ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರು ತಮ್ಮದೇ ಪಕ್ಷದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. | Read More
Karnataka Live News: ಕರ್ನಾಟಕ Sat Nov 09 2024 ಇತ್ತೀಚಿನ ವರದಿ - KARNATAKA NEWS TODAY SAT NOV 09 2024
Published : Nov 9, 2024, 8:10 AM IST
|Updated : Nov 9, 2024, 11:03 PM IST
ನನ್ನ ತಾಕತ್ ಬಗ್ಗೆ ಅವರು ಟೆಸ್ಟ್ ಮಾಡಬೇಕು ಎನ್ನುವುದಾದರೆ ಕ್ಷೇತ್ರಕ್ಕೆ ಬರಲಿ: ಎಸ್.ಟಿ.ಸೋಮಶೇಖರ್
ಕಾರವಾರದಲ್ಲಿ ರಾಜ್ಯದ ಮೊದಲ ಕಡಲಜೀವಿ ಆರೈಕೆ ಕೇಂದ್ರ ; ಅರಣ್ಯ ಇಲಾಖೆಯಿಂದ 4 ಕೋಟಿ ವೆಚ್ಚದಲ್ಲಿ ನೀಲನಕ್ಷೆ
ಕಾರವಾರದಲ್ಲಿ ರಾಜ್ಯದಲ್ಲಿಯೇ ಮೊದಲ ಕಡಲಜೀವಿ ಆರೈಕೆ ಕೇಂದ್ರ ನಿರ್ಮಾಣಕ್ಕೆ ಇದೀಗ ಅರಣ್ಯ ಇಲಾಖೆ ₹ 4 ಕೋಟಿ ವೆಚ್ಚದಲ್ಲಿ ಯೋಜನೆ ರೂಪುರೇಷೆ ಸಿದ್ಧಪಡಿಸಿದೆ. | Read More
ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಬಿಗ್ಶಾಕ್: ತನಿಖಾ ಲೋಪವೆಸಗಿದವರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ
ನ್ಯಾಯಾಲಯಗಳಲ್ಲಿ ವಜಾಗೊಂಡ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳದ ಹಿನ್ನೆಲೆ ನ್ಯೂನತೆ ಕಂಡುಬಂದ ಪ್ರಕರಣಗಳ ತನಿಖಾಧಿಕಾರಿಗಳಿಗೆ ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳುವ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯು ಮಾರ್ಗಸೂಚಿ ಹೊರಡಿಸಿದೆ. | Read More
ಕೆಂಗೇರಿ ಐಷಾರಾಮಿ ಕಾರು ಅಪಘಾತ: ಘಟನೆ ವಿಡಿಯೋ ಸಂಗ್ರಹಕ್ಕೆ ಪೊಲೀಸರಿಗೆ ಹೈಕೋರ್ಟ್ ಸೂಚನೆ
ಕೆಂಗೇರಿ ಬಳಿ ಇತ್ತೀಚೆಗೆ ಸಂಭವಿಸಿದ್ದ ಅಪಘಾತದಲ್ಲಿ 30 ವರ್ಷದ ಮಹಿಳೆ ಸಾವನ್ನಪ್ಪಿದ ಘಟನಾ ಸ್ಥಳದ ಸಿಸಿಟಿವಿಯಲ್ಲಿ ವಿಡಿಯೋ ತುಣುಕನ್ನು ಜಪ್ತಿ ಮಾಡುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ. | Read More
ಅಂದಾಜಿನ ಪ್ರಕಾರ ಕೋವಿಡ್ ವೇಳೆ ₹ 10 - 15 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರು ಕೋವಿಡ್ ವೇಳೆ ನಡೆದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅಂದಾಜಿನ ಪ್ರಕಾರ ಕೋವಿಡ್ ವೇಳೆ ₹ 10 ರಿಂದ 15 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. | Read More
