ಕರ್ನಾಟಕ

karnataka

ETV Bharat / state

ಸಂಸದ ಅನಂತಕುಮಾರ್ ಹೆಗಡೆ ಮನುಷ್ಯನೇ ಅಲ್ಲ: ಸಚಿವ ಕೆ.ಎನ್.ರಾಜಣ್ಣ - Minister K N Rajanna

ಸಂಸದ ಅನಂತಕುಮಾರ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಪದ ಬಳಕೆ ಮಾಡಿರುವುದಕ್ಕೆ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ​

minister-kn-rajanna
ಸಚಿವ ಕೆ.ಎನ್ ರಾಜಣ್ಣ

By ETV Bharat Karnataka Team

Published : Feb 26, 2024, 4:38 PM IST

ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ

ಹಾಸನ: ಸಂಸದ ಅನಂತಕುಮಾರ್ ಹೆಗಡೆ ಮನುಷ್ಯನೇ ಅಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಗಡೆ ಏಕವಚನದಲ್ಲಿ ಪದ ಬಳಕೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು.

"ಅನಂತಕುಮಾರ್ ಹೆಗಡೆ ಅವರು ಒಬ್ಬ ಸಚಿವರಾಗಿದ್ದವರು. ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ. ಜನ ಅದಕ್ಕೆ ನಮಗೆ ಓಟು ಹಾಕಿರೋದು ಅಂತ ಹೇಳ್ತಾರಲ್ಲ, ಅವರ ತಲೆಯಲ್ಲಿ ಏನಾದರೂ ಬುದ್ದಿ ಇದೆಯಾ?" ಎಂದರು.

"ಮುಂಬರುವ ಲೋಕಸಭೆ ಚುನಾವಣೆಗೆ ಶೀಘ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ನಿನ್ನೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್​ ಸುರ್ಜೇವಾಲ ಅವರ ಮಗನ ಮದುವೆ ಇತ್ತು. ಅವರು ಕಳೆದ ಎರಡು, ಮೂರು ದಿನಗಳಿಂದ ಮದುವೆಯಲ್ಲಿ ಬ್ಯುಸಿ ಇದ್ದರು. ಇವತ್ತು ಬೆಂಗಳೂರಿಗೆ ಬರುತ್ತಾರೆ. ನಾಳೆ ರಾಜ್ಯಸಭಾ ಚುನಾವಣೆಗೆ ಎಲ್ಲಾ ಶಾಸಕರು ಮತದಾನ ಮಾಡಲು ಮನವರಿಕೆ ಮಾಡುತ್ತಾರೆ. ಅವರನ್ನೆಲ್ಲಾ ಒಟ್ಟಾಗಿಡಬೇಕು. ಮೂರು ಜನಕ್ಕೂ ಮತಗಳನ್ನು ಹಂಚಿಕೆ ಮಾಡಬೇಕು. ಪ್ರಕ್ರಿಯೆಯಲ್ಲಿ ಇಂದು ಸಂಜೆ ಸುರ್ಜೇವಾಲ ಪಾಲ್ಗೊಳ್ಳುತ್ತಾರೆ. 27ರಂದು ಮಧ್ಯಾಹ್ನದ ವೇಳೆಗೆ ಚುನಾವಣೆ ಮುಗಿಯುತ್ತದೆ. ಚುನಾವಣೆ ಮುಗಿದ ನಂತರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಗಮನಹರಿಸಿ, ಆದಷ್ಟು ಬೇಗ ಪಟ್ಟಿ ಬಿಡುಗಡೆ ಮಾಡುತ್ತಾರೆ" ಎಂದು ರಾಜಣ್ಣ ಹೇಳಿದರು.

ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಅವರ ಮನಸ್ಸಿನಲ್ಲಿ ಬಂದರೆ ದೇಶದೊಳಗೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅವರೇ ಬಿ ಫಾರಂ ಕೊಡೋರು. ಸ್ಪರ್ಧೆ ಮಾಡೋದು ಅವರಿಗೆ ಬಿಟ್ಟ ವಿಚಾರ. ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ, ನಮ್ಮ ಸ್ವಾಗತವಿದೆ" ಎಂದು ತಿಳಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ವಿಚಾರವಾಗಿ ಮಾತನಾಡುತ್ತಾ, "ಅಡ್ಡ ಮತದಾನ ನಮ್ಮ ಕಡೆಯಿಂದ ಆ ಕಡೆ ಹೋಗಲ್ಲ, ಆ ಕಡೆಯಿಂದ ನಮ್ಮ ಕಡೆ ಬರುತ್ತವೆ. ಅಡ್ಡ ಮತದಾನ ಯಾವತ್ತೂ ಅಧಿಕಾರ ಇರುವ ಕಡೆಯಿಂದ ಅಧಿಕಾರ ಇಲ್ಲದ ಕಡೆ ಹೋಗಲ್ಲ. ಅಧಿಕಾರ ಇಲ್ಲದ ಕಡೆಯಿಂದ ಇರುವ ಕಡೆಗೆ ಬರುತ್ತವೆ. ಯಾವುದೇ ಕಾರಣಕ್ಕೂ ನಮಗೆ ಆತಂಕವಿಲ್ಲ. ಇನ್ನೂ ಹೆಚ್ಚು ಮತ ಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ಸಿಎಂ ಆಗಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, "ರಾಜಕಾರಣದಲ್ಲಿ ಕಾಂಗ್ರೆಸ್ 25 ವರ್ಷ ಇರುತ್ತೆ ಅಂತ ಅವರು ಹೇಳಲು ಆಗುತ್ತದೆಯೇ? ನಾವು ನಿರೀಕ್ಷೆ ಮಾಡಲು ಆಗುತ್ತಾ. ಅವರು ಹೇಳುವ ಹಾಗಿಲ್ಲ. ನಾವು ನಿರೀಕ್ಷೆ ಮಾಡುವ ಹಾಗಿಲ್ಲ. ನಾವು ಇನ್ನೂ 25 ವರ್ಷ ಇರುತ್ತೇವೆ ಎನ್ನುವ ವಿಶ್ವಾಸ ನಮಗಿದೆ" ಎಂದು ಹೇಳಿದರು.

ಇದನ್ನೂ ಓದಿ:ಬಹಳ ಜನ ನನಗೆ ಹಾಸನಕ್ಕೆ ಹೋಗ್ಬೇಡಿ ವಾಮಾಚಾರ ಮಾಡಿಸಿ ಬಿಡ್ತಾರೆ ಅಂದಿದ್ದರು: ಸಚಿವ ರಾಜಣ್ಣ ವ್ಯಂಗ್ಯ

ABOUT THE AUTHOR

...view details