ಕರ್ನಾಟಕ

karnataka

ETV Bharat / state

ಮಂಗಳೂರು: ಸಂಚಾರದಲ್ಲಿದ್ದ ರೈಲು ಹತ್ತಲೆತ್ನಿಸಿ ಎಡವಿದ ಯುವಕ, ರಕ್ಷಿಸಿದ ರೈಲ್ವೇ ಪೊಲೀಸ್ - PASSENGER SLIPS - PASSENGER SLIPS

ಮಂಗಳೂರಿನಲ್ಲಿ ಯುವಕನೊಬ್ಬ ಸಂಚಾರದಲ್ಲಿದ್ದ ರೈಲು ಹತ್ತಲೆತ್ನಿಸಿ ಎಡವಿದ್ದನು. ಕೂಡಲೇ ಆತನನ್ನ ರೈಲ್ವೇ ಪೊಲೀಸರೊಬ್ಬರು ರಕ್ಷಿಸಿದರು. ಈ ಘಟನೆ ರೈಲ್ವೇ ಸ್ಟೇಷನ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RAILWAY POLICE  SLIPPED  MOVING TRAIN  MANGALURU
ಮಂಗಳೂರು: ಸಂಚಾರದಲ್ಲಿದ್ದ ರೈಲು ಹತ್ತಲೆತ್ನಿಸಿ ಎಡವಿದ ಯುವಕ (ETV Bharat)

By ETV Bharat Karnataka Team

Published : Aug 20, 2024, 10:49 AM IST

ಮಂಗಳೂರು: ಸಂಚಾರದಲ್ಲಿದ್ದ ರೈಲು ಹತ್ತಲೆತ್ನಿಸಿ ಎಡವಿದ ಯುವಕ (ETV Bharat)

ಮಂಗಳೂರು:ಸಂಚಾರಲ್ಲಿದ್ದ ರೈಲು ಹತ್ತಲು ಯತ್ನಿಸಿ ಎಡವಿ ಬಿದ್ದ ಯುವಕನನ್ನು ರೈಲ್ವೇ ಪೊಲೀಸರೊಬ್ಬರು ರಕ್ಷಿಸಿರುವ ಘಟನೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರೈಲು ಚಲಿಸಲು ಆರಂಭಿಸಿದ ಬಳಿಕ ಅದರ ವೇಗವೂ ಹೆಚ್ಚಿತ್ತು. ಆಗ ಓಡೋಡಿಕೊಂಡು ಬಂದ ಹಾಸನ ಮೂಲದ ಶಶಾಂಕ್ ಎಂಬ ಯುವಕ ರೈಲು ಹತ್ತಲು ಯತ್ನಿಸಿದ್ದಾನೆ. ಆಗ ರೈಲಿನ ಬಾಗಿಲಿನ ಸರಳು ಆತನ ಹಿಡಿತಕ್ಕೆ ಸಿಗದೆ ಎಡವಿ ಬಿದ್ದಿದ್ದಾನೆ‌. ಈ ವೇಳೆ ಆತ ರೈಲು ಹಾಗೂ ಪ್ಲ್ಯಾಟ್‌ಫಾರ್ಮ್​ನಲ್ಲಿ ಎಡವಿ ಬಿದ್ದು ಅಪಾಯಕ್ಕೆ ಸಿಲುಕಿದ್ದನು. ಆಗ ಅಲ್ಲಿಯೇ ಇದ್ದ ರೈಲ್ವೇ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರಾಘವನ್ ಇದನ್ನು ಗಮನಿಸಿದ್ದಾರೆ‌. ತಕ್ಷಣ ಧಾವಿಸಿದ ಅವರು ಯುವಕನನ್ನು ಎಳೆದು ರಕ್ಷಿಸಿದ್ದಾರೆ‌. ಕ್ಷಣ ಮಾತ್ರದಲ್ಲಿ ಈ ಘಟನೆ ನಡೆದುಹೋಗಿದೆ. ಯುವಕ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾನೆ. ಈ ದೃಶ್ಯ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶಶಾಂಕ್ ಅಹ್ಮದಾಬಾದ್​ಗೆ ಹೋಗಲು ಹಾಸನದಿಂದ ಬಸ್‌ನಲ್ಲಿ ಬಂದಿದ್ದ. ಬಸ್ ಬರುವುದು ಕೊಂಚ ತಡವಾಗಿತ್ತು. ಹೀಗಾಗಿ ತಡವಾದ ಕಾರಣ ರೈಲ್ವೆ ನಿಲ್ದಾಣಕ್ಕೆ ಬರುವಾಗ ರೈಲು ಹೊರಟಿತ್ತು. ಹಾಗೆ ತರಾತುರಿಯಲ್ಲಿ ಓಡಿ ಏರುವಾಗ ಆತ ಆಯತಪ್ಪಿ ಬಿದ್ದಿದ್ದಾನೆ. ಜಾರಿ ಬೀಳುವಾಗ ಒಂದು ಕಾಲು ಕೆಳಗೆ ಹೋಗಿದ್ದು, ಬಲಗಾಲು ಪ್ಲಾಟ್‌ಫಾರಂ ಮೇಲೆಯೇ ಇತ್ತು. ರೈಲಿಗೆ ಸಿಲುಕಿಕೊಳ್ಳದ ಕಾರಣ ಆತ ಬಚಾವ್​ ಆಗಿದ್ದಾನೆ. ಬ್ಯಾಗ್ ಭಾರವಿದ್ದ ಕಾರಣ ಆತನಿಗೆ ಮೇಲೇಳಲು ಕಷ್ಟವಾಗುತ್ತಿತ್ತು. ಆಗ ರಾಘವನ್‌ ಸಹಾಯ ಮಾಡಿದ್ದಾರೆ.

ಓದಿ:ಕುಡಿತದಿಂದ ಲಿವರ್ ಫೇಲ್ಯೂರ್ ಆಗಿ ಉದ್ಯೋಗ ತೊರೆದ ಪತಿ; ಸಂಸಾರದಲ್ಲಿ ಬಿರುಕು, ಪತ್ನಿ ಶವ ಬಾತ್ ರೂಮ್​ನಲ್ಲಿ ಪತ್ತೆ - LADY FOUND DEAD IN BENGALURU

ABOUT THE AUTHOR

...view details