ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ಅಂತಾರಾಜ್ಯ ಕಳ್ಳರು ತಗ್ಲಾಕೊಂಡಿದ್ದು, ಒಟ್ಟು 14 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ತಮಿಳುನಾಡು ಮೂಲದ ಕೊಡಂಗು ಸ್ವಾಮಿ (58) ಇಂದಿರರಾಜ್ @ ಇಂದ್ರರಾಜ್ (35) ಕೇರಳ ಮೂಲದ ಅಜಿತ್ (23)ಜೇಸುದಾಸ್ @ ಯೇಸುದಾಸ್ (39) ಬಂಧಿತರು. ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಬೇಗೂರು ಹಾಗೂ ಚಾಮರಾಜನಗರ ಮತ್ತು ಕೋಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 14 ಕಳವು ಪ್ರಕರಣ ಎಸಗಿದ್ದ ಇವರುಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಒಂದು ಕೇಸ್ನಿಂದ 14 ಕೇಸ್ ಬೆಳಕಿಗೆ :ಹನೂರಿನ ಆಶ್ರಯ ಬಡಾವಣೆ ನಿವಾಸಿ ಸಾಬೀರ್ ಅಹಮದ್ ಮನೆಯಲ್ಲಿ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಪ್ರಕರಣದ ಬೆನ್ನಟ್ಟಿದ ಪೊಲೀಸರು ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲು ಖದೀಮರ ಗ್ಯಾಂಗ್ ಇರುವ ಮಾಹಿತಿ ಅರಿತು ಬಂಧಿಸಿದ್ದಾರೆ.