ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆ: ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ, ನಗರ ಪೊಲೀಸ್ ಆಯುಕ್ತರಿಂದ ಪೂರ್ವಸಿದ್ಧತಾ ಸಭೆ - Lok Sabha Election 2024 - LOK SABHA ELECTION 2024

ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಂದ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತಾ ಸಭೆ ಇಂದು (ಮಂಗಳವಾರ) ನಡೆಯಿತು.

Election Pre preparatory meeting  Bengaluru  District Election Officer  City Police Commissioner
ಲೋಕಸಭಾ ಚುನಾವಣೆ: ಜಿಲ್ಲಾ ಚುನಾವಣಾಧಿಕಾರಿ, ನಗರ ಪೊಲೀಸ್ ಆಯುಕ್ತರಿಂದ ಪೂರ್ವ ಸಿದ್ಧತಾ ಸಭೆ

By ETV Bharat Karnataka Team

Published : Apr 23, 2024, 1:37 PM IST

ಬೆಂಗಳೂರು:2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ಪೂರ್ವಸಿದ್ಧತಾ ಸಭೆ ನಡೆಸಲಾಗಿದೆ. ವೈಯಾಲಿಕಾವಲ್​ನಲ್ಲಿರುವ ಪಾಲಿಕೆ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಬೆಂಗಳೂರ ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳ ಮೇಲ್ವಿಚಾರಕರು ಭಾಗಿಯಾಗಿದ್ದಾರೆ.

ಬೆಂಗಳೂರಿನ ಲೋಕಸಭಾ ಕ್ಷೇತ್ರಗಳ ವಿವರ:

  • ಲೋಕಸಭಾ ಕ್ಷೇತ್ರಗಳು - 5
  • ಒಟ್ಟು ಮತಗಟ್ಟೆಗಳು‌ - 8088
  • ಸಾಮಾನ್ಯ ಮತಗಟ್ಟೆಗಳು - 6351
  • ಸೂಕ್ಷ್ಮ ಮತಗಟ್ಟೆಗಳು - 1737
  • ಮತಗಟ್ಟೆ ಕೇಂದ್ರಗಳು - 2564

ಚುನಾವಣಾ ಕರ್ತವ್ಯಗಳಿಗಾಗಿ ಬೆಂಗಳೂರು ನಗರ ಪೊಲೀಸ್ ಘಟಕದಿಂದ ಒಟ್ಟು 9,397 ಅಧಿಕಾರಿ ಹಾಗೂ ಸಿಬ್ಬಂದಿ, 3919 ಗೃಹ ರಕ್ಷಕ ಸಿಬ್ಬಂದಿ, 54 ಸಶಸ್ತ್ರ ತುಕಡಿಗಳು ಹಾಗೂ 11 ಕೇಂದ್ರಿಯ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಘಟಕದಿಂದ ಸಿಬ್ಬಂದಿ ನಿಯೋಜನೆ:

  • ನಗರ ಪೊಲೀಸ್ ಆಯುಕ್ತರು - 1
  • ಹೆಚ್ಚುವರಿ ಪೊಲೀಸ್ ಆಯುಕ್ತರು - 3
  • ಜಂಟಿ ಪೊಲೀಸ್ ಆಯುಕ್ತರು - 1
  • ಡಿಸಿಪಿಗಳು - 24
  • ಎಸಿಪಿಗಳು - 52
  • ಇನ್ಸ್‌ಪೆಕ್ಟರ್ಸ್ - 118
  • ಪಿಎಸ್ಐ / ಎಎಸ್ಐ - 687
  • ಹೆಡ್ ಕಾನ್ಸ್ ಟೇಬಲ್ಸ್ / ಕಾನ್ಸ್ಟೇಬಲ್ಸ್ - 8511
  • ಹೋಮ್ ಗಾರ್ಡ್ಸ್ - 3919
  • ಕೇಂದ್ರೀಯ ಪೊಲೀಸ್ ಪಡೆ - 11
  • ಕೆಎಸ್ಆರ್​ಪಿ / ಸಿಎಆರ್ ತುಕಡಿಗಳು - 54

103 ಚೆಕ್ ಪೋಸ್ಟ್‌, 91 ಫ್ಲೈಯಿಂಗ್ ಸ್ಕ್ವಾಡ್​:ಬೆಂಗಳೂರಿನ 8 ವಿಭಾಗಗಳ ವ್ಯಾಪ್ತಿಯಲ್ಲಿ 103 ಚೆಕ್ ಪೋಸ್ಟ್‌ಗಳನ್ನು ಅಳವಡಿಸಲಾಗಿದ್ದು 91 ಫ್ಲೈಯಿಂಗ್ ಸ್ಕ್ವಾಡ್​ಗಳು ಈಗಾಗಲೇ ಕಾರ್ಯಾಚರಣೆಯಲ್ಲಿದ್ದಾರೆ. ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ಮುಕ್ತವಾಗಿ ಜರುಗಿಸುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ 48 ಗಂಟೆಗಳಿಗೂ ಮುನ್ನ ಅಂದರೆ, ಏಪ್ರಿಲ್ 24ರ ಸಂಜೆ 6 ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆಯವರೆಗೆ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮದ್ಯ, ನಶೆಯುಳ್ಳ ಪದಾರ್ಥಗಳು ಹಾಗೂ ಇತರೆ ಯಾವುದೇ ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಸಂಗ್ರಹಣೆಯ ನಿಷೇಧದ ಜೊತೆಗೆ ಮದ್ಯದ ಅಂಗಡಿಗಳು, ವೈನ್ ಶಾಪ್ಸ್, ಬಾರ್ ಹೋಟೆಲ್ಸ್, ರೆಸ್ಟೋರೆಂಟ್ಸ್, ಶಾಪ್ಸ್ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡದಿರಲು ನಿಷೇಧಾಜ್ಞೆ ವಿಧಿಸಲಾಗಿದೆ.

ಅಲ್ಲದೆ, ನಗರ ವ್ಯಾಪ್ತಿಯಲ್ಲಿ ಬರುವ ರೌಡಿಶೀಟರ್​ಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಗುರುತಿಸಿ ಒಟ್ಟು 5,117 ಜನರಿಂದ ಭದ್ರತಾ ಕಾಯ್ದೆ ಅಡಿಯಲ್ಲಿ ಮುಚ್ಚಳಿಕೆ ಪಡೆಯಲಾಗಿದೆ. 7,533 ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಜಮಾ ಮಾಡಿಸಿಕೊಳ್ಳಲಾಗಿದೆ. ಸಾರ್ವಜನಿಕರು ಪೊಲೀಸ್ ಸಹಾಯಕ್ಕಾಗಿ ಅಥವಾ ಚುನಾವಣಾ ಅಕ್ರಮಗಳ ಮಾಹಿತಿ ನೀಡಲು ಪೊಲೀಸ್ ಸಹಾಯವಾಣಿ 112 ಸಂಪರ್ಕಿಸಲು ಸೂಚಿಸಲಾಗಿದೆ.

ಇದನ್ನೂ ಓದಿ:ನೇಹಾ ಹಿರೇಮಠ ಕೊಲೆ ಪ್ರಕರಣ ಸಿಬಿಐಗೆ ಹಸ್ತಾಂತರಿಸಿ: ಬಸವರಾಜ ಬೊಮ್ಮಾಯಿ - Basavaraja Bommai

ABOUT THE AUTHOR

...view details