ಹುಬ್ಬಳ್ಳಿ:ಉದ್ಯಮಿ ಹಾಗೂ ಬಂಗಾರದ ವ್ಯಾಪಾರಿ ಗಣೇಶ ಶೇಟ್ಅವರ ಮನೆ, ಕಚೇರಿ, ಅಂಗಡಿ ಹಾಗೂ ಒಡೆತನದ ಹೋಟೆಲ್ಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 116 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಈಗಾಗಲೇ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಹುಬ್ಬಳ್ಳಿಯ ಅಶೋಕ ನಗರದ ನಿವಾಸ, ಆಭರಣ ಮಳಿಗೆ, ಅಮರಗೋಳದ ರೆಸಾರ್ಟ್, ಸೇರಿದಂತೆ ಇನ್ನಿತರ ಅವರ ಒಡೆತನದ ವ್ಯಾಪಾರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಐಟಿ ಅಧಿಕಾರಿಗಳು ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.