ಅಕ್ಟೋಬರ್ 3ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪಿಎಸ್ಐ ಪರೀಕ್ಷೆ ನಡೆಯಲಿದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಲಾಗಿದೆ. | Read More
Karnataka News Today - Live Updates: ಕರ್ನಾಟಕ Tue Oct 01 2024 ಇತ್ತೀಚಿನ ಸುದ್ದಿ
Published : Oct 1, 2024, 7:15 AM IST
|Updated : Oct 1, 2024, 11:06 PM IST
ನಾಡಿದ್ದು ಪಿಎಸ್ಐ ಪರೀಕ್ಷೆ: 48 ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ - PSI Exam
'ಸಿಎಂ ಪತ್ನಿ ಮುಗ್ಧೆ': ಮುಡಾ ಸೈಟ್ ವಾಪಸ್ ನಿರ್ಧಾರ ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕರು - MUDA Scam
ಮುಡಾ ನಿವೇಶನ ವಾಪಸ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ನಿರ್ಧಾರವನ್ನು ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಸಮರ್ಥಿಸಿಕೊಂಡಿದ್ದಾರೆ. | Read More
ಸಿಎಂ ಪತ್ನಿ ಹೆಸರಿನ 14 ನಿವೇಶನಗಳ ಕ್ರಯಪತ್ರ ರದ್ದತಿಗೆ ಮುಡಾ ಆಯುಕ್ತರಿಂದ ಆದೇಶ - Plot Deed Cancel
ಸಿಎಂ ಸಿದ್ದರಾಮಯ್ಯನವರ ಪತ್ನಿ ಹೆಸರಿನ 14 ಕ್ರಯಪತ್ರ ರದ್ದುಗೊಳಿಸುವಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಘುನಂದನ್ ಸಬ್ರಿಜಿಸ್ಟರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. | Read More
ಕಸ್ತೂರಿ ರಂಗನ್ ವರದಿ ಜಾರಿಯಾದರೆ ದ.ಕ.ಜಿಲ್ಲೆಯ ಮಕ್ಕಾಲು ಭಾಗ ಜನ ಬೀದಿಗೆ: ಕಿಶೋರ್ ಶಿರಾಡಿ - Kasturi Rangan Report
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಕಿಶೋರ್ ಶಿರಾಡಿ ಅವರು ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ಮಾತನಾಡಿದ್ದಾರೆ. ಈ ವರದಿ ಅನುಷ್ಠಾನವಾದರೆ ದ.ಕ.ಜಿಲ್ಲೆಯ ಮುಕ್ಕಾಲು ಭಾಗ ಜನರು ಬೀದಿಗೆ ಬರಬೇಕಾಗುತ್ತದೆ ಎಂದರು. | Read More
ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳಿಸಲು ಸಿದ್ದರಾಮಯ್ಯ ಪಟಾಲಂ ಸಂಚು: ಹೆಚ್ಡಿಕೆ - H D Kumaraswamy
ಸಿದ್ದರಾಮಯ್ಯ ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಕನಸು ಕಾಣುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. | Read More
ವಿಧಾನ ಪರಿಷತ್ ಚುನಾವಣೆ: ಸ್ವತಂತ್ರ ಅಭ್ಯರ್ಥಿಯಿಂದ ಮೊದಲ ನಾಮಪತ್ರ ಸಲ್ಲಿಕೆ - Council Election Nomination
ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆಗೆ ನಡೆಯುತ್ತಿದ್ದು, ಈ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ್ ಮೊದಲ ನಾಮಪತ್ರ ಸಲ್ಲಿಸಿದ್ದಾರೆ. | Read More
