ಕರ್ನಾಟಕ

karnataka

ETV Bharat / state

Live Karnataka News: Sat Nov 02 2024 ಕರ್ನಾಟಕ ಇತ್ತೀಚಿನ ಸುದ್ದಿಗಳು - KARNATAKA NEWS TODAY SAT NOV 02 2024

Etv Bharat
Etv Bharat (Etv Bharat)

By Karnataka Live News Desk

Published : Nov 2, 2024, 7:15 AM IST

Updated : Nov 2, 2024, 10:27 PM IST

10:24 PM, 02 Nov 2024 (IST)

ಗಾಜನೂರಲ್ಲಿ ಶಿವಣ್ಣ ದಂಪತಿ: ಅಣ್ಣಾವ್ರ ಹಳೇ ಮನೆ, ದೇಗುಲಕ್ಕೆ ಭೇಟಿ

ಗಾಜನೂರು ಮನೆಗೆ ಭೇಟಿ ನೀಡಿದ ಶಿವಣ್ಣ ಹಾಗೂ ಪತ್ನಿ ರಾಜ್​ಕುಮಾರ್​ ಅವರ ಸಹೋದರಿ ಹಾಗೂ ಸೋದರತ್ತೆ ನಾಗಮ್ಮ ಅವರ ಆಶೀರ್ವಾದ ಪಡೆದರು. | Read More

ETV Bharat Live Updates - CHAMARAJANAGAR

09:53 PM, 02 Nov 2024 (IST)

ಬಿಜೆಪಿ ಅಧಿಕಾರದಲ್ಲಿ ರೈತ ಕುಟುಂಬಗಳ ಆಸ್ತಿಗಳನ್ನು ವಕ್ಫ್​ಗೆ ಖಾತೆ ಬದಲಾಯಿಸಿದ ದಾಖಲೆ ಶೀಘ್ರ ಬಿಡುಗಡೆ: ಸಿಎಂ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಟಾಂಗ್ ನೀಡಿ ಸಿಎಂ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. | Read More

ETV Bharat Live Updates - WAQF ISSUE

09:01 PM, 02 Nov 2024 (IST)

ಬೆಂಗಳೂರು: ಪಟಾಕಿ ಅವಘಡಗಳಿಂದ ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣಗಳ ಸಂಖ್ಯೆ 91ಕ್ಕೆ ಏರಿಕೆ

ನಗರದ ನಾರಾಯಣ ನೇತ್ರಾಲಯದಲ್ಲಿ ಇದುವರೆಗೆ 53 ಪ್ರಕರಣಗಳು, ಹಾಗೂ ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು 38 ಪ್ರಕರಣಗಳು ದಾಖಲಾಗಿವೆ. | Read More

ETV Bharat Live Updates - BENGALURU

08:58 PM, 02 Nov 2024 (IST)

ಹಬ್ಬದ ಸಾಲು ಸಾಲು ರಜೆಯಿಂದ ಊರಿಗೆ ತೆರಳಿದ ಜನ: ಬೆಂಗಳೂರಲ್ಲಿ ಕಳೆಗುಂದಿದ ಪಟಾಕಿ ವ್ಯಾಪಾರ

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರು ಜನರು ತಮ್ಮ ಊರುಗಳಿಗೆ ತೆರಳಿರುವುದರಿಂದ ಪಟಾಕಿ ವ್ಯಾಪಾರ ಕಡಿಮೆಯಾಗಿದೆ. ಈ ಕುರಿತು ಈಟಿವಿ ಭಾರತ ಕನ್ನಡ ವರದಿಗಾರ ಸನತ್ ದೇಸಾಯಿ ಮಾಡಿರುವ ವರದಿ ಇಲ್ಲಿದೆ.. | Read More

ETV Bharat Live Updates - BENGALURU

08:40 PM, 02 Nov 2024 (IST)

ದೀಪಾವಳಿ ಪಟಾಕಿಯಿಂದ ಸಿಲಿಕಾನ್ ಸಿಟಿಯಲ್ಲಿ ವಾಯುಮಾಲಿನ್ಯ ಹೆಚ್ಚಳ

ಪ್ರತಿನಿತ್ಯ ವಾಹನಗಳ ಹೊಗೆ ಧೂಳಿನಿಂದ ವಾಯು ಮಾಲಿನ್ಯ ಆಗುತ್ತಿತ್ತು. ಸದ್ಯ ಮೂರು ದಿನ ರಜೆಯಿದ್ದರೂ ವಾಹನಗಳ ಸಂಖ್ಯೆ ಕಡಿಮೆಯಿದ್ದರೂ ವಾಯು ಮಾಲಿನ್ಯ ಏರಿಕೆಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. | Read More