ಸ್ಥಳೀಯ ಭಾಷಾ ಜ್ಞಾನದ ಹಿನ್ನೆಲೆ ಆರ್ಆರ್ಬಿ ನೇಮಕಾತಿ ನಿಯಮ ಮಾರ್ಪಡಿಸಲು ಕೇಂದ್ರ ವಿತ್ತ ಸಚಿವೆ ಸೂಚನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ (ಆರ್ಆರ್ಬಿ-Regional Rural Banks) ಕಾರ್ಯಕ್ಷಮತೆ ಪರಿಶೀಲನಾ ಸಭೆ ನಡೆಸಿದರು. | Read More
ರಾಮನಗರ: ಕಾರು - ಲಾರಿ ಮಧ್ಯೆ ಅಪಘಾತ; ಮೂವರು ಸ್ಥಳದಲ್ಲೇ ಸಾವು
ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. | Read More
ಶೀಘ್ರದಲ್ಲೇ MSMEಗಳಿಗಾಗಿ ₹100 ಕೋಟಿ ವರೆಗಿನ ಸಾಲ ಖಾತ್ರಿ ಯೋಜನೆ ಜಾರಿ: ನಿರ್ಮಲಾ ಸೀತಾರಾಮನ್
ಸಂಪುಟ ಸಭೆ ಅನುಮೋದನೆ ಸಿಕ್ಕ ಕೂಡಲೇ ಬ್ಯಾಂಕ್ ಮೂಲಕ ಸಾಲ ಖಾತ್ರಿ ಯೋಜನೆ ಜಾರಿಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. | Read More
ಮಂಗಳೂರು: ಪತ್ನಿ, ಮಗು ಕೊಂದು ವ್ಯಕ್ತಿ ಆತ್ಮಹತ್ಯೆ
ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. | Read More
ಮೈಸೂರು: ಬಯಲು ಶೌಚಾಲಯಕ್ಕೆ ಬೆದರಿ ಕನ್ನಡ ಶಾಲೆ ಬಿಡಲು ಮುಂದಾದ ವಿದ್ಯಾರ್ಥಿಗಳು
ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿನ ವಿದ್ಯಾರ್ಥಿನಿಯರು ಬಯಲು ಶೌಚಾಲಯಕ್ಕೆ ಹೆದರಿ ಶಾಲೆ ಬಿಡಲು ಮುಂದಾಗಿದ್ದಾರೆ. | Read More
ಸತತ ಐದನೇ ದಿನವೂ ಮೊಮ್ಮಗನ ಪರ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು
ನಿಖಿಲ್ ಕುಮಾರಸ್ವಾಮಿ ಗೆದ್ದರೆ ಮೇಕೆದಾಟು ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೆಚ್.ಡಿ.ದೇವೇಗೌಡರು ಭರವಸೆ ನೀಡಿದ್ದಾರೆ. | Read More
ಜನಾರ್ದನರೆಡ್ಡಿ ಜುಜುಬಿ ರಾಜಕಾರಣಿ, ಮಾನ ಮರ್ಯಾದೆ ಇದೆಯಾ: ಸಿದ್ದರಾಮಯ್ಯ ಕಿಡಿ ಕಿಡಿ
ಸಂಡೂರಿನ ವಿಠಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಏಕ ವಚನದಲ್ಲೇ ಶಾಸಕ ಜನಾರ್ದನರೆಡ್ಡಿ ವಿರುದ್ಧ ಹರಿಹಾಯ್ದಿದ್ದಾರೆ. | Read More
ಕೋವಿಡ್ ಹಗರಣ: ಕ್ಯಾಬಿನೆಟ್ನಲ್ಲಿ ಚರ್ಚಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಬಗ್ಗೆ ತೀರ್ಮಾನ - ಸಿಎಂ
ಕೋವಿಡ್ ಹಗರಣ ಸಂಬಂಧ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಸಚಿವ ಸಂಪುಟ ಉಪ ಸಮಿತಿ ವರದಿ ಪರಿಶೀಲನೆ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. | Read More
ಹಿಮೋಫಿಲಿಯಾ ಕಾಯಿಲೆ ಬಗ್ಗೆ 44 ವರ್ಷ ಅಧ್ಯಯನ: ಡಾ.ಸುರೇಶ್ ಹನಗವಾಡಿಗೆ ದಕ್ಕಿದ ವಿಕಲಚೇತನರ ರಾಷ್ಟ್ರೀಯ ಪ್ರಶಸ್ತಿ!