ಶಾಸಕ ಯತ್ನಾಳ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಬೇಕು: ರೇಣುಕಾಚಾರ್ಯ - M P Renukacharya
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಪರ ವಕಾಲತ್ತು ವಹಿಸಿ ಕಾಂಗ್ರೆಸ್ ಏಜೆಂಟನಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಟೀಕಿಸಿದ್ದಾರೆ. | Read More
ಮುಡಾ ಕೆಸರೆ ಜಮೀನು ಮಹಜರು: ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದೇನು? - Muda Plots Inspection
ಮುಡಾ ಕೆಸರೆ ಜಮೀನಿನ ಸ್ಥಳ ಮಹಜರು ಪ್ರಕಿಯೆಯಲ್ಲಿ ಭಾಗವಹಿಸಿದ್ದರ ಕುರಿತು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. | Read More
ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ 2 ಹಂತದ ಭದ್ರತೆ: ಪೊಲೀಸ್ ಕಮಿಷನರ್ - Mysuru Dasara 2024
ಮೈಸೂರು ದಸರಾ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಇಲಾಖೆ ಕೈಗೊಂಡಿರುವ ಭದ್ರತಾ ನಿಯೋಜನೆ ಕುರಿತು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದರು. | Read More
ಹುಬ್ಬಳ್ಳಿ: ಬಡ್ಡಿ ಕಟ್ಟದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ - Hubballi Assault Case
ಹುಬ್ಬಳ್ಳಿಯ ಗಂಗಾಧರ ನಗರದಲ್ಲಿ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಐದಾರು ಜನ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. | Read More
ವಿಧಾನಪರಿಷತ್ ಉಪಚುನಾವಣೆ: ಕಿಶೋರ್ ಕುಮಾರ್ ಪುತ್ತೂರು ಬಿಜೆಪಿ ಅಭ್ಯರ್ಥಿ - Council Election
ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಅಕ್ಟೋಬರ್ 21ರಂದು ಉಪಚುನಾವಣೆ ನಡೆಯಲಿದೆ. | Read More
ಬೆಳಗಾವಿ: ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 49 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ಜಪ್ತಿ - Illegal Liquor Seized
ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಬೆಳಗಾವಿ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. | Read More
ಮುಡಾ ಸೈಟ್ ವಾಪಸ್: ರಾಜಕೀಯ ತೇಜೋವಧೆ ಮನಗಂಡು ಪತ್ನಿಯಿಂದ ಸ್ವತಂತ್ರ ತೀರ್ಮಾನ- ಸಿಎಂ - CM Siddaramaiah
ತಮ್ಮ ಪತ್ನಿ ಮುಡಾ ನಿವೇಶನ ವಾಪಸ್ ಮಾಡುವ ಬಗ್ಗೆ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಪತ್ನಿ ನನ್ನೊಂದಿಗೆ ಚರ್ಚಿಸಿಲ್ಲ. ಸ್ವತಂತ್ರ ತೀರ್ಮಾನ ಕೈಗೊಂಡಿದ್ದಾರೆ ಎಂದರು. | Read More