ETV Bharat Live Updates - BENGALURU

08:37 PM, 02 Nov 2024 (IST)

ಹಾವೇರಿ: ದನ ಬೆದರಿಸುವ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಹೋರಿಗಳು, ರೋಚಕ ಕ್ರೀಡೆ ಕಣ್ತುಂಬಿಕೊಂಡ ಜನ

ಜಾನಪದ ಸೊಗಡಿನ ಕ್ರೀಡೆ ದನ ಬೆದರಿಸುವ ಸ್ಪರ್ಧೆ ಜಿಲ್ಲೆಯಲ್ಲಿ ಕಳೆಗಟ್ಟಿದೆ. ಶನಿವಾರ ವೀರಭದ್ರೇಶ್ವರ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿದ್ದವು. | Read More

ETV Bharat Live Updates - HAVERI

07:49 PM, 02 Nov 2024 (IST)

ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸಿಡಿದು ತಂದೆ - ಮಗು ಸಾವು: ಬೆಸ್ಕಾಂ ಜೆಇ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಣೆ

ವಿದ್ಯುತ್ ಟ್ರಾನ್ಸ್​ಫಾರ್ಮರ್ ಸ್ಫೋಟಗೊಂಡು ತಂದೆ, ಮಗು ಮೃತಪಟ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಸ್ಕಾಂ ಕಿರಿಯ ಎಂಜಿನಿಯರ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. | Read More

ETV Bharat Live Updates - BENGALURU

07:50 PM, 02 Nov 2024 (IST)

ಬೆಳಗಾವಿ ಎಮ್ಮೆಗಳ ಓಟಕ್ಕಿದೆ ನೂರಾರು ವರ್ಷಗಳ ಇತಿಹಾಸ: ಮೈನವಿರೇಳಿಸಿದ ಎಮ್ಮೆಗಳ ಜೊತೆಗಿನ ಯುವಕರ ಸಾಹಸ

ಎಮ್ಮೆಗಳ ಓಟ ಒಂದೆಡೆಯಾದರೆ ಅವುಗಳಿಗೆ ಮುಖವಾಡ, ಕವಡಿ ಸರ, ಗೆಜ್ಜೆ, ಗಂಟೆ, ಹಂಗಡ ಕಟ್ಟಿ, ಇನ್ನು ಬಣ್ಣ ಬಳಿದಿದ್ದ ಕೋಡುಗಳಿಗೆ ನವಿಲು ಗರಿ, ಬೆಳ್ಳಿಯ ಕಳಸ ತೊಡಿಸಿ ಶೃಂಗರಿಸಿದ್ದು ಜನರನ್ನು ಇನ್ನಷ್ಟು ಗಮನ ಸೆಳೆಯಿತು. | Read More

ETV Bharat Live Updates - YOUTHS ADVENTURE

07:47 PM, 02 Nov 2024 (IST)

ಮೈಸೂರು: ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ, ಟೊಮೆಟೊ, ತೆಂಗು

ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬಾಳೆ, ಟೊಮೆಟೊ, ತೆಂಗು ಮತ್ತು ತೇಗದ ಬೆಳೆ ನೆಲಕಚ್ಚಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ. | Read More

ETV Bharat Live Updates - STORM RAIN FALL

07:31 PM, 02 Nov 2024 (IST)

ಹಾದಿ ಬೀದಿಯಲ್ಲಿ ಕಸ ಎಸೆಯುತ್ತಿದ್ರೆ ಜೋಕೆ!: ಇನ್ಮುಂದೆ ನಿಮ್ಮ ಮೇಲೆ 'ಮಾರ್ಷಲ್'ಗಳ ನಿಗಾ

ನಗರವನ್ನು ಸ್ವಚ್ಛವಾಗಿಡಲು ದಾವಣಗೆರೆ ಮಹಾನಗರ ಪಾಲಿಕೆಯವರಿಗೆ ಮಹತ್ವದ ಕ್ರಮ ಕೈಗೊಂಡಿದೆ. ಈ ಕುರಿತು ಈಟಿವಿ ಭಾರತ ಕನ್ನಡ ವರದಿಗಾರ ನೂರ್​ ಮಾಡಿರುವ ವಿಶೇಷ ವರದಿ ಇಲ್ಲಿದೆ.. | Read More

