ಕರ್ನಾಟಕ

karnataka

ETV Bharat / state

ಸಚಿವ ಭೈರತಿ ಸುರೇಶ್ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ: ಹೆಚ್.ವಿಶ್ವನಾಥ್‌ - H Vishwanath - H VISHWANATH

ಸಚಿವ ಭೈರತಿ ಸುರೇಶ್ ನನ್ನ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ ಎಂದು ಎಂಎಲ್​ಸಿ ಹೆಚ್.ವಿಶ್ವನಾಥ್‌ ತಿಳಿಸಿದರು.

ಎಂಎಲ್​ಸಿ ಹೆಚ್ ವಿಶ್ವನಾಥ್‌
ಎಂಎಲ್​ಸಿ ಹೆಚ್.ವಿಶ್ವನಾಥ್‌ (ETV Bharat)

By ETV Bharat Karnataka Team

Published : Aug 14, 2024, 6:59 PM IST

Updated : Aug 14, 2024, 7:39 PM IST

ಹೆಚ್.ವಿಶ್ವನಾಥ್‌ (ETV Bharat)

ಮೈಸೂರು:ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ. ಈ ಕುರಿತು ನನಗೆ ನೋಟಿಸ್ ಬಂದಿದೆ. ನಾನೂ ಲಾಯರ್ ಆಗಿದ್ದವ. ಇದಕ್ಕೆಲ್ಲ ಉತ್ತರ ನೀಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್‌ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ತನಿಖೆ ಮಾಡುತ್ತೇವೆ ಎಂದು ಹೇಳಿದರು. ಏನಾಯ್ತು ಈಗ?. ನೀವು ಬಂದು ಹೋದ ಮೇಲೂ ಮುಡಾದಲ್ಲಿ 500 ಸೈಟ್ ಹಂಚಿಕೆ ಮಾಡಲಾಗಿದೆ. ಭೈರತಿ ಸುರೇಶ್‌ 50 ಕೋಟಿ ಕೇಳಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ 62 ಕೋಟಿ ರೂ ಕೇಳುತ್ತಾರೆ. ಇದು ಇವರ ಆಡಳಿತ ಎಂದು ಟೀಕಿಸಿದರು.

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಆ ಕೆಲಸ ಮಾಡುವುದು ಬಿಟ್ಟು, ಚಾಮುಂಡಿ ಬೆಟ್ಟಕ್ಕೆ ಪ್ರಾಧಿಕಾರ ರಚನೆ ಸೇರಿದಂತೆ ಅರಮನೆ ವಿಚಾರಕ್ಕೆ ಮುಖ್ಯಮಂತ್ರಿಗಳು ಹೆಚ್ಚಾಗಿ ತಲೆ ಹಾಕುತ್ತಿದ್ದಾರೆ. ಚಾಮುಂಡಿ ಬೆಟ್ಟ ಈಗ ಹೇಗಿದೆಯೋ ಹಾಗೆಯೇ ಇರಲಿ. ನೀವು ಅಧಿಕಾರಕ್ಕೆ ಬಂದಾಗಲೆಲ್ಲಾ ಅರಮನೆ ವಿಚಾರಕ್ಕೆ ಯಾಕೆ ತಲೆ ಹಾಕುತ್ತೀರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಜನಾಂದೋಲನ, ಮೈತ್ರಿ ಪಕ್ಷದ ಪಾದಯಾತ್ರೆ ಸಮಾವೇಶ ಕುರಿತು ಪ್ರತಿಕ್ರಿಯಿಸಿ, ಸಮಾವೇಶ, ಪಾದಯಾತ್ರೆ ಮೂಲಕ ರಾಜ್ಯದ ಜನತೆಗೆ ಯಾವ ಸಂದೇಶ ನೀಡಿಲ್ಲ. ಸಮಾವೇಶದುದ್ದಕ್ಕೂ ಪರಸ್ಪರ ಬೈದಾಡಿಕೊಂಡಿದ್ದೀರಿ. ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆದರೂ ಜನ ಸಾಮಾನ್ಯರಿಗೆ ಒಂದು ನಿವೇಶನ ಹಂಚಿಕೆ ಮಾಡಲು ಆಗಲಿಲ್ಲ. ಮುಡಾದಲ್ಲಿ 86 ಸಾವಿರ ಜನ ಅರ್ಜಿ ಹಾಕಿದ್ದಾರೆ. ಜನರಿಗೆ ಸೈಟ್‌ ಕೊಡುವುದನ್ನು ಬಿಟ್ಟು, ಸಿದ್ದರಾಮಯ್ಯ ತನ್ನ ಹೆಂಡತಿ ಹೆಸರಿನಲ್ಲಿ ಸೈಟ್‌ ಪಡೆದಿದ್ದಾರೆ. ಹೀಗೆ ಪಡೆದ ಬದಲಿ ನಿವೇಶನಗಳನ್ನು ಮೊದಲು ವಾಪಸ್‌ ನೀಡಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಚಾಮುಂಡಿ ಬೆಟ್ಟದ ದೇವಾಲಯ ಮಹಾರಾಜರಿಗೆ ಸೇರಿದ್ದು: ಶಾಸಕ ಜಿ.ಟಿ.ದೇವೇಗೌಡ - Chamundi Hill Temple Authority

Last Updated : Aug 14, 2024, 7:39 PM IST

ABOUT THE AUTHOR

...view details