ಕರ್ನಾಟಕ

karnataka

ETV Bharat / state

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಿಂದ ದಿಗ್ಭ್ರಮೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಪರಿಷತ್ ಸದಸ್ಯ ಎ.ವಸಂತಕುಮಾರ್ - Valmiki Nigama Scam - VALMIKI NIGAMA SCAM

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಕುರಿತು ವಿಧಾನ ಪರಿಷತ್ ನೂತನ ಸದಸ್ಯ ಎ.ವಸಂತಕುಮಾರ್ ಪ್ರತಿಕ್ರಿಯಿಸಿದರು.

mlc-a-vasanthakumar
ಪರಿಷತ್ ಕಾಂಗ್ರೆಸ್‌ ಸದಸ್ಯ ಎ.ವಸಂತಕುಮಾರ್ (ETV Bharat)

By ETV Bharat Karnataka Team

Published : Jun 11, 2024, 4:00 PM IST

ನೂತನ ಪರಿಷತ್ ಸದಸ್ಯ ಎ.ವಸಂತಕುಮಾರ್ ಪ್ರತಿಕ್ರಿಯೆ (ETV Bharat)

ರಾಯಚೂರು:ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ದಿಗ್ಭ್ರಮೆ ಉಂಟುಮಾಡಿದೆ ಎಂದು ವಿಧಾನ ಪರಿಷತ್‌ನ ನೂತನ ಕಾಂಗ್ರೆಸ್‌ ಸದಸ್ಯ ಎ.ವಸಂತಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರವಾಗಿ ಕೆಲಸ ಮಾಡಲು ಮೀಸಲಿಟ್ಟ ಹಣ ಅದು. ಅಧಿಕಾರಿಗಳು ‌ಲೂಟಿ ಮಾಡಿ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಇಷ್ಟು ದೊಡ್ಡ ಹಗರಣವನ್ನು ‌ನಾವು ಯಾರೂ ಒಪ್ಪುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದರು.

'10 ಕೋಟಿಗೂ ಹೆಚ್ಚು ಹಗರಣ ನಡೆದರೆ ಸಿಬಿಐ ತನಿಖೆ': ಈಗಾಗಲೇ ರಾಜ್ಯ ಸರ್ಕಾರ ತನಿಖೆಯನ್ನು ಎಸ್​ಐಟಿಗೆ ವಹಿಸಿದೆ. 10 ಕೋಟಿಗೂ ಅಧಿಕ ಹಣ ವರ್ಗಾವಣೆ ಆಗಿದ್ದರೆ ಸಿಬಿಐ ತನಿಖೆ ಆಗಬೇಕು ಎಂಬ ನಿಯಮವಿದೆ. ಹೀಗಾಗಿ ಪ್ರಕರಣ ಸಿಬಿಐ ತನಿಖೆಗೆ ಒಳಪಟ್ಟಿದೆ. ಎಸ್​ಐಟಿ ಮತ್ತು ಸಿಬಿಐ ಆಳವಾಗಿ ತನಿಖೆ ‌ನಡೆಸುತ್ತಿವೆ. ಈಗಾಗಲೇ 8 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

'ನಮ್ಮ ಭಾಗದ ನಾಯಕರ ಪಾತ್ರವಿಲ್ಲ': ತನಿಖೆ ನಡೆಯುತ್ತಿರುವಾಗ ಊಹಾಪೋಹದ ಹೆಸರು ಹೇಳುವುದು ಸರಿಯಲ್ಲ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಮ್ಮ ಭಾಗದ ನಾಯಕರ ಪಾತ್ರವಿಲ್ಲ. ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಸಚಿವ ಡಾ.ಶರಣಪ್ರಕಾಶ್ ‌ಪಾಟೀಲ್, ಸಚಿವ ಎನ್.ಎಸ್.ಬೋಸರಾಜು ಇವರು ಯಾರೂ ಕೂಡ ಈ ಹಗರಣದಲ್ಲಿ ಭಾಗಿಯಾಗಿಲ್ಲ. ವಿರೋಧ ಪಕ್ಷದವರು ಟೀಕೆ ‌ಮಾಡಬೇಕು ಎಂಬ ಕಾರಣದಿಂದ ಟೀಕಿಸುತ್ತಿದ್ದಾರೆ ಎಂದರು.

'ಡಾ.ಶರಣಪ್ರಕಾಶ್ ಪಾಟೀಲ್ ಶುದ್ಧಹಸ್ತರು': ವಿನಾಕಾರಣ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರ ಹೆಸರು ಲೇಪನವಾಗುತ್ತಿದೆ. ಸಾಕ್ಷ್ಯಾಧಾರಗಳಿದ್ದಾಗ ಮಾತ್ರ ಇಂತಹ ಹೇಳಿಕೆಗಳನ್ನು ಕೊಡಬೇಕು. ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಶುದ್ಧಹಸ್ತರು. ಡಾ.ಶರಣಪ್ರಕಾಶ್ ಪಾಟೀಲ್ ಬೇರೆಯವರಿಂದ ಒಂದು ಚಹಾ ಸಹ ಕುಡಿಯಲ್ಲ. ಈ ಮೂವರ ಹೆಸರು ಕೇಳಿಬಂದಿದ್ದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವಕಾಶಗಳಿಂದ ವಂಚಿತವಾಗುತ್ತಿದ್ದಾರೆ ಎನ್ನುವ ಮಾತುಗಳಿದ್ದವು. ಇದನ್ನು ಮನಗಂಡ ನಮ್ಮ ಪಕ್ಷದ ವರಿಷ್ಠರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯನವರು ಸೇರಿದಂತೆ ಎಲ್ಲಾರೂ ಈ ಭಾಗದ ತಳಮಟ್ಟದಿಂದ ಬೆಳೆದು ಬಂದು ಕಾರ್ಯಕರ್ತರನ್ನು ಗುರುತಿಸಿ ನನಗೆ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ನನ್ನ ಕಚೇರಿಯಲ್ಲಿ ಸಭೆ ಆಗಿದ್ರೆ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರ ಬರಲಿದೆ: ಸಚಿವ ಶರಣ ಪ್ರಕಾಶ್ ಪಾಟೀಲ - Minister Sharan Prakash Patil

ABOUT THE AUTHOR

...view details