ಕರ್ನಾಟಕ

karnataka

ETV Bharat / state

ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನಿವೃತ್ತಿ: ಸೇವೆ ಸ್ಮರಿಸಿದ ಸುರೇಶ್ ಕುಮಾರ್ - IAS Officer Retired - IAS OFFICER RETIRED

ರಾಜ್ಯದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ 1989ನೇ ಬ್ಯಾಚಿನ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನಿವೃತ್ತಿ ಹೊಂದುತ್ತಿದ್ದು, ಮಾಜಿ ಸಚಿವ ಸುರೇಶ್ ಕುಮಾರ್ ಅವರು ಸಿಂಗ್ ಅವರ ಸೇವೆ ಸ್ಮರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

IAS OFFICER RETIRED
ರಾಕೇಶ್ ಸಿಂಗ್ ಮತ್ತು ಸುರೇಶ್ ಕುಮಾರ್ (ETV Bharat)

By ETV Bharat Karnataka Team

Published : May 31, 2024, 11:03 PM IST

ಬೆಂಗಳೂರು:ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನಿವೃತ್ತರಾಗಿದ್ದು, ರಾಜ್ಯಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಮಾಜಿ ಸಚಿವ ಸುರೇಶ್ ಕುಮಾರ್ ಸ್ಮರಿಸಿದ್ದಾರೆ. ಅಲ್ಲದೇ ನಿವೃತ್ತಿ ಜೀವನಕ್ಕೆ ಶುಭ ಕೋರಿದ್ದಾರೆ.

ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ (ETV Bharat)

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸುರೇಶ್ ಕುಮಾರ್, ಇಂದು ನಮ್ಮ ರಾಜ್ಯದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ 1989ನೇ ಬ್ಯಾಚಿನ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನಿವೃತ್ತಿ ಹೊಂದುತ್ತಿದ್ದಾರೆ. ಇವರ ಕುಟುಂಬದ ನಾಲ್ಕು ತಲೆಮಾರಿನ ಅಧಿಕಾರಿಗಳು ದೇಶದ ಆಡಳಿತ ಸೇವೆಯಲ್ಲಿ ಕಾರ್ಯ ನಿರ್ವಹಿಸಿರುವುದು ವಿಶೇಷ. ಇವರ ತಾತ ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಐಸಿಎಸ್ ಅಧಿಕಾರಿಯಾಗಿದ್ದರು. ತಂದೆ ಉತ್ತರಪ್ರದೇಶ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ರಾಕೇಶ್ ಸಿಂಗ್ ಕರ್ನಾಟಕ ಕೇಡರ್ ಅಧಿಕಾರಿ. ಇದೀಗ ಮಗಳು ಸಂಸ್ಕೃತಿ ಸಿಂಗ್ ಐಎಎಸ್​​ಗೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರಾಕೇಶ್ ಸಿಂಗ್ ಅವರನ್ನು ನಾನು ಅನೇಕ ವರ್ಷಗಳಿಂದ ಬಲ್ಲೆ. ಬಿಜಾಪುರದ ಅಸಿಸ್ಟೆಂಟ್ ಕಮಿಷನರ್ ಆಗಿ 1991 ರಲ್ಲಿ ನಮ್ಮ ರಾಜ್ಯದ ಸೇವೆ ಪ್ರಾರಂಭಿಸಿದ ಸಿಂಗ್, ಇದುವರೆವಿಗೆ ಐದು ಜಿಲ್ಲೆಗಳಲ್ಲಿ ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ರಾಜ್ಯಸಭೆಯ ಉಪ ಸಭಾಪತಿಗಳ ವಿಶೇಷಾಧಿಕಾರಿಯಾಗಿ, ಕೇಂದ್ರ ರೈಲ್ವೆ ಸಚಿವ ಹಾಗೂ ಕಾನೂನು ಸಚಿವರ ಆಪ್ತ ಕಾರ್ಯದರ್ಶಿಯಾಗಿ, ಕೇಂದ್ರ ಗೃಹ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ, ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ, ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯದಲ್ಲಿ ವಿಶೇಷಾಧಿಕಾರಿಯಾಗಿ ಇವರು ಮಾಡಿರುವ ಕಾರ್ಯ ಅನನ್ಯ. ಅನೇಕ ವರ್ಷಗಳಿಂದ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸ್ಮರಿಸಿದ್ದಾರೆ.