ಆದಿ ಉಡುಪಿ ಎಪಿಎಂಸಿಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ; 12 ಟನ್ ಬೆಳ್ಳುಳ್ಳಿ ವಶಕ್ಕೆ - Official Raid Adi Udupi APMC
ರಾಸಾಯನಿಕ ಮಿಶ್ರಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯ ಮೇಲೆ ನಗರಸಭಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. | Read More
ನೆಲಮಂಗಲಕ್ಕೆ ಸೋಲೂರು ಸೇರಿಸುವ ವಿಚಾರ: ಸಂಸದ ಸುಧಾಕರ್, ಶಾಸಕ ಶ್ರೀನಿವಾಸ್ ಕ್ರೆಡಿಟ್ ವಾರ್ - MP MLA Credit War
ಸೋಲೂರು ಹೋಬಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರಿಸುವ ವಿಚಾರವಾಗಿ ಶಾಸಕ ಶ್ರೀನಿವಾಸ್ ಮತ್ತು ಸಂಸದ ಸುಧಾಕರ್ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದೆ. | Read More
ಹಿರಿಯ ನಾಗರಿಕರ ಮಾಸಾಶನ ಹೆಚ್ಚಳದ ಬಗ್ಗೆ ಪರಿಶೀಲಿಸಿ ತೀರ್ಮಾನ: ಸಿಎಂ ಸಿದ್ದರಾಮಯ್ಯ - World Senior Citizens Day
ಸದ್ಯ ಸುಮಾರು 50 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. | Read More
ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್ ವರ್ಕೌಟ್ ಆಗಲ್ಲ: ಪ್ರತಾಪ್ ಸಿಂಹ - Muda Scam
ಮಾಜಿ ಸಂಸದ ಪ್ರತಾಪ್ ಸಿಂಹ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ಪತ್ನಿಯ ಪತ್ರದ ಬಗ್ಗೆ ಮಾತನಾಡಿದರು. ಅವರ ಭಾವನಾತ್ಮಕ ಪತ್ರ ಈಗ ವರ್ಕ್ಔಟ್ ಆಗದು ಎಂದರು. | Read More
ದಾವಣಗೆರೆ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕಿಯರು ಸಾವು - Children Drowned
ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ದಾವಣಗೆರೆಯ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ. | Read More
ನಾಗಮಂಗಲ ಗಲಭೆ ಪ್ರಕರಣ: 55 ಆರೋಪಿಗಳು ಜೈಲಿನಿಂದ ಬಿಡುಗಡೆ - Nagamangala Riot Case
ನಾಗಮಂಗಲ ಗಲಭೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. | Read More
ಸಿಡಿಮದ್ದು ತಾಲೀಮಿನ ಅಂತಿಮ ಪರೀಕ್ಷೆಯಲ್ಲಿ ಗಜಪಡೆ, ಅಶ್ವಪಡೆ ಪಾಸ್; ಜಂಬೂ ಸವಾರಿಗೆ ರೆಡಿ - Mysuru Dasara 2024
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಗಜಪಡೆ ಹಾಗೂ ಅಶ್ವಪಡೆಗೆ 3ನೇ ಹಂತದ ಸಿಡಿಮದ್ದು ತಾಲೀಮನ್ನು ಇಂದು ನಡೆಸಲಾಯಿತು. | Read More
ಸೈಟ್ ವಾಪಸ್ ನೀಡುವ ಮೂಲಕ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ: ಬೊಮ್ಮಾಯಿ - MUDA Scam
ಈಗ ಸೈಟ್ ವಾಪಸ್ ಮಾಡಿರುವುದರಿಂದ ಹಲವು ಪ್ರಶ್ನೆಗಳೆದ್ದಿವೆ. ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು. | Read More
