ಕರ್ನಾಟಕ

karnataka

ETV Bharat / state

ಹೈಕಮಾಂಡ್​ನಿಂದ ಆದ ಗೊಂದಲ ಅವರೇ ನಿವಾರಿಸಲಿ: ಕೆಎನ್​ ರಾಜಣ್ಣ - KPCC PRESIDENT CONFUSION

ಜಾರಕಿಹೊಳಿ ಅವರು ನಮ್ಮ ಪಕ್ಷದ ಹಿರಿಯ ಪ್ರಭಾವಿ ನಾಯಕರು, ಅವರು ಹೇಳಿದ್ದರಲ್ಲಿ ತಪ್ಪು ಹುಡುಕಬಾರದು.

kn-rajanna-says-high-command-should-clarify-the-kpcc-president-post-confusion
ಕೆಎನ್​ ರಾಜಣ್ಣ (ಐಎಎನ್​ಎಸ್​​)

By ETV Bharat Karnataka Team

Published : Jan 16, 2025, 3:41 PM IST

ಬೆಂಗಳೂರು: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಸತೀಶ್​ ಜಾರಕಿಹೊಳಿ ಬೆನ್ನಲ್ಲೇ ಇದೀಗ ಕೆಎನ್​ ರಾಜಣ್ಣ ಕೂಡ ಹೇಳಿಕೆ ನೀಡಿದ್ದು, ಈ ವಿಚಾರದಲ್ಲಿ ಹೈಕಮಾಂಡ್​ ನಾಯಕರೇ ಗೊಂದಲವನ್ನುಂಟು ಮಾಡಿದ್ದು, ಅವರೇ​ ಶೀಘ್ರದಲ್ಲೇ ಗೊಂದಲ ನಿವಾರಿಸಲಿ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಆದಮೇಲೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದಾಗಿ ಹೈಕಮಾಂಡ್​ ಹೇಳಿತ್ತು. ಲೋಕಸಭಾ ಚುನಾವಣೆ ನಡೆದು 6 ತಿಂಗಳು ಕಳೆದಿದೆ. ವಿಧಾನಸಭಾ ಚುನಾವಣೆವರೆಗೂ ಡಿಕೆ ಶಿವಕುಮಾರ್​ ಅವರೇ, ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಮುಂದುವರೆಯಲಿ. ಆದರೆ, ಈ ಬಗ್ಗೆ ಸ್ಪಷ್ಟವಾಗಿ ಹೈ ಕಮಾಂಡ್​ ತಿಳಿಸಬೇಕು ಎಂದು ಮನವಿ ಮಾಡಿದರು.

ಸಚಿವ ಕೆಎನ್​ ರಾಜಣ್ಣ (ETV Bharat)

ಜಾರಕಿಹೊಳಿ ಅಧ್ಯಕ್ಷರಾದರೆ ಸ್ವಾಗತ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸತೀಶ್​ ಜಾರಕಿಹೊಳಿ ಆಗ್ರಹಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಜಾರಕಿಹೊಳಿ ಅವರು ನಮ್ಮ ಪಕ್ಷದ ಹಿರಿಯ ಪ್ರಭಾವಿ ನಾಯಕರು. ಅವರು ಹೇಳಿದ್ದರಲ್ಲಿ ತಪ್ಪು ಹುಡುಕಬಾರದು. ಒಂದು ವೇಳೆ ಸತೀಶ್​ ಜಾರಕಿಹೊಳಿಗೆ ಅಧ್ಯಕ್ಷರಾದರೆ, ಸಂತೋಷ ಪಡುವವರಲ್ಲಿ ನಾನು ಮೊದಲಿಗ. ಅವರು ಜನಪರ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಸಿಗುತ್ತಾರೆ. ಎಲ್ಲರಿಗೂ ಗೌರವ ಕೊಡ್ತಾರೆ. ಅವರು ಅಧ್ಯಕ್ಷ ಆದರೆ ನಾನು ಸ್ವಾಗತ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ: ಸಚಿವ ಸತೀಶ್ ಜಾರಕಿಹೊಳಿ

ABOUT THE AUTHOR

...view details