ಕರ್ನಾಟಕ

karnataka

ETV Bharat / state

ಕೆಐಡಿಬಿಯಲ್ಲಿ ಬಹುಕೋಟಿ ವಂಚನೆ ಪ್ರಕರಣ: ಇಂದು ಮುಂದುವರಿದ ತನಿಖೆ, ಓರ್ವ ವಶ - ED Raids Continue

ಕೆಐಡಿಬಿಯಲ್ಲಿ ಬಹುಕೋಟಿ ವಂಚನೆ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರು ಹಾಗೂ ಧಾರವಾಡದಲ್ಲಿರುವ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ ಪರಿಶೀಲನೆ ಕೈಗೊಂಡಿದ್ದರು. ಇಂದು ಸಹ ದಾಳಿ ಮುಂದುವರಿದಿದ್ದು, ಅಧಿಕಾರಿಗಳು ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

DHARWAD KIDB OFFICE  LAND ACQUISITION  ED RAIDS KIDB OFFICES  DHARWAD
ಕೆಐಡಿಬಿಯಲ್ಲಿ ಬಹುಕೋಟಿ ವಂಚನೆ ಪ್ರಕರಣ (ETV Bharat)

By ETV Bharat Karnataka Team

Published : Aug 10, 2024, 12:33 PM IST

ಧಾರವಾಡ: ನಕಲಿ ಭೂಸ್ವಾಧೀನ ನಡೆಸಿ ಹಣ ಕಬಳಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಕೆಐಎಡಿಬಿ ಕಚೇರಿಯಲ್ಲಿ ತನಿಖೆ ಮುಂದುವರಿದಿದೆ. ಶುಕ್ರವಾರ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು.

ಇನ್ನು ಸಿಐಡಿ ತನಿಖೆಯಲ್ಲಿ 19.50 ಕೋಟಿ ಅಕ್ರಮ ಪತ್ತೆಯಾಗಿದ್ದು, ಸಿಐಡಿ ಎಫ್‌ಐಆರ್ ಆಧರಿಸಿ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಧಾರವಾಡದ ಲಕಮನಹಳ್ಳಿಯಲ್ಲಿರುವ ಕೆಐಎಡಿಬಿ ಕಚೇರಿಯಲ್ಲಿ ತನಿಖೆ ನಡೆಯುತ್ತಿದೆ.

ದಾಖಲೆಗಳನ್ನು ಪರಿಶೀಲಿಸುತ್ತಿರುವ ಇಡಿ ಅಧಿಕಾರಿಗಳು ಓರ್ವ ಏಜೆಂಟ್​ನನ್ನು ವಶಕ್ಕೆ ಪಡೆದಿದೆ. ಮತ್ತೊಬ್ಬ ಏಜೆಂಟ್​ನನ್ನೂ ಕಚೇರಿಗೆ ಕರೆತಂದು ವಿಚಾರಣೆ ಮಾಡುತ್ತಿದೆ. ಮತ್ತೊಂದು ಅಧಿಕಾರಿಗಳ ತಂಡ ಬೆಂಗಳೂರಿನಿಂದ ಆಗಮಿಸಿದೆ.

ಏನಿದು ಪ್ರಕರಣ?: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಡಿಬಿ) ಬಹುಕೋಟಿ ಅವ್ಯವಹಾರ ವಂಚನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಧಾರವಾಡದಲ್ಲಿರುವ ಕಚೇರಿಗಳ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದರು.

ಭೂ ಸ್ವಾಧೀನ ಹೆಸರಲ್ಲಿ ನೂರಾರು ಕೋಟಿ ಹಣವನ್ನು ಅಧಿಕಾರಿಗಳು ಲೂಟಿ‌ ಮಾಡಿರುವ ಆರೋಪ ಕೇಳಿ ಬಂದಿತ್ತು. ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರದ ಹೆಸರಲ್ಲಿ ವಂಚನೆ, ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ‌ಹಣ ಲೂಟಿ ಮಾಡಿರುವುದು, ಜೊತೆಗೆ ಐಡಿಬಿಐ ಬ್ಯಾಂಕ್ ಒಂದೇ ಶಾಖೆಯಲ್ಲಿ 24 ಖಾತೆಗಳನ್ನು ತೆರೆಯಲಾಗಿತ್ತು.

ಅಷ್ಟೇ ಅಲ್ಲದೇ, ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂ ಸ್ವಾಧೀನ ಹೆಸರಲ್ಲಿ ಅಕ್ರಮ ಹಾಗೂ ಧಾರವಾಡ ಕೆಲಗೇರಿ ಹಾಗು ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿ ಲೂಟಿ ಮಾಡಿರುವ ಆರೋಪ ಕೆಐಡಿಬಿ ಮೇಲಿದ್ದು, ಈ ಸಂಬಂಧ ಬೆಂಗಳೂರು ನಗರದ ಖನಿಜ ಭವನದಲ್ಲಿರುವ ಕಚೇರಿ ಹಾಗೂ ಧಾರವಾಡದಲ್ಲಿ ಕಚೇರಿ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಇಂದು ಸಹ ತನಿಖೆ ಮುಂದುವರಿಸಿದ್ದಾರೆ.

ಓದಿ:ಕೆಐಡಿಬಿಯಲ್ಲಿ ಬಹುಕೋಟಿ ವಂಚನೆ ಆರೋಪ: ಬೆಂಗಳೂರು, ಧಾರವಾಡ ಕಚೇರಿಗಳ ಮೇಲೆ ಇಡಿ ದಾಳಿ - ED Raids KIDB Offices

ABOUT THE AUTHOR

...view details