ಬಿಡಿಎ ಆಯುಕ್ತರಾಗಿ, ಬೆಳಗಾವಿ, ತುಮಕೂರು, ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಗಳ ಅಧ್ಯಕ್ಷರಾಗಿ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ ಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿ ತಮ್ಮ ದಕ್ಷತೆ ತೋರಿದ್ದಾರೆ. ಬಿಬಿಎಂಪಿಯ ಆಡಳಿತಾಧಿಕಾರಿಯಾಗಿಯುೂ ಕೆಲಸ ಮಾಡಿದ್ದಾರೆ. ಇದು ಇವರ ಮೇಲೆ ಆಡಳಿತ ವ್ಯವಸ್ಥೆ ಇಟ್ಟಿರುವ ನಂಬಿಕೆ ತೋರುತ್ತದೆ. ಹೀಗೆ ಅತಿ ಹೆಚ್ಚು ಇಲಾಖೆಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ಹೆಗ್ಗಳಿಕೆ ಇವರದು ಎಂದು ಬಣ್ಣಿಸಿದ್ದಾರೆ.

ಇವರ ವಿಶೇಷವೆಂದರೆ ಯಾವಾಗಲೂ ಸಕಾರಾತ್ಮಕ ಮನಸ್ಥಿತಿಯಿಂದ ಕಾರ್ಯ ನಿರ್ವಹಿಸುವುದು. ಯಾರೇ ಸಾಮಾನ್ಯ ವ್ಯಕ್ತಿ ಬಂದರೂ ಆತನ ದುಃಖ ದುಮ್ಮಾನ ಆಲಿಸಿ ಪರಿಹಾರ ಹುಡುಕುವ ಗುಣ, ಎಲ್ಲರೊಂದಿಗೆ ಬೆರೆಯುವ ಸ್ವಭಾವ, "NO" ಎನ್ನುವ ಪದವನ್ನು ತಮ್ಮ ನಿಘಂಟಿನಿಂದ ತೆಗೆದುಹಾಕಿರುವ ಕಾರ್ಯವೈಖರಿ, ಎಲ್ಲರ ಜೊತೆ ನಗುತ್ತಾ ನಗಿಸುತ್ತಾ ವ್ಯವಹರಿಸುವ ಶೈಲಿ, ಅಗಾಧ ನೆನಪಿನ ಶಕ್ತಿ. ಇಂತಹ ರಾಕೇಶ್ ಸಿಂಗ್ ಇಂದು ದೀರ್ಘ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ನಿವೃತ್ತಿ ನಂತರದ ದಿನಗಳು ಸುಖಕರವಾಗಿರಲಿ. RERA ಗೆ ಅವರು ಅಧ್ಯಕ್ಷರಾಗುತ್ತಾರೆ ಎಂಬ ಮಾಹಿತಿಯೂ ಇದೆ. ಅವರ ಕಾಲದಲ್ಲಿ ಅವರ ಅಪಾರ ಅನುಭವದ ನಿವೇಶನ, ಅಪಾರ್ಟ್ಮೆಂಟ್ ಕೊಂಡ ವ್ಯಕ್ತಿಗಳಿಗೆ ನ್ಯಾಯ ದೊರಕಲಿ ಎಂದು ಆಶಿಸುತ್ತೇನೆ ಎಂದು ಶುಭ ಕೋರಿದ್ದಾರೆ.

ಇದನ್ನೂ ಓದಿ:ಕೆಲ ವರ್ಷಗಳ ಹಿಂದೆ ತಂದೆ ನಿಧನ, ಕುಟುಂಬದ ನೊಗ ಹೊತ್ತು ಸಾಗಿದ ತಾಯಿ; ಛಲ ಬಿಡದೇ ಐಎಎಸ್​ ಪಾಸ್​ ಆದ ಮಗ - SUCCESS STORY

ABOUT THE AUTHOR

...view details