ಬೆಂಗಳೂರು:ಹೊಟೇಲ್‌ನ 19ನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಇಂದು ನಡೆದಿದೆ. ಮೃತನನ್ನು ತಮಿಳುನಾಡು ಮೂಲದ ಶರಣ್ (28) ಎಂದು ಗುರುತಿಲಾಗಿದೆ. ಇವರು ವಾಣಿಜ್ಯ ವ್ಯವಹಾರ ಉದ್ದೇಶಕ್ಕಾಗಿ ಶನಿವಾರ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಮಧ್ಯಾಹ್ನ 2:15ರ ಸುಮಾರಿಗೆ 19ನೇ ಮಹಡಿಗೆ ತೆರಳಿದ್ದ ಶರಣ್ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದನ್ನು ಸಾರ್ವಜನಿಕರು ಗಮನಿಸಿದ್ದರು. ತಕ್ಷಣ ಹೋಟೆಲ್‌ನ ಭದ್ರತಾ ಸಿಬ್ಬಂದಿಯ ಗಮನಕ್ಕೂ ತಂದಿದ್ದರು. ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.