ಬೆಂಗಳೂರು : ತೆರಿಗೆ ಮತ್ತು ದಂಡವನ್ನ ಮನ್ನಾ ಮಾಡುವುದಾಗಿ ಲಂಚ ಸ್ವೀಕರಿಸಿದ್ದ ಕೇಂದ್ರೀಯ ಅಬಕಾರಿ ಮತ್ತು ತೆರಿಗೆ (ಜಿಎಸ್‌ಟಿ) ವಿಭಾಗದ ಮಾಜಿ ಸೂಪರಿಂಟೆಂಡೆಂಟ್‌ಗೆ 5 ಲಕ್ಷ ರೂ. ದಂಡದ ಸಹಿತ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ವಲಯದ ಅಬಕಾರಿ ಮತ್ತು ಕೇಂದ್ರ ತೆರಿಗೆ (ಜಿಎಸ್‌ಟಿ) ವಿಭಾಗದ ಮಾಜಿ ಸೂಪರಿಂಟೆಂಡೆಂಟ್ ಜಿತೇಂದ್ರ ಕುಮಾರ್ ದಗೂರ್ಗೆ ಶಿಕ್ಷೆ ವಿಧಿಸಲಾಗಿದೆ.
2015-16ರ ಆರ್ಥಿಕ ವರ್ಷದ ತೆರಿಗೆ ಮತ್ತು ದಂಡವನ್ನ ಮನ್ನಾ ಮಾಡಲು 25 ಸಾವಿರ ರೂ. ಲಂಚಕ್ಕೆ ಬೇಡಿಯಿಟ್ಟಿದ್ದ ಆರೋಪಿತ ಅಧಿಕಾರಿ ವಿರುದ್ಧ 2021ರ ಮಾರ್ಚ್‌ನಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಸಿಬಿಐ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ಆರೋಪಿತನನ್ನ ವಶಕ್ಕೆ ಪಡೆದಿದ್ದರು. ತನಿಖೆ ಕೈಗೊಂಡ ಸಿಬಿಐ 2021ರ ಆಗಸ್ಟ್‌ನಲ್ಲಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿತ್ತು.
ಇದನ್ನೂ ಓದಿ :₹4 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧಿಕಾರಿ ಲೋಕಾಯುಕ್ತ ಬಲೆಗೆ - Chitradurga Lokayukta Raid