ETV Bharat Live Updates - DAVANGERE MUNICIPAL CORPORATION

06:24 PM, 02 Nov 2024 (IST)

ನಾಲಿಗೆ ಬಿಗಿ ಹಿಡಿದು ಮಾತನಾಡುವ ದೊಡ್ಡ ಜವಾಬ್ದಾರಿ ಮೋದಿಯವರ ಮೇಲಿದೆ: ಸಚಿವ ಹೆಚ್.ಕೆ. ಪಾಟೀಲ್

ರಾಜ್ಯದ ಗ್ಯಾರೆಂಟಿ ಯೋಜನೆಗಳನ್ನು ಟೀಕಿಸಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ವಿರುದ್ಧ ಸಚಿವ ಹೆಚ್​.ಕೆ.ಪಾಟೀಲ್ ವಾಗ್ದಾಳಿ ನಡೆಸಿದರು. | Read More

ETV Bharat Live Updates - PM MODI

06:23 PM, 02 Nov 2024 (IST)

ಚನ್ನಪಟ್ಟಣ - ರಾಮನಗರ ಅಭಿವೃದ್ಧಿ, 10 ಸಾವಿರ ಜನರಿಗೆ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆ: ಹೆಚ್​.ಡಿ.ಕೆ

ಚನ್ನಪಟ್ಟಣ ಹಾಗೂ ರಾಮನಗರ ನಡುವೆ ಸುಮಾರು ಹತ್ತು ಸಾವಿರ ಜನರಿಗೆ ನೇರ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. | Read More

ETV Bharat Live Updates - CHANNAPATNA BY ELECTION

05:50 PM, 02 Nov 2024 (IST)

ಮೋದಿಯನ್ನು ಟೀಕಿಸುವುದು ಸೂರ್ಯನಿಗೆ ಉಗಿದಂತೆ, ನಿಮ್ಮ ಮುಖಕ್ಕೆ ಮೆತ್ತಿಕೊಳ್ಳುತ್ತೆ: ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಟೀಕೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. | Read More

ETV Bharat Live Updates - CM SIDDARAMAIAH

05:04 PM, 02 Nov 2024 (IST)

ದಾವಣಗೆರೆಯ ಈ ಗ್ರಾಮದಲ್ಲಿ 200 ವರ್ಷಗಳಿಂದ ದೀಪಾವಳಿ ಆಚರಿಸೋಲ್ಲ: ಬೆಳಕಿನ ಹಬ್ಬ ಇವರಿಗೆ ಕರಾಳ ದಿನ!

ದೀಪಾವಳಿಯನ್ನು ದೇಶ - ವಿದೇಶಗಳಲ್ಲಿ ಭಾರತೀಯರು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಾವಣಗೆರೆಯ ಲೋಕಿಕೆರೆ ಗ್ರಾಮದಲ್ಲಿ ಕರಾಳ ದೀಪಾವಳಿ ಆಚರಿಸಲಾಗುತ್ತೆ. ಈ ಕುರಿತ ಈಟಿವಿ ಭಾರತ ಕನ್ನಡ ವರದಿಗಾರ ನೂರ್​ ಮಾಡಿರುವ ವಿಶೇಷ ವರದಿ ಇಲ್ಲಿದೆ. | Read More

ETV Bharat Live Updates - LOKIKERE VILLAGERS

04:55 PM, 02 Nov 2024 (IST)

ಚನ್ನಪಟ್ಟಣ, ರಾಮನಗರಕ್ಕೆ ಏನೂ ಕೊಡದ ಕುಮಾರಸ್ವಾಮಿಗೆ ಚುನಾವಣೆ ಬಂದ್ರೆ ಅಳು ಬರುತ್ತದೆ: ಡಿ ಕೆ ಶಿವಕುಮಾರ್

