ಕರ್ನಾಟಕ

karnataka

ETV Bharat / state

ಚಳಿಗಾಲದ ಅಧಿವೇಶನ: ಬೆಂಗಳೂರು - ಬೆಳಗಾವಿ ನಡುವೆ ವಿಶೇಷ ವಿಮಾನ ಸೇವೆ - SPECIAL FLIGHT FOR BELAGAVI SESSION

ಮುಂಬರುವ ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ವಿಮಾನ ಸೇವೆ ಇರಲಿದೆ.

IndiGo Special Flight
ಇಂಡಿಗೋ ವಿಮಾನ (IANS)

By ETV Bharat Karnataka Team

Published : Dec 6, 2024, 6:58 AM IST

ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಇಂಡಿಗೋ ಏರ್​​ಲೈನ್ಸ್ ಸಂಸ್ಥೆಯು ಡಿಸೆಂಬರ್ 9ರಿಂದ 19ರವರೆಗೆ ಬೆಂಗಳೂರು - ಬೆಳಗಾವಿ ನಡುವೆ ವಿಶೇಷ ವಿಮಾನ ಸಂಚಾರ ಆರಂಭಿಸುತ್ತಿದೆ.

ಅಧಿವೇಶನದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ ಸೇರಿ ಸಚಿವರು, ಶಾಸಕರು, ಪ್ರತಿಪಕ್ಷ ನಾಯಕರು ಮತ್ತು ಸರ್ಕಾರದ ಅಧಿಕಾರಿ ವರ್ಗ ಬೆಳಗಾವಿಗೆ ಆಗಮಿಸುತ್ತಾರೆ. ಹಾಗಾಗಿ, ಇವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯು ವಿಶೇಷ ಸಂಚಾರ ಆರಂಭಿಸಿದೆ.

ಇದನ್ನೂ ಓದಿ:'ಸುವರ್ಣ ಸೌಧ ಉತ್ತರದ ಶಕ್ತಿಕೇಂದ್ರವಾಗಲಿ': ಚಳಿಗಾಲದ ಅಧಿವೇಶನದ ವೇಳೆ ಬೆಳಗಾವಿ 2ನೇ ರಾಜಧಾನಿಯ ಕೂಗು

ಈ ಕುರಿತು ಸಂಸದ ಜಗದೀಶ ಶೆಟ್ಟರ್ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಸಲ್ಲಿಸಿದ್ದರು. ಈ ವಿಮಾನವು ಬೆಳಗ್ಗೆ 6ಕ್ಕೆ ಬೆಂಗಳೂರಿನಿಂದ ಹೊರಟು 7ಕ್ಕೆ ಬೆಳಗಾವಿಯನ್ನು ತಲುಪಲಿದೆ. ಪುನಃ 7.30ಕ್ಕೆ ಬೆಳಗಾವಿಯಿಂದ ಹೊರಟು 8.30ಕ್ಕೆ ಬೆಂಗಳೂರನ್ನು ತಲುಪಲಿದೆ. ಈ ವಿಶೇಷ ವಿಮಾನ 189 ಆಸನಗಳನ್ನು ಹೊಂದಿದೆ. ಅಧಿವೇಶನ ಮುಗಿದ ಬಳಿಕ ಡಿಸೆಂಬರ್ 20ರಿಂದ ATR72 ವಿಮಾನ ಸೇವೆಗಳು ಯಥಾ ಸ್ಥಿತಿಯಲ್ಲಿ ಮುಂದುವರೆಯಲಿವೆ.

ಇದನ್ನೂ ಓದಿ:ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಆಗುವ ಖರ್ಚೆಷ್ಟು? ಏನಂತಾರೆ ಜಿಲ್ಲಾಧಿಕಾರಿ?

ABOUT THE AUTHOR

...view details