ಕರ್ನಾಟಕ

karnataka

ETV Bharat / state

500 ರೂ ಮುಖಬೆಲೆಯ ಜೆರಾಕ್ಸ್​​ ನೋಟಿನ ಮಧ್ಯೆ ರದ್ದಿ ಪೇಪರ್​: ಲಿಂಗಸೂಗೂರಿನಲ್ಲಿ ಆರೋಪಿ ಬಂಧನ - fake currency - FAKE CURRENCY

ಟ್ರಂಕ್​ನಲ್ಲಿ 500 ರೂ. ಮುಖ ಬೆಲೆಯ 62 ನಕಲಿ ನೋಟಿನ ಬಂಡಲ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

man-from-raichur-lingasur-arrested-with-xerox-note-bundle
man-from-raichur-lingasur-arrested-with-xerox-note-bundle

By ETV Bharat Karnataka Team

Published : Apr 26, 2024, 12:51 PM IST

Updated : Apr 26, 2024, 1:21 PM IST

ರಾಯಚೂರು:ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಖೋಟಾ ನೋಟಿನ ಸದ್ದು ಜೋರಾಗಿದ್ದು, ಈ ರೀತಿ ಪ್ರಕರಣವೊಂದು ಲಿಂಗಸುಗೂರಿನ ಗೌಳಿಪುರದಲ್ಲಿ ಪತ್ತೆಯಾಗಿದೆ. ರದ್ದಿ ಪೇಪರ್​ ನಡುವಲ್ಲಿಟ್ಟು 500ರೂ ಮುಖಬೆಲೆಯ ಜೆರಾಕ್ಸ್​​ ನೋಟನ್ನು ಮೇಲೆ ಮತ್ತು ಕೆಳಗೆ ಇಟ್ಟಿರುವ 62 ಬಂಡಲ್​ ಪತ್ತೆಯಾಗಿದೆ.

ಪ್ರಕರಣದ ಎಫ್​ಐಆರ್​ ಕಾಪಿ

ಏನಿದು ಪ್ರಕರಣ?: ಗೌಳಿಪುರದ ನಿವಾಸ ಚೋಟುಸಾಬಾ ಅಲಿಯಾಸ್ ಶೆಟ್ಟಿ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಮಾಹಿತಿ ಮೇರೆಗೆ ಆತನ ಮನೆ ಶೋಧ ನಡೆಸಿದ್ದಾರೆ. ಈ ವೇಳೆ, ಮನೆಯನ್ನು ಸಂಪೂರ್ಣವಾಗಿ ಶೋಧಿಸಿದಾಗ ಮನೆಯಲ್ಲಿ ಮದ್ಯ ಇನ್ನಿತರ ವಸ್ತುಗಳು ಲಭ್ಯವಾಗಿಲ್ಲ. ಬದಲಾಗಿ ಅಡುಗೆ ಕೋಣೆಯಲ್ಲಿ ಕಬ್ಬಿಣದ ಟ್ರಂಕ್​ನಲ್ಲಿ ಈ ಖೋಟಾ ನೋಟು ಪತ್ತೆಯಾಗಿದೆ.

ಟ್ರಂಕ್​ನಲ್ಲಿ 500 ರೂ ಮುಖ ಬೆಲೆಯ ನಕಲಿ ನೋಟಿನ ಬಂಡಲ್​ಗಳು ಕಂಡು ಬಂದಿದೆ. ಇದನ್ನು ಪರಿಶೀಲಿಸಿದಾಗ ಬಂಡಲ್​ನ ಮೇಲ್ಬಾಗ ಮತ್ತು ಕೆಳಭಾಗದಲ್ಲಿ 500 ರೂ ಮುಖಬೆಲೆಯ ನಕಲಿ ನೋಟಿನ ಮಧ್ಯೆ ರದ್ದಿ ಪೇಪರ್​ ಇರಿಸಲಾಗಿದೆ. ಜನರಿಗೆ ವಂಚನೆ ಮಾಡಿ, ಖೋಟಾ ನೋಟು ಚಲಾವಣೆ ಮಾಡುವ ಉದ್ದೇಶವನ್ನು ಆರೋಪಿ ಹೊಂದಿರುವ ಅನುಮಾನ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಆರೋಪಿ ಮತ್ತು ನಕಲಿ ನೋಟಿನ ಬಂಡಲ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿಯಲ್ಲೂ ಪತ್ತೆಯಾಗಿತ್ತು ಜಾಲ:ಬಳ್ಳಾರಿಯಲ್ಲೂ ಕೂಡ ಆರೋಪಿಗಳಿಬ್ಬರು ಕೋಲಾಚಲಂ ಕಾಂಪೌಂಡ್​​ನಲ್ಲಿರುವ ಮೋಹನ್ ಲಾಡ್ಜ್​ನಲ್ಲಿ ಖೋಟಾ ನೋಟು ಪ್ರಿಂಟ್​ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದರು. ಖೋಟಾ ನೋಟುಗಳನ್ನು ತಯಾರು ಮಾಡಲು ಬಳಸುತ್ತಿದ್ದ ಕಲರ್ ಝರಾಕ್ಸ್ ಪ್ರಿಂಟರ್​ ಅನ್ನು ಬಳಕೆ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು: ನಕಲಿ ನೋಟು ನೀಡಿ ಚಾಲಕನಿಗೆ ವಂಚಿಸಿದ್ದ ವೈದ್ಯ ಅರೆಸ್ಟ್

Last Updated : Apr 26, 2024, 1:21 PM IST

ABOUT THE AUTHOR

...view details