ಕರ್ನಾಟಕ

karnataka

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಶೀಘ್ರದಲ್ಲೇ 38 ಸಾವಿರ ಮನೆ ಹಂಚಿಕೆ: 860 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆ ಸಮ್ಮತಿ - House Distribute

By ETV Bharat Karnataka Team

Published : Jul 1, 2024, 8:28 PM IST

ಬಡ ಕುಟುಂಬಗಳಿಗೆ ಎರಡನೇ ಹಂತದಲ್ಲಿ 38 ಸಾವಿರ ಮನೆಗಳನ್ನು ಶೀಘ್ರದಲ್ಲೇ ಹಂಚಿಕೆ ಮಾಡಲು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಹಣಕಾಸು ಇಲಾಖೆ ಜೊತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸಭೆ
ಹಣಕಾಸು ಇಲಾಖೆ ಜೊತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸಭೆ (ETV Bharat)

ಬೆಂಗಳೂರು:ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯದೆಲ್ಲೆಡೆ ಬಡ ಕುಟುಂಬಗಳಿಗೆ ಎರಡನೇ ಹಂತದಲ್ಲಿ 38 ಸಾವಿರ ಮನೆಗಳನ್ನು ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಹಂಚಿಕೆಗೆ ಸಿದ್ಧತೆ ನಡೆಸಲಾಗಿದೆ. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ವಿಧಾನಸೌಧದಲ್ಲಿ ಸೋಮವಾರ ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅತೀಕ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಎರಡನೇ ಹಂತದ ಮನೆ ಹಂಚಿಕೆ ಮಾಡಲು ಅಗತ್ಯವಾದ 860 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ದೊರೆತಿದೆ.

ಈಗಾಗಲೇ ಮನೆಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ಬಂದಿದ್ದು, ಮೂಲ ಸೌಕರ್ಯ ಕಾಮಗಾರಿ ಆದಷ್ಟು ಶೀಘ್ರ ಮುಗಿಸಿ ಮನೆಗಳ ಹಂಚಿಕೆಗೆ ದಿನಾಂಕ ನಿಗದಿ ಪಡಿಸಲು ತೀರ್ಮಾನ ಮಾಡಲಾಯಿತು. ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 1,80,253 ಮನೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ 36,789 ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಚಿಕೆ ಮಾಡಿದ್ದರು. ಇದೀಗ ಎರಡನೇ ಹಂತದಲ್ಲಿ 38 ಸಾವಿರ ಮನೆ ಮುಖ್ಯಮಂತ್ರಿ ಅವರಿಂದಲೇ ಹಂಚಿಕೆ ಮಾಡಲಾಗುವುದು ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ವಸತಿ ಯೋಜನೆಗೆ ಆಯ್ಕೆ ಆಗಿದ್ದ ಬಡ ಕುಟುಂಬಗಳ ಫಲಾನುಭವಿಗಳು ವಂತಿಗೆ ಪಾವತಿ ಮಾಡಲು ಸಾಧ್ಯ ಆಗದೇ ಬ್ಯಾಂಕ್​​ಗಳಿಂದಲೂ ಸಾಲ ಸಿಗದೇ ಸಂಕಷ್ಟ ಎದುರಿಸುತ್ತಿದ್ದರು. ಆಗ ಮುಖ್ಯಮಂತ್ರಿ ಅವರು ಫಲಾನುಭವಿಗಳ ವಂತಿಗೆಯನ್ನು ಸರ್ಕಾರವೇ ಭರಿಸುವ ದಿಟ್ಟ ತೀರ್ಮಾನ ಕೈಗೊಂಡು ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದರು. ಅದರಂತೆ ಹಂತ ಹಂತವಾಗಿ ಹಣಕಾಸು ಇಲಾಖೆ ಅಗತ್ಯ ಹಣ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೆಎಸ್ಆರ್​ಟಿಸಿಯ ಅಶ್ವಮೇಧ ಸಕ್ಸಸ್: ವೇಗಧೂತಗಳನ್ನು ಮೀರಿದ ಕ್ಲಾಸಿಕ್ ಆದಾಯ ಗಳಿಕೆ! - KSRTC Ashwamedha Success

ಸಭೆಯಲ್ಲಿ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇ ಗೌಡ, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಗೃಹಮಂಡಳಿ ಆಯುಕ್ತರಾದ ಕವಿತಾ ಮಣ್ಣಿಕೇರಿ, ಪ್ರಧಾನ ಅಭಿಯಂತರ ರವಿಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ್, ಪ್ರಧಾನ ಅಭಿಯಂತರ ಬಾಲರಾಜು, ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಸುಶೀಲಮ್ಮ ಉಪಸ್ಥಿತರಿದ್ದರು.

ಇದನ್ನೂ ಓದಿ: ಇದು ಕಲಿಕೆಗಾಗಿ..! ಒಂದೇ ಊರಿನಿಂದ 185 ದೇಹ ದಾನಕ್ಕೆ ಒಪ್ಪಿಗೆ: ದೇಶಕ್ಕೆ ಮಾದರಿಯಾದ ಶೇಗುಣಸಿ ಗ್ರಾಮ - AGREED TO DONATE BODIES

ABOUT THE AUTHOR

...view details