ಕರ್ನಾಟಕ

karnataka

ETV Bharat / state

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಹೆಡ್​ ಕಾನ್​ಸ್ಟೇಬಲ್.. - ಲೋಕಾಯುಕ್ತ

ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೇಬಲ್​ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕರ್ನಾಟಕ ಲೋಕಾಯುಕ್ತ
ಕರ್ನಾಟಕ ಲೋಕಾಯುಕ್ತ

By ETV Bharat Karnataka Team

Published : Feb 4, 2024, 3:19 PM IST

ದಾವಣಗೆರೆ :ಹೆಡ್​ಕಾನ್​ಸ್ಟೇಬಲ್ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೇಬಲ್​ ಹೊನ್ನೂರಸ್ವಾಮಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದವರು.

ಹೊನ್ನೂರಸ್ವಾಮಿ ಜನವರಿ 31ರಂದು ಅಪಘಾತವಾಗಿದ್ದ ದ್ವಿಚಕ್ರ ವಾಹನವನ್ನು ಮಾಯಕೊಂಡ ಠಾಣೆಗೆ ತಂದಿದ್ದರು.‌ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ ಎನ್ನುವರಿಗೆ ಸೇರಿದ ದ್ವಿಚಕ್ರ ವಾಹನ ಇದಾಗಿತ್ತು. ಅಪಘಾತವಾಗಿದ್ದ ಬೈಕ್ ಬಿಡಲು ಆರು ಸಾವಿರ ರೂಪಾಯಿ ಲಂಚ ನೀಡುವಂತೆ ಕಾನ್​ಸ್ಟೇಬಲ್ ಹೊನ್ನೂರಸ್ವಾಮಿ ಅವರು ಬೇಡಿಕೆ ಇಟ್ಟಿದ್ದರು.

ಮುಂಗಡವಾಗಿ 1 ಸಾವಿರ ಪಡೆದಿದ್ದ ಹೊನ್ನೂರುಸ್ವಾಮಿ ಉಳಿದ 5 ಸಾವಿರ ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಲೆ ಹಾಕಿದ್ದಾರೆ. ಲೋಕಾಯುಕ್ತ ಎಸ್​ಪಿ ಎಂಎಸ್ ಕೌಲಾಪೂರೆ ಮಾರ್ಗದರ್ಶನಲ್ಲಿ, ಇನ್​ಸ್ಪೆಕ್ಟರ್ ಹೆಚ್ ಎಸ್ ರಾಷ್ಟ್ರಪತಿ, ಪ್ರಭು, ಮಧುಸೂಧನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕಾನ್​ಸ್ಟೇಬಲ್ ಹೊನ್ನೂರುಸ್ವಾಮಿ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಲೋಕಾಯುಕ್ತ ದಾಳಿ, ಬಿಇಒ ಕಚೇರಿ ಸಿಬ್ಬಂದಿ ವಶಕ್ಕೆ

ABOUT THE AUTHOR

...view details