ಚಿಕ್ಕೋಡಿ: ಗೋವಾದಿಂದ ಆಂಧ್ರಪ್ರದೇಶಕ್ಕೆ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ವಾಹನವನ್ನು ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಾದಿಂದ ಬೆಳಗಾವಿ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ವಾಹನವನ್ನು ಮಕನಮರಡಿ ಪೊಲೀಸರು ತಪಾಸಣೆ ಮಾಡಿದಾಗ 28 ಲಕ್ಷ ಮೌಲ್ಯದ 16,848 ಲೀಟರ್ ಅಕ್ರಮ ಮದ್ಯ ದೊರೆತಿದೆ. ಈ ಕುರಿತು ಇಬ್ಬರು ಆರೋಪಿಗಳಾದ ಸಂತೋಷ ಹಲಗೇ, ಸವಾಶಿವ ಗೇರಡೆ ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಹಾರ್ಡ್‌ವೇರ್ ವಸ್ತು ಸಾಗಾಟ ಮಾಡುತ್ತೇವೆ ಎಂದು ಲಾರಿ ಮಾಲೀಕ ಲೈಸನ್ಸ್ ಪಡೆದಿದ್ದು, ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಬೆಳಗಾವಿ ಎಸ್‌ಪಿ ಭೀಮಶಂಕರ್ ಗುಳೇದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಲೋಕಸಭೆ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭೆಯ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದೆ. ಹಾಗೆಯೇ ತೆಲಂಗಾಣ ಸೇರಿದಂತೆ 10 ರಾಜ್ಯಗಳಲ್ಲಿ 96 ಲೋಕಸಭೆ ಕ್ಷೇತ್ರಗಳಿಗೆ ಅಂದೇ ಮತದಾನ ನಡೆಯಲಿದೆ.
ಇದನ್ನೂ ಓದಿ:ಲಾರಿ-ಟಾಟಾ ಏಸ್ ಮಧ್ಯೆ ಅಪಘಾತ, ಕಂತೆ-ಕಂತೆ ಹಣ ಕಂಡ ಗಾಬರಿಗೊಂಡ ಸ್ಥಳೀಯರು! - HUGE CASH FOUND