ಮಂಗಳೂರು:ಸ್ಮಾರ್ಟ್‌ಸಿಟಿ ರಿವರ್‌ಫ್ರಂಟ್ ಯೋಜನೆಯ ತಡೆಗೋಡೆ ಕುಸಿತದ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಿ, ವಾರದೊಳಗೆ ವರದಿ ಸಲ್ಲಿಸಬೇಕೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗುಂಡೂರಾವ್ ಸೂಚನೆ ನೀಡಿದರು.
ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಡೆಗೋಡೆ ಕುಸಿತದ ವಿರುದ್ಧ ಎಂಎಲ್‌ಸಿ ಐವಾನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಶಾಸಕ ವೇದವ್ಯಾಸ ಕಾಮತ್, ಯೋಜನೆ ಸಾಗುವ ದಾರಿಯಲ್ಲಿ ಬಂದರು ಇಲಾಖೆ ಜಾಗವನ್ನು ಲೀಸ್‌ಗೆ ನೀಡಿದ್ದರು. ಈಗ ಯೋಜನೆಗೆ ನೋಟಿಸ್ ನೀಡಿದರೂ ಅವರು ಜಾಗ ಬಿಟ್ಟುಕೊಡುತ್ತಿಲ್ಲ. ಅವರೇ ಈಗ ಸಿಆರ್‌ಝಡ್ ಹೆಸರಲ್ಲಿ ಕೋರ್ಟ್‌ಗೆ ಹೋಗಿದ್ದಾರೆ ಎಂದರು. ಈ ವೇಳೆ ಬಂದರು ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಗ್ರಾಮೀಣ ವಸತಿ ಯೋಜನೆಯಡಿ ಮಂಜೂರಾಗಿರುವ 2,564 ಮನೆಗಳ ಕಾಮಗಾರಿ 4ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ಸಭೆಯಲ್ಲಿ ಎಂಎಲ್ಎ ಅಶೋಕ್ ರೈ, ಎಂಎಲ್‌ಸಿ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು. ಆಗ ಪ್ರಾಜೆಕ್ಟ್ ಮ್ಯಾನೇಜರ್ ಅದು ಬ್ಲಾಕ್ ಆಗಿದೆ ಎಂದರು. ಸಮಸ್ಯೆಯಿದೆ ಅಂದರೆ ಅದನ್ನು ಪರಿಹಾರ ಕೊಡಬೇಕಾದ ಜವಾಬ್ದಾರಿ ತಮ್ಮ ಮೇಲಿದೆ. ಆದ್ದರಿಂದ ಪ್ರಾಜೆಕ್ಟ್ ಮ್ಯಾನೇಜರ್ ಮೇಲೆ ಆ್ಯಕ್ಷನ್ ತೆಗೆದುಕೊಳ್ಳಲು ಇಲಾಖೆಯ ಮೇಲಾಧಿಕಾರಿಗೆ ಸೂಚನೆ ನೀಡಿ ಎಂದು ಉಸ್ತುವಾರಿ ಸಚಿವರು ಡಿಸಿಯವರಿಗೆ ಹೇಳಿದರು.