ಕರ್ನಾಟಕ

karnataka

ETV Bharat / state

ಸೊಂಟಕ್ಕೆ ತಂತಿ ಕಟ್ಟಿ, ಹಳ್ಳದಲ್ಲಿ ಈಜಿ ವಿದ್ಯುತ್​ ದುರಸ್ತಿ ಮಾಡಿದ ಲೈನ್​ಮ್ಯಾನ್​: ಗ್ರಾಮಸ್ಥರ ಮೆಚ್ಚುಗೆ - Villagers appreciation for Lineman - VILLAGERS APPRECIATION FOR LINEMAN

ಹಳ್ಳದ ಒಂದು ದಡದಿಂದ ಇನ್ನೊಂದು ದಡಕ್ಕೆ ವಿದ್ಯುತ್​ ತಂತಿಯನ್ನು ಸೊಂಟದಲ್ಲಿ ಕಟ್ಟಿ ಹೊತ್ತೊಯ್ದು, ವಿದ್ಯುತ್​ ದುರಸ್ತಿಗೊಳಿಸಿರುವ ಲೈನ್​ಮ್ಯಾನ್​ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Lineman fixed electricity by swimming in pit with wire tied around his waist in Chikkamagaluru: Villagers' appreciation
ಸೊಂಟಕ್ಕೆ ತಂತಿ ಕಟ್ಟಿ, ಹಳ್ಳದಲ್ಲಿ ಈಜಿ ವಿದ್ಯುತ್​ ದುರಸ್ಥಿ ಮಾಡಿದ ಲೈನ್​ಮ್ಯಾನ್ (ETV Bharat)

By ETV Bharat Karnataka Team

Published : Jul 26, 2024, 8:28 PM IST

ಸೊಂಟಕ್ಕೆ ತಂತಿ ಕಟ್ಟಿ, ಹಳ್ಳದಲ್ಲಿ ಈಜಿ ವಿದ್ಯುತ್​ ದುರಸ್ಥಿ ಮಾಡಿದ ಲೈನ್​ಮ್ಯಾನ್ (ETV Bharat)

ಚಿಕ್ಕಮಗಳೂರು:ಮಲೆನಾಡಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಭೀಕರ ಗಾಳಿಗೆ ನೂರಾರು ವಿದ್ಯುತ್​ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಅನೇಕ ಹಳ್ಳಿಗಳಲ್ಲಿ ವಿದ್ಯುತ್​ ಸಂಪರ್ಕ ಇಲ್ಲದೇ ಕತ್ತಲಲ್ಲಿ ಜನರು ಕಾಲ ಕಳೆಯುವಂತಾಗಿದೆ. ವಿದ್ಯುತ್​ ಇಲಾಖೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು, ಇದೀಗ ಲೈನ್​ಮ್ಯಾನ್​ ವಿದ್ಯುತ್​ ಸಮಸ್ಯೆಯನ್ನು ಬಗೆಹರಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯುತ್​ ತಂತಿ ಮೇಲೆ ಮರ ಬಿದ್ದು, 3 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮದಲ್ಲಿ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು. ಲೈನ್​ಮ್ಯಾನ್​ ರವಿಕುಮಾರ್​ ಎನ್ನುವವರು, ಸೊಂಟಕ್ಕೆ ತಂತಿಯನ್ನು ಕಟ್ಟಿಕೊಂಡು, ಅಪಾಯಮಟ್ಟದಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಈಜಿ ಹೋಗಿ, ಒಂದು ದಡದಿಂದ ಇನ್ನೊಂದು ದಡಕ್ಕೆ ತಲುಪಿ ಹಳ್ಳಿಗಳಿಗೆ ಬೆಳಕು ತರುವ ಮಾಡುವ ಕೆಲಸವನ್ನು ಮಾಡಿದ್ದಾರೆ. ಲೈನ್​ಮ್ಯಾನ್ ರವಿ ಅವರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರವಿ ಅವರು ಈಜಿ ತಂತಿ ಕೊಂಡೊಯ್ಯುತ್ತಿರುವ ವಿಡಿಯೋವನ್ನು ಸ್ಥಳೀಯರೇ ತಮ್ಮ ಮೊಬೈಲ್​ ಕ್ಯಾಮರಾದಲ್ಲಿ ಸೆರಹಿಡಿದಿದ್ದಾರೆ. ಇಲಾಖೆ ಒಂದೊಂದೇ ಕಡೆ ವಿದ್ಯುತ್​ ಸಂಪರ್ಕ ದುರಸ್ಥಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.

ಇದನ್ನೂ ಓದಿ:ದಾವಣಗೆರೆಯಲ್ಲಿ ಧಾರಾಕಾರ ಮಳೆ: ಧರೆಗುರುಳಿದ ಮರ, ವಿದ್ಯುತ್ ಕಂಬ​ಗಳು - TREES FELL ON CAR

ABOUT THE AUTHOR

...view details