ಡಾ.ಸುರೇಶ್ ಅವರು ದೇಶದಲ್ಲಿಯೇ ಹಿಮೋಫಿಲಿಯಾ, ತಲಸ್ಸೇಮಿಯಾ ಸೇರಿದಂತೆ ವಿರಳ ರಕ್ತಸ್ರಾವ ರೋಗಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ಕೇಂದ್ರವನ್ನು ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಸ್ಥಾಪಿಸಿದ್ದಾರೆ. | Read More
ಬಾಲಕರ ಮೇಲೆಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಳ; ನಾಲ್ಕು ವರ್ಷದಲ್ಲಿ ದಾಖಲಾದ ಪ್ರಕರಣಗಳೆಷ್ಟು?
ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸರಿ ಸುಮಾರು 114 ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. | Read More
ದತ್ತಪೀಠದಲ್ಲಿ ದತ್ತಮಾಲಾ ಸಂಭ್ರಮ; ಮಾಲಾಧಾರಿಗಳಿಂದ ಪಡಿ ಸಂಗ್ರಹ
ದತ್ತಪೀಠದಲ್ಲಿ ದತ್ತಮಾಲಾ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಚಿಕ್ಕಮಗಳೂರಿನ ವಿವಿಧ ಬಡಾವಣೆಗಳಲ್ಲಿ ಪಡಿ ಸಂಗ್ರಹಿಸಿದ್ದಾರೆ. | Read More
ವರ್ಗಾವಣೆ ಮಾಡಿಸಿಕೊಡುವುದಾಗಿ ಡಿಸಿಎಂ, ಸಚಿವರ ಕಾರ್ಯದರ್ಶಿ ಸೋಗಿನಲ್ಲಿ ವಂಚನೆ: ಆರೋಪಿ ಬಂಧನ
ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಡಿಸಿಎಂ, ಸಚಿವರ ಕಾರ್ಯದರ್ಶಿ ಸೋಗಿನಲ್ಲಿ ಸರ್ಕಾರಿ ಕರೆ ಮಾಡಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. | Read More
ಪ್ರಾಸಿಕ್ಯೂಷನ್: 'ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವೆ': ಶ್ರೀರಾಮುಲು
ಕೋವಿಡ್ ಸಂದರ್ಭದಲ್ಲಿನ ಹಗರಣ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರವು ಪ್ರಾಸಿಕ್ಯೂಷನ್ ನಡೆಸಲು ಮುಂದಾಗಿರುವ ಕುರಿತಂತೆ ಮಾಜಿ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. | Read More
ರಾಜ್ಯದ ಜೇನು ತುಪ್ಪ ಇನ್ನುಮುಂದೆ 'ಝೇಂಕಾರ' ಬ್ರ್ಯಾಂಡ್: ರೈತರು ಒಡಂಬಡಿಕೆ ಮಾಡಿಕೊಳ್ಳುವುದು ಹೇಗೆ?
ರೈತರಿಂದ ಉತ್ಪಾದನೆಯಾಗುವ ಗುಣಮಟ್ಟದ ಜೇನು ತುಪ್ಪಕ್ಕೆ ಮಾರುಕಟ್ಟೆ ಒದಗಿಸಲು ರಾಜ್ಯ ತೋಟಗಾರಿಕೆ ಇಲಾಖೆಯಿಂದ ಬ್ರ್ಯಾಂಡ್ ನೋಂದಣಿ ಮಾಡಲಾಗಿದೆ. | Read More
ಕಲಬುರಗಿ: ಪಿಕಪ್ - ಕಾರು ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಪಿಕಪ್ ಗೂಡ್ಸ್ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. | Read More
ಆಯೋಗಗಳ ರಚನೆ, ಅನುಕೂಲಕರ ವರದಿ ಪಡೆದುಕೊಳ್ಳುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು - ಬಿ ವೈ ವಿಜಯೇಂದ್ರ
ಕೋವಿಡ್ ಅವಧಿಯಲ್ಲಿನ ಅಕ್ರಮಗಳ ಕುರಿತು ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ಆಯೋಗ ರಚಿಸಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾತನಾಡಿದ್ದಾರೆ. | Read More
ಕಾಂಗ್ರೆಸ್ ಅದೆಷ್ಟೇ ಟೋಕನ್, ಹಣ ಹಂಚಿದರೂ ಗೆಲ್ಲೋದು ನಾವೇ: ಪ್ರಲ್ಹಾದ್ ಜೋಶಿ
ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಬೇಕು ಎಂಬ ಭರದಲ್ಲಿ ಕಾಂಗ್ರೆಸ್ ಪಕ್ಷ ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. | Read More
ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದರಿ ವಿಮಾನಗಳ ಏರ್ ಶೋ
ಅಡ್ಯಾರ್ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿ ವಿಮಾನಗಳ ಏರ್ ಶೋ ನಡೆದಿದೆ. | Read More
ಮತ್ತೆ ಮಂಡ್ಯದಿಂದಲೇ ನನ್ನ ರಾಜಕಾರಣ ಪುನರಾರಂಭ: ನನ್ನ ಉಸಿರಿರೋವರೆಗೂ ದರ್ಶನ್ ನನ್ನ ಮಗ: ಸುಮಲತಾ ಅಂಬರೀಶ್
ನನ್ನ ಉಸಿರಿರೋವರೆಗೂ ದರ್ಶನ್ ನನ್ನ ಮಗನೇ, ಎಲ್ಲ ಆರೋಪಮುಕ್ತವಾಗಿ ಅವರು ಹೊರಬರುವ ನಂಬಿಕೆ ನನಗಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದರು. | Read More
ಬೆಂಗಳೂರಲ್ಲಿ ಡಬಲ್ ಮರ್ಡರ್; ರಾಡ್ನಿಂದ ಹೊಡೆದು ಇಬ್ಬರು ಬಸ್ ಸರ್ವಿಸ್ ಕೆಲಸಗಾರರ ಕೊಲೆ
ಬೆಂಗಳೂರಿನ ಸಿಂಗಹಳ್ಳಿ ಗ್ರಾಮದ ಬಳಿ ರಾಡ್ನಿಂದ ಹೊಡೆದು ಬಸ್ ಸರ್ವಿಸ್ ಕೆಲಸ ಮಾಡುತ್ತಿದ್ದ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. | Read More
ಪ್ರಾಸಿಕ್ಯೂಷನ್ಗೆ ಶಿಫಾರಸು ಹಿಂದೆ ರಾಜಕೀಯ ದುರುದ್ದೇಶ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಸಿದ್ದರಾಮಯ್ಯ ಅವರಿಗೆ ಉಪಚುನಾವಣೆಯಲ್ಲಿ ಸೋಲುವ ಆತಂಕ ಶುರುವಾಗಿದೆ. ಹಾಗಾಗಿ ಕೋವಿಡ್ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ ದೂರಿದರು. | Read More
ಕೋವಿಡ್ ಅಕ್ರಮ ಸಂಬಂಧ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು: ಸಚಿವ ದಿನೇಶ್ ಗುಂಡೂರಾವ್
ಕೋವಿಡ್ ಅಕ್ರಮ ಕುರಿತು ನಿವೃತ್ತ ನ್ಯಾಯಮೂರ್ತಿ ಡಿ. ಮೈಕೆಲ್ ಕುನ್ಹಾ ಆಯೋಗವು ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. | Read More
ಬೆಂಗಳೂರು: ಹೊತ್ತಿ ಉರಿದ ಕಾರ್ಖಾನೆ, ಕೋಟ್ಯಂತರ ರೂ. ಮೌಲ್ಯದ ವುಡ್ ಅಹುತಿ
ವುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. | Read More
ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಪರ ಸತತ 4ನೇ ದಿನವೂ ದೇವೇಗೌಡರಿಂದ ಪ್ರಚಾರ
ಚನ್ನಪಟ್ಟಣ ಉಪಚುನಾವಣೆ ಪ್ರಚಾರ ರಂಗೇರಿದ್ದು, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಹೆಚ್.ಡಿ.ದೇವೇಗೌಡರು ಮತಯಾಚನೆ ಮುಂದುವರಿಸಿದ್ದಾರೆ. | Read More
ಆಹಾರ ಪ್ರಿಯರೇ ಎಚ್ಚರ: ಅಸುರಕ್ಷಿತ ಫುಡ್ ಪದಾರ್ಥಗಳು ಪತ್ತೆ, ಕ್ರಮಕ್ಕೆ ಮುಂದಾದ ಇಲಾಖೆ
ಆಹಾರ ಪ್ರಿಯರೇ ಎಚ್ಚರವಾಗಿರಿ ಕೆಲ ಆಹಾರ ಪದಾರ್ಥಗಳು ಅಸುರಕ್ಷಿತ ಎಂದು ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ. | Read More
ಬೆಂಗಳೂರು: ಭದ್ರತೆಗಿದ್ದ ಸೆಕ್ಯುರಿಟಿ ಗಾರ್ಡ್ನಿಂದಲೇ 15 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ!
