ಕರ್ನಾಟಕ

karnataka

By ETV Bharat Karnataka Team

Published : 14 hours ago

ETV Bharat / state

ಮಹಾಲಕ್ಷ್ಮಿ ಕೊಲೆ ಪ್ರಕರಣ: ಅಬೈಟೆಡ್ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದೇಕೆ? - Bengaluru Murder Case

ಮಹಾಲಕ್ಷ್ಮಿ ಕೊಲೆ ಪ್ರಕರಣದ ಆರೋಪಿ ಮುಕ್ತಿರಂಜನ್ ಪ್ರತಾಪ್ ರಾಯ್ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಅಬೈಟೆಡ್ ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

BENGALURU MURDER CASE
ಮೃತ ಮಹಿಳೆ ಮಹಾಲಕ್ಷ್ಮಿ (ETV Bharat)

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಒಂಟಿ ಮಹಿಳೆ ಮಹಾಲಕ್ಷ್ಮಿ ಕೊಲೆ ಪ್ರಕರಣದ ಹಂತಕ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ''ಅಬೈಟೆಡ್ ಚಾರ್ಜ್ ಶೀಟ್'' ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಪ್ರಕರಣ ತನಿಖಾ ಹಂತದಲ್ಲಿರುವಾಗ ಆರೋಪಿ ಮೃತನಾದರೆ ಪ್ರಕರಣ ತಾರ್ಕಿಕ ಅಂತ್ಯಗೊಳಿಸಲು ನ್ಯಾಯಾಲಯಕ್ಕೆ ಸಲ್ಲಿಸುವುದೇ ''ಅಬೈಟೆಡ್ ಚಾರ್ಜ್ ಶೀಟ್'' ಆಗಿದೆ.

ಬಂಧನ ಭೀತಿಯಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಒಡಿಶಾ ಮೂಲದ ಮುಕ್ತಿರಂಜನ್ ಪ್ರತಾಪ್ ರಾಯ್ ಬಂಧಿಸಲು ನಗರ ಪೊಲೀಸರು ಆತನ ತವರೂರಿಗೆ ತೆರಳಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ಮಧ್ಯೆ ಬುಧವಾರ ಬೆಳಗ್ಗೆ ಭದ್ರಕ್ ಜಿಲ್ಲೆಯ ಭೂನಿಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಆರೋಪಿಯ ಶವ ಪತ್ತೆಯಾಗಿತ್ತು. ಸದ್ಯ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿರುವ ಪೊಲೀಸರು, ಮೃತನ ರಕ್ತದ ಮಾದರಿ ಹಾಗೂ ಫಿಂಗರ್ ಪ್ರಿಂಟ್ಸ್ ಸ್ಯಾಂಪಲ್​ಗಳನ್ನ ತೆಗೆದುಕೊಂಡಿದ್ದಾರೆ.

''ಅಬೈಟೆಡ್ ಚಾರ್ಜ್ ಶೀಟ್'' ಸಲ್ಲಿಕೆ ಮಾಡುವ ಮೊದಲು ಪ್ರಕರಣ ಸಂಬಂಧ ಎಲ್ಲಾ ರೀತಿಯ ಸಾಕ್ಷ್ಯಗಳನ್ನ ಪೊಲೀಸರು ಕಲೆಹಾಕಲಿದ್ದಾರೆ. ಇದಕ್ಕೂ ಮುನ್ನ ಒಡಿಶಾದ ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಆರೋಪಿ ಮೊಬೈಲ್ ವಶಕ್ಕೆ ಪಡೆದು ಎಫ್​ಎಸ್​ಎಲ್​ (ವಿಧಿ ವಿಜ್ಞಾನ ಪ್ರಯೋಗಾಲಯ)ಗೆ ರವಾನಿಸಬೇಕಿದೆ. ಅಲ್ಲದೇ ಕೃತ್ಯದ ಸ್ಥಳದಲ್ಲಿ ಪತ್ತೆಯಾದ ರಕ್ತದ ಮಾದರಿಯನ್ನು ಲುಮಿನಾರ್ ಟೆಸ್ಟ್ ಕಳುಹಿಸಲಿದ್ದಾರೆ. ಆರೋಪಿ ಸಹೋದರನ 164 ಹೇಳಿಕೆ ಹಾಗೂ ಸಾಂದರ್ಭಿಕ ಸಾಕ್ಷ್ಯಗಳ ಹೇಳಿಕೆ ಎಲ್ಲವನ್ನು ''ಅಬೈಟೆಡ್ ಚಾರ್ಜ್ ಶೀಟ್​​''ನಲ್ಲಿ ಉಲ್ಲೇಖಿಸಲಾಗುತ್ತದೆ. ಕೃತ್ಯದ ನಂತರ ಮೃತದೇಹ ತುಂಡರಿಸಿ ಪರಾರಿಯಾಗುವ ವೇಳೆ ಯಾರಾದರೂ ಆರೋಪಿಗೆ ಸಹಕರಿಸಿರುವುದು ಕಂಡುಬಂದರೆ ಅವರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಪೊಲೀಸರಿಗೆ ಸಿಗುವ ಮುನ್ನವೆ ಆರೋಪಿಯ ಆತ್ಮಹತ್ಯೆ: ಸವಾಲಾದ ಮಹಾಲಕ್ಷ್ಮಿ ಹತ್ಯೆ ಪ್ರಕರಣ - Mahalakshmi murder case

ABOUT THE AUTHOR

...view details