ಕಾನೂನನ್ನು ಮನಸ್ಸಿಗೆ ಬಂದಂತೆ ಮಾಡಿಕೊಂಡರೆ ಹೇಗೆ?: ಸಚಿವ ಹೆಚ್.ಕೆ.ಪಾಟೀಲ್ - MUDA Scam
ಮುಡಾ ಪ್ರಕರಣದಲ್ಲಿ ಇ.ಡಿ. ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿರುವುದು ರಾಜಕೀಯ ದುರುದ್ದೇಶ. ಕೇಂದ್ರ ಸರ್ಕಾರ ಈ ಪ್ರಮಾಣದಲ್ಲಿ ಕೆಳಗಿಳಿದಿದ್ದು ಸರಿಯಲ್ಲ ಎಂದು ಸಚಿವ ಹೆಚ್.ಕೆ.ಪಾಟೀಲ್ ಟೀಕಿಸಿದ್ದಾರೆ. | Read More
ಕರಾವಳಿ ಸೇರಿದಂತೆ ರಾಜ್ಯದ 7 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ: ಯೆಲ್ಲೋ ಅಲರ್ಟ್ ಘೋಷಣೆ - Yellow Alert
ಕರಾವಳಿ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. | Read More
ಸೈಟ್ ವಾಪಸ್ ನಿರ್ಧಾರ ತಪ್ಪು ಒಪ್ಪಿಕೊಂಡಂತೆ, ಕೂಡಲೇ ಸಿಎಂ ರಾಜೀನಾಮೆ ನೀಡಬೇಕು: ವಿಜಯೇಂದ್ರ - Muda Case
ಮುಡಾ ಸೈಟ್ ವಾಪಸ್ ನೀಡುವ ನಿರ್ಧಾರ ಮಾಡಿದ್ದಾರೆಂದರೆ ಅದು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಎಂದರ್ಥ. ಆದ್ದರಿಂದ ಸಿಎಂ ಸಿದ್ದರಾಮಯ್ಯ ತಡಮಾಡದೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ. | Read More
ಸಿಎಂ ಪತ್ನಿಯ ಪತ್ರ ಕಚೇರಿ ತಲುಪಿದೆ: ಸೈಟ್ ವಾಪಸ್ ಪಡೆಯುವ ಬಗ್ಗೆ ಮುಡಾ ಆಯುಕ್ತರು ಹೇಳಿದ್ದೇನು? - Muda Case
ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಸೈಟ್ ವಾಪಸ್ ಮಾಡಲು ನಿರ್ಧರಿಸಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಪತ್ರ ಮುಡಾ ಕಚೇರಿಗೆ ತಲುಪಿದೆ. ಈ ಕುರಿತು ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ಆಯುಕ್ತರು ತಿಳಿಸಿದ್ದಾರೆ. | Read More
ಗ್ರಾಹಕರಿಂದ ಆರ್ಡರ್ ಪಡೆದು ದ್ವಿಚಕ್ರ ವಾಹನಗಳ ಕಳವು: ಇಬ್ಬರ ಬಂಧನ - Two wheelers theft
ಬಂಧಿತ ಆರೋಪಿಗಳಿಂದ 12.5 ಲಕ್ಷ ಮೌಲ್ಯದ ಒಟ್ಟು 13 ವಿವಿಧ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೈಕ್ಗಳನ್ನು 15.20 ಸಾವಿರಕ್ಕೆ ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದರು. | Read More
ಅಕ್ಟೋಬರ್ 3 ರಿಂದ ಮಂಗಳೂರು ದಸರಾ ವೈಭವ: ಮೆರವಣಿಗೆಯಲ್ಲಿ ಡಿಜೆಗೆ ಬ್ರೇಕ್! - Mangaluru Dasara
ಈ ಬಾರಿ ಮಂಗಳೂರು ದಸರಾ ಅದ್ಧೂರಿಯಾಗಿ ನಡೆಯಲಿದೆ. ಆದರೆ, ದಸರಾ ಮೆರವಣಿಗೆಯಲ್ಲಿ ಅಬ್ಬರದ ಸೌಂಡ್ ಹಾಗೂ ಡಿಜೆಗೆ ಅವಕಾಶ ಇಲ್ಲ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ. | Read More
ಮುಡಾ ನಿವೇಶನ ವಾಪಸ್ ಮಾಡಿದ್ದು ಸ್ವಲ್ಪ ತಡವಾಗಿರಬಹುದು, ಒಮ್ಮೊಮ್ಮೆ ತಡವಾಗಿದ್ರೂ ನಿರ್ಧಾರ ಸರಿ ಇರುತ್ತೆ: ಪರಮೇಶ್ವರ್ - Home Minister Parameshwar
