ತೀರ್ಮಾನ ನೀಡಲಿದೆ: ಸಚಿವ ರಾಜಣ್ಣ

ABOUT THE AUTHOR

...view details