ಬೆಂಗಳೂರು :ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ವಿಧಾನಸೌಧದಲ್ಲಿ ಇಂದು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಮತ ಹಾಕಿದ್ದೀರಾ? ಎಂಬ ಪ್ರಶ್ನೆಗೆ ಅದು ನನ್ನ ಆತ್ಮಕ್ಕೆ ಗೊತ್ತಿದೆ ಎಂದರು.
ಇದೇ ವೇಳೆ ಬಿಜೆಪಿಯಿಂದ ಅಡ್ಡ ಮತದಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಒಂದು ಅಡ್ಡ ಮತದಾನ ಆಗಿರಬಹುದು. ನಮ್ಮ ಎಲ್ಲಾ ಮತಗಳು ಈಗಾಗಲೇ ಚಲಾವಣೆ ಆಗಿವೆ. ಇನ್ನೆಲ್ಲಿ ಹೆಚ್ಚುವರಿ ಮತಗಳು ಹೋಗುತ್ತವೆ. ಕಾಂಗ್ರೆಸ್ನವರೇ ಬಂದು ಬಿಜೆಪಿಗೆ ಹಾಕಬೇಕು ಅಷ್ಟೇ ಎಂದರು.