ಯಾವುದಾದರೂ ಒಂದು ಗುರುತಿಸುವ ಕೆಲಸವನ್ನು ಚನ್ನಪಟ್ಟಣಕ್ಕೆ ಮಾಡಿರೋದನ್ನು ದಯವಿಟ್ಟು ಹೇಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್​ ನೀಡಿದರು. | Read More

ETV Bharat Live Updates - UNION MINISTER H D KUMARASWAMY

04:49 PM, 02 Nov 2024 (IST)

'ನಮ್ಮ ಭೂಮಿ, ನಮ್ಮ ಹಕ್ಕು' ಹೆಸರಲ್ಲಿ ಪ್ರಧಾನಿ ಮೋದಿ, ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಿಗೆ ಪತ್ರ: ಆರ್. ಅಶೋಕ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಮತ್ತು ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು. | Read More

ETV Bharat Live Updates - BENGALURU

04:29 PM, 02 Nov 2024 (IST)

ಸಿದ್ದಾಪುರದಲ್ಲಿ ಟ್ಯಾಂಬೋ ಆರ್ಟ್​ ಮೂಲಕ ಗಮನ ಸೆಳೆದ ಭತ್ತದ ಗದ್ದೆ; ಇದು ಸಂಪೂರ್ಣ ಸಾವಯವ

ಜರ್ಮನ್​ನ ಚಾಕೋಪರ್ಟ್ ಭತ್ತದ ತಳಿಯ ಟ್ಯಾಂಬೋ ಆರ್ಟ್ ಅನ್ನು ಮುಂದಿನ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಹಾಗೂ ಸಾವಯವ ಮೇಳದಲ್ಲಿ ಪ್ರದರ್ಶಿಸಲಾಗುವುದು. | Read More

ETV Bharat Live Updates - GERMAN CHOCOPERT RICE VARIETY

04:20 PM, 02 Nov 2024 (IST)

ಆರ್ಡರ್ ನೆಪದಲ್ಲಿ ಅಮೆಜಾನ್ ಸಂಸ್ಥೆಗೆ 11.45 ಲಕ್ಷ ರೂ. ವಂಚನೆ: ಆರೋಪಿಗಳ ಬಂಧನ

ಅಮೆಜಾನ್​ ಸಂಸ್ಥೆಗೆ ಮೋಸ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. | Read More

ETV Bharat Live Updates - MANGALURU

04:15 PM, 02 Nov 2024 (IST)

ವಕ್ಫ್​ ಆಸ್ತಿ ರಾಷ್ಟ್ರೀಕರಣ ಮಾಡುವ ಪ್ರಶ್ನೆಯೇ ಇಲ್ಲ: ಪ್ರಲ್ಹಾದ್​ ಜೋಶಿ

ವಕ್ಫ್​ಗೆ ಇರುವ ಅಪರಿಮಿತ ಅಧಿಕಾರವನ್ನು ರದ್ದುಗೊಳಿಸಲು ಕಾಂಗ್ರೆಸ್ ಸರ್ಕಾರ ಸಹಕರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ. | Read More

ETV Bharat Live Updates - WAQF PROPERTY

04:11 PM, 02 Nov 2024 (IST)

ಕುಮಾರಸ್ವಾಮಿಯವರ ಕಣ್ಣೀರು ಚುನಾವಣೆಗೆ ಮಾತ್ರ: ಡಿ.ಕೆ. ಸುರೇಶ್

ಜನನಾಯಕರು ಜನರ ಕಣ್ಣೀರು ಒರೆಸಬೇಕು. ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸುವುದು ಸ್ವಾರ್ಥಕ್ಕೆ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ಹೆಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. | Read More

ETV Bharat Live Updates - H D KUMARASWAMY

04:08 PM, 02 Nov 2024 (IST)

ಮುಡಾ ಪ್ರಕರಣದಿಂದ ಸಿದ್ದರಾಮಯ್ಯನವರಿಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿದೆ: ಹೆಚ್.ಡಿ‌ ಕುಮಾರಸ್ವಾಮಿ

ಮೊದಲು ಕುಂಕುಮವೇ ಹಾಕುತ್ತಿರಲಿಲ್ಲ ಈಗ ಸಿದ್ದರಾಮಯ್ಯ ಹುಡುಕಿಕೊಂಡು ಹೋಗಿ ದೇವರ ದರ್ಶನ ಮಾಡಿ ಕುಂಕುಮ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. | Read More

