ಸಕಲೇಶಪುರ(ಹಾಸನ): ತೆಂಗಿನ ಮರದ ಸುಳಿ ಕಡಿಯಲು ಮರ ಏರಿದ್ದ ವ್ಯಕ್ತಿ ಪ್ರಖರ ಬಿಸಿಲಿನ ಕಾರಣದಿಂದಾಗಿ ಪ್ರಜ್ಞೆ ತಪ್ಪಿ ಅಲ್ಲೇ ಸಿಲುಕಿದ ಘಟನೆ ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ನಿವಾಸಿ ನವೀನ್ ಸಾವಿನ ದವಡೆಯಿಂದ ಪಾರಾಗಿ ಬಂದವರು.
ಸಕಲೇಶಪುರ: ಪ್ರಖರ ಬಿಸಿಲಿಗೆ ತೆಂಗಿನ ಮರದಲ್ಲೇ ಪ್ರಜ್ಞೆತಪ್ಪಿದ ವ್ಯಕ್ತಿ! - man fainted in a coconut tree
ತೆಂಗಿನ ಮರ ಏರಿದ್ದ ವ್ಯಕ್ತಿ ಪ್ರಖರ ಬಿಸಿಲಿನ ಕಾರಣದಿಂದಾಗಿ ಪ್ರಜ್ಞೆ ತಪ್ಪಿ ಅಲ್ಲೇ ಸಿಲುಕಿ ನೇತಾಡುತ್ತಿದ್ದ ಘಟನೆ ಸಕಲೇಶಪುರದಲ್ಲಿ ನಡೆದಿದೆ.
Published : Apr 9, 2024, 4:49 PM IST
ಮರದ ಸುಳಿ ಕತ್ತರಿಸುವ ವೇಳೆ ನವೀನ್ಗೆ ತಲೆ ಸುತ್ತು ಹಾಗೂ ಎಡಗೈ ನೋವು ಕಾಣಿಸಿಕೊಂಡಿದೆ. ತೆಂಗಿನ ಮರದಿಂದ ಕೆಳಗೆ ಇಳಿಯಲಾಗದೇ ಮರದ ಮೇಲೆಯೇ ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎತ್ತರದ ಮರದ ಮೇಲೆ ನೇತಾಡುತ್ತಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ಮೂರು ದಿನ ಬಿಸಿಗಾಳಿ: ಹವಾಮಾನ ಇಲಾಖೆ - Heatwave