ಸುಳ್ಯ:ಬಾವಿಯ ರಿಂಗ್‌ಗೆ ಮಣ್ಣು ತುಂಬಿಸುತ್ತಿದ್ದಾಗ ಕಾರ್ಮಿಕ ಮಣ್ಣಿನಡಿ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ಸಂಜೆ ಪಂಜದಲ್ಲಿ ನಡೆಯಿತು.
ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಗೆ ಹಾಕಿದ್ದ ರಿಂಗ್‌ಗೆ ಕೇರಳದ ಕಾರ್ಮಿಕರು ಮಣ್ಣು ತುಂಬುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರಿಂಗ್ನ ಬದಿಯ ಮಣ್ಣು ದಿಢೀರ್ ಕೆಳಕ್ಕೆ ಕುಸಿದು ಓರ್ವ ಕಾರ್ಮಿಕನ ದೇಹ ಮಣ್ಣಿನಲ್ಲಿ ಹೂತು ಹೋಗುತ್ತಿತ್ತು. ಕುತ್ತಿಗೆಯ ಭಾಗ ಮೇಲೆ ಉಳಿದಿದ್ದರಿಂದ ತಕ್ಷಣ ಸ್ಥಳದಲ್ಲಿದ್ದವರು ಜೆಸಿಬಿ ಸಹಾಯದಿಂದ ಕಾರ್ಮಿಕನನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತಂದು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಅಪರಿಚಿತ ವ್ಯಕ್ತಿಯ ಜೀವ ಪೊಲೀಸರು:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೊಳಗಾಗಿ ಒದ್ದಾಡುತ್ತಿದ್ದರು. ಇದನ್ನು ಕಂಡು, ಚಿಕಿತ್ಸೆಗಾಗಿ ಪೊಲೀಸರ ನೆರವಿನೊಂದಿಗೆ ಖಾಸಗಿ ಆಂಬ್ಯುಲೆನ್ಸ್ನಲ್ಲಿ ಕಡಬಕ್ಕೆ ಕರೆದೊಯ್ದು ಜೀವ ಉಳಿಸಿದ ಘಟನೆ (ಜೂ.28ರಂದು ರಾತ್ರಿ) ನಡೆದಿದೆ.
ವನದುರ್ಗ ದೇವಿ ದೇವಸ್ಥಾನದ ಬಳಿ ನೊರೆ ಕಾರುತ್ತಾ ವ್ಯಕ್ತಿ ಒದ್ದಾಡುತ್ತಿದ್ದರು. ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ಎಸ್ಐ ಕಾರ್ತಿಕ್ ನೇತೃತ್ವದಲ್ಲಿ ಪೊಲೀಸರು ಆಗಮಿಸಿ ಕಡಬ ಸಮುದಾಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ರಾಜ್ಯದ ಪ್ರಸಿದ್ದ ಪ್ರವಾಸಿ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾತ್ರಿ ವೇಳೆ ಅನಾಹುತಗಳು ಸಂಭವಿಸಿದರೆ ವೈದ್ಯಕೀಯ ಸೌಲಭ್ಯ ಇಲ್ಲದೇ ಇರುವುದರಿಂದ ಕಡಬ ಅಥವಾ ಸುಳ್ಯವನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಡೆಂಗ್ಯೂ ಮಹಾಮಾರಿಗೆ ಬಾಲಕಿ ಬಲಿ - Girl dies of dengue