ಚಿನ್ನದಂಗಡಿ ಮಾಲೀಕನ ಮನೆಯಲ್ಲಿ 15.15 ಕೋಟಿ ಮೌಲ್ಯದ ಚಿನ್ನಾಭರಣ ನಗದನ್ನು ಸೆಕ್ಯುರಿಟಿ ಗಾರ್ಡ್ ದೋಚಿದ್ದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. | Read More
ಉಡುಪಿ: ಭತ್ತದ ಕಟಾವು ಚುರುಕು-ದ್ವಿದಳ ಧಾನ್ಯ, ಕಲ್ಲಂಗಡಿ, ತರಕಾರಿ ಬಿತ್ತನೆಗೆ ಸಿದ್ಧತೆ
ಉಡುಪಿಯಾದ್ಯಂತ ಭತ್ತದ ಕಟಾವು ಚುರುಕುಗೊಂಡಿದ್ದು, 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಭತ್ತ ಬಿತ್ತನೆ ಮಾಡಲಾಗಿದೆ. | Read More
ಪತಿ ಭಾಗಿಯಾದ ಆರೋಪದಲ್ಲಿ ಪತ್ನಿಯನ್ನು ಸೇರಿಸಲಾಗದು : ಹೈಕೋರ್ಟ್
ಅಪರಾಧದಲ್ಲಿ ಭಾಗಿಯಾಗಿರುವ ಪತಿಯೊಂದಿಗೆ ನೆಲೆಸಿರುವ ಕಾರಣ ಪತ್ನಿಯನ್ನೂ ಸಹ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. | Read More
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಭಾಷಣ ಆರೋಪ: ಯತ್ನಾಳ್ ವಿರುದ್ಧದ ಪ್ರಕರಣ ರದ್ದು
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಭಾಷಣ ಮಾಡಿದ ಆರೋಪದ ಮೇಲೆ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. | Read More
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ: ಹೆಂಡತಿಯನ್ನು ಶಿಕ್ಷೆಗೆ ಗುರಿಪಡಿಸಲಾಗದು - ಹೈಕೋರ್ಟ್
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸರಗೊಂಡು ಪತಿ ಆತ್ಮಹತ್ಯೆ ಮಾಡಿಕೊಂಡರೆ, ಪತ್ನಿಯನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ಅವಕಾಶ ಇಲ್ಲ ಎಂದು ಹೈಕೋರ್ಟ್ ತಿಳಿಸಿದೆ. | Read More
ಬೆಂಗಳೂರು: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ತಾಯಿಯನ್ನೇ ಹತ್ಯೆ ಮಾಡಿದ ಮಗ!
ಕೆಲಸಕ್ಕೆ ಹೋಗು ಎಂದಿದಕ್ಕೆ ತಾಯಿಯನ್ನೇ ಹತ್ಯೆ ಮಾಡಿದ ಪುತ್ರನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. | Read More
ಕಾರ್ತಿಕ ಏಕಾದಶಿ ಆಚರಣೆ: ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು ಸಂಚಾರ
ಕಾರ್ತಿಕ ಏಕಾದಶಿ ಉತ್ಸವ ಅಂಗವಾಗಿ ಭಕ್ತರ ಅನುಕೂಲಕ್ಕಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರವನ್ನು ನೈಋತ್ಯ ರೈಲ್ವೆ ಇಂದಿನಿಂದ ನಡೆಸಲಿದೆ. | Read More
ಸಾಂಸ್ಕೃತಿಕ ನಗರಿಯಲ್ಲಿ ಪುರಂದರದಾಸರ ಕೀರ್ತನೆ ಪಠಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್: ವಿಡಿಯೋ
ದಾಸ ಶ್ರೇಷ್ಠರಲ್ಲಿ ಪ್ರಮುಖರಾದ ಪುರಂದರದಾಸರ ಕೀರ್ತನೆಯನ್ನು ಪ್ರಸ್ತಾಪ ಮಾಡುವುದರ ಜೊತೆಗೆ ಅದರ ಅರ್ಥವನ್ನು ವಿವರಿಸುತ್ತಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾರ್ಯಕ್ರಮಕ್ಕೆ ಮೆರಗು ತಂದರು. | Read More