ಕರ್ನಾಟಕ

karnataka

ETV Bharat / state

ಮಂಗಳೂರು: ಐಸ್ ಕ್ರೀಂ ಮ್ಯಾನ್ ಖ್ಯಾತಿಯ ರಘುನಂದನ್ ಕಾಮತ್ ನಿಧನ - Raghunandan Kamath passes away - RAGHUNANDAN KAMATH PASSES AWAY

ಐಸ್ ಕ್ರೀಂ ಮ್ಯಾನ್ ಖ್ಯಾತಿಯ ರಘುನಂದನ್ ಕಾಮತ್ ಅವರು ನಿನ್ನೆ (ಮೇ 17 ರಂದು) ಮುಂಬೈನಲ್ಲಿ ನಿಧನರಾರಾದರು.

Raghunandan Kamath  Ice cream man  Dakshina Kannada
ಐಸ್ ಕ್ರೀಂ ಮ್ಯಾನ್ ಖ್ಯಾತಿಯ ರಘುನಂದನ್ ಕಾಮತ್ (ETV Bharat)

By ETV Bharat Karnataka Team

Published : May 18, 2024, 10:48 AM IST

ಮಂಗಳೂರು:ಐಸ್ ಕ್ರೀಂ ಮ್ಯಾನ್ ಎಂದೇ ಖ್ಯಾತರಾಗಿದ್ದ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (70) ಅವರು ಮೇ 17ರಂದು ಮುಂಬೈನಲ್ಲಿ ನಿಧನರಾದರು. ಮೃತರಿಗೆ ಪತ್ನಿ ಹಾಗು ಇಬ್ಬರು ಪುತ್ರರು ಇದ್ದಾರೆ.

ರಘುನಂದನ್ ಅವರು 1954ರಲ್ಲಿ ಮೂಲ್ಕಿಯಲ್ಲಿ ಬಡ ಕುಟಂಬವೊಂದರಲ್ಲಿ ಜನಿಸಿದ್ದರು. ಕಾಮತ್ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ಕಾಮತ್ ಅವರು ತಮ್ಮ 15ನೇ ವಯಸ್ಸಿನಲ್ಲಿ ಅಣ್ಣನ ಹೋಟೆಲ್​ಗೆ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದರು. ನಂತರ ಹೋಟೆಲ್ ಉದ್ಯಮ ಆರಂಭಿಸಿ ಹಣ್ಣುಗಳಿಂದಲೇ ಐಸ್ ಕ್ರೀಂ ತಯಾರಿಸಿ ಜನಪ್ರಿಯರಾದರು.

ಮುಂಬೈಯಲ್ಲಿ 1984 ನ್ಯಾಚುರಲ್ಸ್ ಐಸ್ ಕ್ರೀಂ ಆರಂಭಿಸಿದ್ದರು. ಅದು ದೇಶಾದ್ಯಂತ ಜನಪ್ರಿಯವಾಗಿ ದೊಡ್ಡ ಉದ್ಯಮವಾಗಿ ಬೆಳೆದಿದೆ. 40ಕ್ಕೂ ಅಧಿಕ ನಗರಗಳಲ್ಲಿ 140ಕ್ಕೂ ಅಧಿಕ ಮಳಿಗೆಗಳನ್ನು ನ್ಯಾಚುರಲ್ ಐಸ್‌ಕ್ರೀಂ ತನ್ನ ಔಟ್ ಲೆಟ್‌ಗಳನ್ನು ಹೊಂದಿದ್ದು, 400 ಕೋಟಿ ರೂ.ಗಳಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. ಕಾಮತ್ ಅವರು ಸ್ವತಃ ಕುಂಡಗಳಲ್ಲಿ ಹಣ್ಣುಗಳನ್ನು ಬೆಳೆಸುವ ಆಸಕ್ತಿ ಹೊಂದಿದ್ದರು. ಮಾವು, ಗೇರು, ಹಲಸು ಸಹಿತ ಹಲವಾರು ಹಣ್ಣಿನ ಗಿಡಗಳನ್ನು ಮನೆಯ ತಾರಸಿಯಲ್ಲಿ ಸ್ವತಃ ಬೆಳೆಸಿ ಯಶಸ್ಸು ಕಂಡಿದ್ದರು. ಐಸ್ ಕ್ರೀಂಗಳಲ್ಲಿ ಕೃತಕ ಸಾಮಗ್ರಿಗಳು ಇಲ್ಲದ ಸ್ಥಳೀಯ ಸ್ವಾದದ ಬ್ರಾಂಡ್‌ಗಳನ್ನು ಸೃಷ್ಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು.

ಐಸ್ ಕ್ರೀಂ ಮ್ಯಾನ್ ಖ್ಯಾತಿಯ ರಘುನಂದನ್ ಕಾಮತ್ (ETV Bharat)

ಐಸ್‌ಕ್ರೀಂ ಮ್ಯಾನ್ ಆಫ್‌ ಇಂಡಿಯಾ:ನಾಲ್ಕು ದಶಕಗಳ ಹಿಂದೆ ಐಸ್ ಕ್ರೀಂ ಎನ್ನುವುದು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಕಾಮತ್ ಅವರು ಐಸ್‌ಕ್ರೀಂ ಅನ್ನು ಜಯಪ್ರಿಯಗೊಳಿಸಿ ಎಲ್ಲರಿಗೂ ಲಭ್ಯವಾಗುವಂತೆ ಮತ್ತು ಅದು ಸಮಾರಂಭಗಳಲ್ಲಿ ಒಂದು ಅಗತ್ಯದ ಪದಾರ್ಥ ಎಂಬಷ್ಟರ ಮಟ್ಟಿಗೆ ಬೆಳೆಸಿದರು.

ರಘುನಂದನ್ ಕಾಮತ್ (ETV Bharat)

ಐಸ್‌ಕ್ರೀಂನ ಗುಣಮಟ್ಟ ಮತ್ತು ಗ್ರಾಹಕರ ಸಂತೃಪ್ತಿಗೆ ಪ್ರಥಮ ಆದ್ಯತೆ ನೀಡಿದ್ದರು. ಅವರು ಹಲಸು, ಸೀಯಾಳ, ಗೇರುಹಣ್ಣು, ಇತ್ಯಾದಿ ಸ್ಥಳೀಯವಾದ ರುಚಿಗಳನ್ನು ಪರಿಚಯಿಸಿದ್ದರು. ಅವರು ಐಸ್‌ಕ್ರೀಂ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಸಿದ್ಧಿಗಳಿಸಿದ್ದರು.

ಇದನ್ನೂ ಓದಿ:ಟ್ರ್ಯಾಕ್ಟರ್​​​ಗೆ ಬಸ್ ಡಿಕ್ಕಿ: ಹುಲಿಗೆಮ್ಮನ ದರ್ಶನ ಮುಗಿಸಿ ಬರುತ್ತಿದ್ದ ನಾಲ್ವರು ಸಾವು - Koppal Accident

ABOUT THE AUTHOR

...view details