ಬೆಂಗಳೂರು: ಇದು ಪ್ರಜಾಪ್ರಭುತ್ವದ ಕೊನೆ ಚುನಾವಣೆಯಂತೆ ನನಗೆ ಕಾಣುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, "ಮೋದಿ ಪ್ರಜಾಪ್ರಭುತ್ವ ಕೊನೆಗಾಣಿಸಬೇಕು ಅಂತ ಬಯಸುತ್ತಾರೆ. ಇದೇ ಪ್ರಜಾಪ್ರಭುತ್ವದ ಕೊನೆಯ ಚುನಾವಣೆ. ಮಾತು, ವರ್ತನೆಯಿಂದ ಜನರ ನಡುವೆ ಬೇಧ ಮೂಡಿಸಲು ಅವರು ಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದರು.
"ಮೋದಿ ಕಲಬುರಗಿಯಿಂದ ಪ್ರಚಾರ ಪ್ರಾರಂಭ ಮಾಡಿದ್ದಾರೆ. ಪ್ರತೀ ರಾಜ್ಯಕ್ಕೆ ಹೋಗಿ ಇದನ್ನೇ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನೋಡಿದರೆ ಡೆಮಾಕ್ರಸಿಯ ಲಾಸ್ಟ್ ಇಲೆಕ್ಷನ್ ಇದು ಎಂಬಂತೆ ಕಾಣುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
"ನ್ಯಾಯ ಯಾತ್ರೆಯ ಸಮಾರೋಪದಲ್ಲಿ ಎಲ್ಲ ನಾಯಕರು ಭಾಗಿಯಾಗುತ್ತಿದ್ದಾರೆ. ಎಲ್ಲ ಪಕ್ಷದ ನಾಯಕರಿಗೂ ಆಹ್ವಾನ ನೀಡಿದ್ದೇವೆ. ಇಂಡಿಯಾ ಒಕ್ಕೂಟ ಬಲಿಷ್ಠವಾಗಿದೆ ಎಂದು ಸಂದೇಶ ರವಾನಿಸುತ್ತೇವೆ" ಎಂದರು.