ಕರ್ನಾಟಕ

karnataka

ETV Bharat / state

ಮಸಾಜ್ ಪಾರ್ಲರ್ ಮೇಲೆ ದಾಳಿ ಪ್ರಕರಣ; ಪ್ರಸಾದ್ ಅತ್ತಾವರ ಸೇರಿ 11 ಮಂದಿಗೆ ಷರತ್ತುಬದ್ಧ ಜಾಮೀನು - MANGALORE MASSAGE PARLOUR ATTACK

ಮಸಾಜ್ ಪಾರ್ಲರ್​ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಗುಂಪೊಂದು ದಾಳಿ ನಡೆಸಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲವರನ್ನು ಬಂಧಿಸಿದ್ದರು.

mangalore-massage-parlour-attack-case-accused-gets-bail
ಪಾರ್ಲರ್​ ಮೇಲೆ ದಾಳಿ ಚಿತ್ರ (ಈಟಿವಿ ಭಾರತ್​)

By ETV Bharat Karnataka Team

Published : Feb 6, 2025, 10:25 AM IST

ಮಂಗಳೂರು:ಮಸಾಜ್​ ಪಾರ್ಲರ್​ ಮೇಲಿನ ದಾಳಿ ಪ್ರಕರಣದಲ್ಲಿ ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ರಾಮಸೇನಾ ಕರ್ನಾಟಕ ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿದಂತೆ 11 ಮಂದಿಗೆ ಜಾಮೀನು ಸಿಕ್ಕಿದೆ.

ಏನಿದು ಪ್ರಕರಣ?: ಜ.23‌ರಂದು ಮಂಗಳೂರಿನ ಬಿಜೈನಲ್ಲಿರುವ ಮಸಾಜ್ ಪಾರ್ಲರ್​ನಲ್ಲಿ ಅನೈತಿಕ ಚಟುವಟಿಕೆ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿ, ರಾಮಸೇನಾ ಸಂಘಟನೆಯ ಕಾರ್ಯಕರ್ತರು ದಾಳಿ‌ ನಡೆಸಿದ್ದರು. ಈ ಬಗ್ಗೆ ಮಸಾಜ್ ಪಾರ್ಲರ್ ಮಾಲೀಕರು ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು‌. ದಾಳಿಯ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರ ಸೇರಿದಂತೆ 14 ಮಂದಿಯನ್ನು ಬರ್ಕೆ ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಬಂಧಿತರಿಗೆ ಮಂಗಳೂರು 6ನೇ ಜೆಎಂಎಫ್ ಸಿ ನ್ಯಾಯಾಲಯ ಫೆ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಆರೋಪಿಗಳ ಪರ ವಕೀಲರು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು‌ ಅರ್ಜಿ ಸಲ್ಲಿಸಿದ್ದರು. 14ಮಂದಿ ಆರೋಪಿಗಳಲ್ಲಿ ಜಾಮೀನು‌ ಅರ್ಜಿ ಸಲ್ಲಿಸದ ಮೂರು ಮಂದಿ‌ ಆರೋಪಿಗಳನ್ನು ಹೊರತುಪಡಿಸಿ ನ್ಯಾಯಾಲಯವು 11 ಮಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ:ಮಂಗಳೂರು: ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿ - ಪೀಠೋಪಕರಣ, ಗಾಜುಗಳು ಧ್ವಂಸ

ಇದನ್ನೂ ಓದಿ:BMTC ಡಿಜಿಟಲ್​ ಮೈಲಿಗಲ್ಲು: ಒಂದೇ ದಿನ UPI ಮೂಲಕ ಒಂದು ಕೋಟಿ ಆದಾಯ

ABOUT THE AUTHOR

...view details