ಕರ್ನಾಟಕ

karnataka

ETV Bharat / state

ಗಂಗಾವತಿ: ಒಂದು ತಿಂಗಳ ಬಳಿಕ ಕಂಪ್ಲಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತ - Kampli Bridge - KAMPLI BRIDGE

ಕಂಪ್ಲಿ ಮತ್ತು ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ತುಂಗಭದ್ರಾ ನದಿಯ ಸೇತುವೆ ಮೇಲೆ ಭಾರಿ ವಾಹನಗಳನ್ನು ಬಿಟ್ಟು ಉಳಿದ ವಾಹನಗಳ ಓಡಾಟಕ್ಕೆ ಅನುಮತಿ‌ ನೀಡಲಾಗಿದೆ.

ಕಂಪ್ಲಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತ
ಕಂಪ್ಲಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತ (ETV Bharat)

By ETV Bharat Karnataka Team

Published : Aug 26, 2024, 1:09 PM IST

ಗಂಗಾವತಿ:ಕಂಪ್ಲಿ ಮತ್ತು ಗಂಗಾವತಿ ಮಧ್ಯೆ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಇಂದು ಅನುಮತಿ‌ ನೀಡಲಾಗಿದೆ.

ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಬಿಟ್ಟಿದ್ದರಿಂದ ಸೇತುವೆ ಮೇಲೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ನದಿಯ ನೀರಿನ ಮಟ್ಟ ಇಳಿಕೆ ಕಂಡ ಹಿನ್ನೆಲೆ ಸೇತುವೆ ಪರಿಶೀಲಿಸಿ, ಸದೃಢವಾಗಿರುವುದನ್ನು ಖಚಿತಪಡಿಸಿಕೊಂಡು ಭಾರೀ ವಾಹನಗಳನ್ನು ಹೊರತುಪಡಿಸಿ ಬೈಕ್, ಆಟೋ, ಕಾರು ಮತ್ತು ಶಾಲಾ ವಾಹನ, ಬಸ್​ ಓಡಾಟಕ್ಕೆ ಅನುಮತಿ‌ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

ಗಂಗಾವತಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್​ ವಿಶ್ವನಾಥ್ ನೇತೃತ್ವದ ಅಧಿಕಾರಿಗಳ ತಂಡ ಸೇತುವೆ ಪರಿಶೀಲನೆ ನಡೆಸಿತ್ತು. ರಾಜ್ಯ ಹೆದ್ದಾರಿ ಸಂಖ್ಯೆ-29, ಲಿಂಗಸಗೂರು - ಕುಡಿತಿನಿ ರಸ್ತೆಯ ಕಂಪ್ಲಿ ಸೇತುವೆ ಸದೃಢವಾಗಿದ್ದು, ಭಾರಿ ಗಾತ್ರದ ಸರಕು ಸಾಗಣೆ ವಾಹನ ಹೊರತುಪಡಿಸಿ ಇತರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಸ ಪಾರ್ಕಿಂಗ್​ ನಿಯಮ, ಉಲ್ಲಂಘಿಸಿದರೆ ದಂಡಾಸ್ತ್ರ: ಹೊರ ಊರಿನವರ ಮನೆಗೆ ಬರುತ್ತೇ ನೋಟಿಸ್‌! - new parking rules

ABOUT THE AUTHOR

...view details