ETV Bharat Live Updates - MYSURU

03:06 PM, 02 Nov 2024 (IST)

ರೈತರಿಗೆ ನೀಡಿದ ನೋಟಿಸ್ ತಕ್ಷಣ ವಾಪಸ್ ಪಡೆಯಿರಿ, ಪಹಣಿ ತಿದ್ದುಪಡಿ ರದ್ದು ಮಾಡಿ: ಸಿಎಂ ಖಡಕ್ ಸೂಚನೆ

ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಿರುವ ನೋಟಿಸ್ ತಕ್ಷಣವೇ ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದರು. | Read More

ETV Bharat Live Updates - WAQF ISSUE

02:03 PM, 02 Nov 2024 (IST)

ಚನ್ನಪಟ್ಟಣದಲ್ಲಿ NDA ಅಭ್ಯರ್ಥಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ: ಹೆಚ್​ಡಿಕೆ ವಿಶ್ವಾಸ

ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ತಮ್ಮ ಮಗ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. | Read More

ETV Bharat Live Updates - MYSURU

01:26 PM, 02 Nov 2024 (IST)

ಪರ ಭಾಷಿಕರಿಗೆ ಕನ್ನಡ ಕಲಿಸಲು ವಿನೂತನ ಅಭಿಯಾನ ಆರಂಭಿಸಿದ ಬೆಂಗಳೂರು ಪೊಲೀಸರು

ಪರ ಭಾಷಿಕರಿಗೆ ಕನ್ನಡ ಕಲಿಸಲು ವಿನೂತನ ಅಭಿಯಾನವೊಂದನ್ನು ಬೆಂಗಳೂರು ಪೊಲೀಸರು ಆರಂಭಿಸಿದ್ದಾರೆ. ಈ ಮೂಲಕ ಅನ್ಯ ಭಾಷಿಕರು ಆಟೋ ಚಾಲಕರ ಜೊತೆ ಸುಲಭವಾಗಿ ಕನ್ನಡದಲ್ಲಿಯೇ ವ್ಯವಹರಿಸಬಹುದಾಗಿದೆ. | Read More

ETV Bharat Live Updates - BENGALURU POLICE NEW CAMPAIGN

12:54 PM, 02 Nov 2024 (IST)

ರೈತರಿಗೆ ನೋಟಿಸ್ ಕೊಡದಂತೆ ಸಿಎಂ ಡಿಸಿಗಳಿಗೆ ಸೂಚಿಸಿದ್ದಾರೆ: ಸಚಿವ ಜಿ.ಪರಮೇಶ್ವರ್

ವಕ್ಫ್ ವಿಚಾರವಾಗಿ ಸಿಎಂ ಸದ್ಯದಲ್ಲಿ ಯಾವ ರೈತರಿಗೂ ನೋಟಿಸ್ ಕೊಡಬೇಡಿ, ನಂತರ ಪರಿಶೀಲಿಸೋಣ ಅಂದಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ. | Read More

ETV Bharat Live Updates - CM INSTRUCTIONS ON WAQF NOTICE

12:49 PM, 02 Nov 2024 (IST)

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ವೇಳೆ ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. | Read More

ETV Bharat Live Updates - DEADLY ATTACK YOUNG MAN

12:42 PM, 02 Nov 2024 (IST)

ದಾಳಿಂಬೆ ಬೆಳೆಗೆ ವರುಣಾಘಾತ: ಚುಕ್ಕಿ ರೋಗಕ್ಕೆ ನೆಲಕಚ್ಚಿದ ಫಸಲು, ಚಿನ್ನದಂತಾ ಬೆಲೆ ಇರುವಾಗ ರೈತನಿಗೆ ಬರಸಿಡಿಲು

ದಾವಣಗೆರೆಯಲ್ಲಿ ರೈತನೊಬ್ಬ ನಾಲ್ಕು ವರ್ಷಗಳಿಂದ ಪೋಷಿಸಿಕೊಂಡು ಬಂದಿದ್ದ ದಾಳಿಂಬೆ ಮಳೆಯಿಂದಾಗಿ ಚುಕ್ಕಿ ರೋಗಕ್ಕೆ ತುತ್ತಾಗಿದೆ. | Read More