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ವಿವಾದಿತ ಮುಡಾ ಸೈಟ್ಗಳನ್ನು ವಾಪಸ್ ನೀಡಲು ನಿರ್ಧರಿಸಿದ್ದರೂ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ. | Read More
ಪೇಪರ್ ಲೆಸ್ ಆನ್ಲೈನ್ ಇ-ಖಾತಾ ವಿತರಣಾ ವ್ಯವಸ್ಥೆ ಪರೀಕ್ಷಾರ್ಥ ಜಾರಿ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ - Paperless Online E Account
ಪೇಪರ್ ಲೆಸ್ ಆನ್ಲೈನ್ ಇ-ಖಾತಾ ವಿತರಣಾ ವ್ಯವಸ್ಥೆ ಪರೀಕ್ಷಾರ್ಥವಾಗಿ ಜಾರಿ ಮಾಡಲಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು. | Read More
ಮಹಾಲಯ ಅಮಾವಾಸ್ಯೆ ದಿನ ಸಿಗದು ಮಾಂಸ, ಮದ್ಯ: ಹಿರಿಯರ ಪೂಜೆ ಮಾಡುವವರಿಗೆ ಎದುರಾಯ್ತು ಸಂಕಷ್ಟ.. ಕಾರಣ? - Mahalaya Amavasya
ಗಾಂಧಿ ಜಯಂತಿ ದಿನವೇ ಮಹಾಲಯ ಅಮಾವಾಸ್ಯೆ ಬಂದಿರುವ ಕಾರಣ, ಆ ದಿನ ಹಿರಿಯರನ್ನು ಮಾಂಸ ಹಾಗೂ ಮದ್ಯ ಇಟ್ಟು ಪೂಜಿಸವವರು, ಹಿಂದಿನ ದಿನವೇ ಅವುಗಳನ್ನು ಖರೀದಿಸಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. | Read More
ವಿಚಾರಣೆಗೆ ಬರುವಂತೆ ಲೋಕಾಯುಕ್ತ ಪತ್ರ: ಬೆಳ್ಳಂಬೆಳಗ್ಗೆ ಮೈಸೂರು ಲೋಕಾಯುಕ್ತಕ್ಕೆ ಬಂದ ಸ್ನೇಹಮಯಿ ಕೃಷ್ಣ - Snehamai Krishna
ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪತ್ರ ಬರೆದ ಬೆನ್ನಲ್ಲೇ ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರು ಕಚೇರಿಗೆ ಇಂದು ಬೆಳಗ್ಗೆ ಹಾಜರಾಗಿದ್ದಾರೆ. | Read More
ಯತ್ನಾಳ್ ಹೇಳಿಕೆ ವೈಯಕ್ತಿಕವಾದುದು, ಪಕ್ಷ ಒಪ್ಪಲು ಸಾಧ್ಯವಿಲ್ಲ: ಸುನೀಲ್‍ಕುಮಾರ್ - Yatnal statement
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವೈಯಕ್ತಿಕವಾದದ್ದು. ಇದನ್ನು ಪಕ್ಷ ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕಮಾರ್ ತಿಳಿಸಿದ್ದಾರೆ. | Read More
ದಸರಾ ಹಬ್ಬ: ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ - Additional coaches for Trains
ಇನ್ನೇನು ದಸರಾ ಉತ್ಸವ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ರೈಲಿನಲ್ಲಿ ಪ್ರಯಾಣಿಸುವ ಸಂಖ್ಯೆ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡ ರೈಲ್ವೆ ಇಲಾಖೆ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಿದೆ. | Read More
ತಿರುಪತಿ ಲಡ್ಡು ಪ್ರಸಾದ ಅಪವಿತ್ರತೆ: ಸ್ವಾಮೀಜಿಗಳ, ಹಿಂದೂ ಮುಖಂಡರ ನೇತೃತ್ವದಲ್ಲಿ ಧರ್ಮಾಗ್ರಹ ಸಭೆ - Dharmagraha meeting