ETV Bharat Live Updates - DAVANAGERE

10:18 AM, 02 Nov 2024 (IST)

ಚಲಿಸುತ್ತಿದ್ದ ಸ್ಕೂಟರ್‌ನಲ್ಲಿ ಕುಳಿತು ಪಟಾಕಿ ಅಂಟಿಸಿ ಪುಂಡಾಟ: ದಂಡ ವಿಧಿಸಿದ ಪೊಲೀಸರು

ಹೆಚ್.ಬಿ.ಆರ್ ಲೇಔಟ್ ವ್ಯಾಪ್ತಿಯಲ್ಲಿ ಇಬ್ಬರು ರಾತ್ರಿ ವೇಳೆ ಸ್ಕೂಟರ್​ ಚಲಾಯಿಸುತ್ತಾ ಪಟಾಕಿಗೆ ಬೆಂಕಿ ಇಟ್ಟು ಇತರರೆಡೆ ಎಸೆದಿದ್ದರು. ಈ ಆರೋಪಿಗಳನ್ನು ಹೆಣ್ಣೂರು ಸಂಚಾರ ಪೊಲೀಸರು ಪತ್ತೆ ಹಚ್ಚಿ ದಂಡ ಕಟ್ಟಿಸಿಕೊಂಡಿದ್ದಾರೆ. | Read More

ETV Bharat Live Updates - BENGALURU

09:06 AM, 02 Nov 2024 (IST)

ಒಂದು ತಿಂಗಳಲ್ಲಿ 38,000 ಮನೆಗಳ ಮೂಲಕ ವಸತಿ ರಹಿತರಿಗೆ ಸೂರು: ಸಚಿವ ಜಮೀರ್ ಅಹ್ಮದ್

ಶುಕ್ರವಾರ ಹೊಸಪೇಟೆ ಪುನೀತ್ ರಾಜಕುಮಾರ್​ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗಿದ್ದು, ಜಮೀರ್ ಅಹ್ಮದ್ ಖಾನ್ ಧ್ವಜಾರೋಹಣ ನೆರವೇರಿಸಿದ್ದಾರೆ. | Read More

ETV Bharat Live Updates - VIJAYANAGARA

08:08 AM, 02 Nov 2024 (IST)

ತನಿಖಾಧಿಕಾರಿಯಿಂದ ತನಿಖಾ ವರದಿಯ ಪ್ರತಿ ಪುಟಕ್ಕೂ ಸಹಿ ಹಾಕಬೇಕೆಂದು ನಿರ್ದೇಶನ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತನಿಖಾಧಿಕಾರಿ ಕೋರ್ಟ್‌ಗೆ ಕೇಸ್‌ ಡೈರಿ ಸಲ್ಲಿಸಿದಾಗ ಡೈರಿಯ ಅದರ ಪ್ರತಿ ಪುಟದಲ್ಲೂ ಸಹಿ ಹಾಕುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. | Read More

ETV Bharat Live Updates - HC DISMISSED APPLICATION

07:52 AM, 02 Nov 2024 (IST)

ಹುಬ್ಬಳ್ಳಿ: ರಜೆ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ

ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್​ ವ್ಯವಸ್ಥೆ ಮಾಡಲಾಗಿದೆ. | Read More

ETV Bharat Live Updates - SPECIAL BUSES IN HUBLI

07:01 AM, 02 Nov 2024 (IST)

ದೀಪಾವಳಿ ಪಟಾಕಿ ಅವಘಡ: ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣಗಳ ಸಂಖ್ಯೆ 54ಕ್ಕೆ ಏರಿಕೆ

ಬೇರೆಯವರು ಸಿಡಿಸಿರುವ ಪಟಾಕಿಯಿಂದ ಕಣ್ಣಿನ ಗಾಯಕ್ಕೊಳಗಾದವರ ಸಂಖ್ಯೆ ಅಧಿಕವಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಮೊದಲೇ ಜಾಗೃತಿ ಮೂಡಿಸಿದ್ದರೂ ಪಟಾಕಿ ದುರಂತಗಳು ಸಂಭವಿಸುತ್ತಲೇ ಇವೆ. | Read More

ETV Bharat Live Updates - BENGALURU
Last Updated : Nov 2, 2024, 10:27 PM IST

ABOUT THE AUTHOR

...view details