ದೇವಸ್ಥಾನಕ್ಕೆ ಅವಶ್ಯವಿರುವ ತುಪ್ಪವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದಲೇ ತಯಾರು ಮಾಡಲು ಅನುಕೂಲವಾಗುವಂತೆ 25 ಸಾವಿರ ದೇಸಿ ಹಸುಗಳಿರುವ ಬೃಹತ್ ಗೋಶಾಲೆ ಪ್ರಾರಂಭಿಸಲು ತಿರುಮಲ ತಿರುಪತಿ ದೇವಸ್ಥಾನದವರನ್ನು ಧರ್ಮಾಗ್ರಹ ಸಭೆ ಒತ್ತಾಯಿಸಿತು. | Read More
ಒಂದೇ ದಿನ ಪತಿ, ಪತ್ನಿಗೆ ಹೃದಯಾಘಾತ: ಸಾವಿನಲ್ಲೂ ಒಂದಾದ ದಂಪತಿ - Heart Attack
ಹೃದಯಾಘಾತದಿಂದ ದಂಪತಿ ಒಂದೇ ದಿನ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಕೆಳಗೋಟೆ ಬಡಾವಣೆಯಲ್ಲಿ ನಡೆದಿದೆ. | Read More
ಮಂಗಳೂರು ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಜೂಲಿ ನಿವೃತ್ತಿ, ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ - Mangaluru Airport Security Dog
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಜೂಲಿ ನಿವೃತ್ತಿಯಾಗಿದ್ದಾಳೆ. ಭದ್ರತಾ ಸಿಬ್ಬಂದಿಯು ಜೂಲಿ ವಿಶೇಷವಾಗಿ ಬೀಳ್ಕೊಡುಗೆ ಕೊಟ್ಟು ಗಮನ ಸೆಳೆದಿದ್ದಾರೆ. | Read More
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ: ಎನ್‌ಐಎಗೆ ವಹಿಸಿದ್ದ ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - Harsha Murder Case
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಆಧಾರವಿಲ್ಲದೇ ಎನ್‌ಐಎಗೆ ವಹಿಸಲಾಗಿದೆ ಎಂಬ ವಾದವನ್ನು ಒಪ್ಪಲಾಗದು ಎಂದು ಹೈಕೋರ್ಟ್ ಪೀಠ ತಿಳಿಸಿದೆ. | Read More
ಸರ್ಕಾರ ಪತನಕ್ಕಾಗಿ ಹಣ ಸಂಗ್ರಹ: ಕ್ರಮ ಜರುಗಿಸುವಂತೆ ಹೈಗ್ರೌಂಡ್ಸ್ ಠಾಣೆಗೆ ಕಾಂಗ್ರೆಸ್ ದೂರು - Congress Complaint
ಕಾಂಗ್ರೆಸ್ ಸರ್ಕಾರ ಪತನಕ್ಕಾಗಿ ಸಂಚು ರೂಪಿಸಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸಂಸ ವಿ.ಎಸ್.ಉಗ್ರಪ್ಪ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿ ಒತ್ತಾಯಿಸಿದ್ದಾರೆ. | Read More
ಓಲಾ ಚಾಲಕನಿಂದ ಕಿರುಕುಳ: ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ನಿರ್ದೇಶನ - Harassement Case
ಕ್ಯಾಬ್ ಚಾಲಕನಿಂದ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಸಂತ್ರಸ್ತೆಗೆ 5 ಲಕ್ಷ ರೂ ಪರಿಹಾರ ನೀಡುವಂತೆ ಓಲಾ ಮಾತೃಸಂಸ್ಥೆಗೆ ಹೈಕೋರ್ಟ್ ನಿದೇಶನ ನೀಡಿದೆ. | Read More
ನಿವೇಶನ ಹಿಂತಿರುಗಿಸುವ ನಿರ್ಧಾರ ನನಗೂ ಅಚ್ಚರಿ ಉಂಟು ಮಾಡಿದೆ: ಪತ್ನಿ ಪತ್ರದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ - Muda Case
ವಿವಾದಕ್ಕೆ ಕಾರಣವಾಗಿರುವ 14 ನಿವೇಶನಗಳನ್ನು ಹಿಂತಿರುಗಿಸುವ ಕುರಿತು ಪತ್ನಿಯ ನಿರ್ಧಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. | Read More