ಕರ್ನಾಟಕ

karnataka

ETV Bharat / state

ಲೋಕಸಭೆಗೆ ವಿಶೇಷ ಸಂದರ್ಭದಲ್ಲಿ ಆಯ್ಕೆಯಾದೆ: ಬೊಮ್ಮಾಯಿ - Basavaraj Bommai

ಈ ಬಾರಿ ಎನ್​ಡಿಎ ಸಾಧನೆ ಹೇಗಿದೆ ಅಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೋಲಿಸಿದರೆ ಈ ಬಾರಿ ಉತ್ತಮವಾಗಿದೆ. ಜಾತಿ ಪ್ರಶ್ನೆ ಬರುವುದಿಲ್ಲ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

BASAVARAJ BOMMAI REACTS ON LS RESULTS
ಮಾಜಿ ಸಿಎಂ ಬಿಎಸ್​ವೈ ಭೇಟಿ ಮಾಡಿದ ಕ್ಷಣ (ETV Bharat)

By ETV Bharat Karnataka Team

Published : Jun 5, 2024, 6:28 PM IST

ಬೆಂಗಳೂರು: ನರೇಂದ್ರ ಮೋದಿಯವರಿಗೆ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ರಾಜಕೀಯ ಮುತ್ಸದ್ದಿತನ ಇದೆ. ರಾಜ್ಯ ಸರ್ಕಾರದ ವಿರುದ್ಧ ಜನ ಬೇಸತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಬೆಂಬಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಲೋಕಸಭಾ ಚುನಾವಣೆ ಗೆಲುವಿನ ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಆಶೀರ್ವಾದ ಪಡೆದು ಮಾತನಾಡಿದ ಅವರು, ನಾನು ಲೋಕಸಭೆಗೆ ಬಹಳ ವಿಶೇಷವಾಗಿರುವ ಸಂದರ್ಭದಲ್ಲಿ ಆಯ್ಕೆಯಾದೆ. ಪ್ರಧಾನಿ ಹಾಗೂ ಪಕ್ಷದ ಹಿರಿಯರ ಮಾತಿನಂತೆ ಸ್ಪರ್ಧೆ ಮಾಡಿದೆ. ಅವರ ಲೆಕ್ಕಾಚಾರ ಸರಿಯಾಗಿದೆ. ದೇಶದಲ್ಲಿ ನೋಡಿದಾಗ ಮೋದಿ 3ನೇ ಬಾರಿ ಪ್ರಧಾನಿ ಆಗುತ್ತಿದ್ದಾರೆ. ಕೆಲವು ಕಡೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಒಂದು ವಿಶ್ವಾಸ ಇದೆ, ಎಂತಹ ಸಂಧರ್ಭದಲ್ಲಾದರೂ ಮೋದಿ ನಿಭಾಯಿಸಲಿದ್ದಾರೆ ಎಂದು ಹೇಳಿದರು.

ಮೋದಿಯವರು ಬಹಳ ವಿಭಿನ್ನವಾಗಿ ರಾಜಕಾರಣ ನಡೆಸಿಕೊಂಡು ಬಂದಿದ್ದಾರೆ. ಗುಜರಾತ್ ಗಲಭೆ ನಿರ್ವಹಿಸಿಕೊಂಡು ಬಂದರು. ಬಹಳ ಪೈಪೋಟಿ ಇದ್ದರೂ ಸಂಪೂರ್ಣ ಮೆಜಾರಿಟಿ ತಂದರು. ಎರಡನೇ ಬಾರಿ ಬಹುಮತ ಹೆಚ್ಚಿಸಿ ಎನ್‌ಡಿಎ ವಿಸ್ತಾರ ಮಾಡಿದ್ದಾರೆ. ಇದೆಲ್ಲಾ ನೋಡಿದಾಗ ರಾಜಕೀಯವಾಗಿ ಮುತ್ಸದ್ದೀತನ ಮಾಡಿದ್ದಾರೆ. ಇಂಡಿ ಘಟಬಂಧನ್ ನೋಡಿದರೆ ಅಲ್ಲಿ ಯಾವುದೇ ಬೆಳವಣಿಗೆ ಇಲ್ಲ. ಕಾಂಗ್ರೆಸ್ ನಂಬಿಕೊಂಡು ಹೋಗುವ ಕೆಲಸ ನಿತೀಶ್ ಕುಮಾರ್ ಅಥವಾ ಚಂದ್ರ ಬಾಬು ನಾಯ್ಡು ಮಾಡುವುದಿಲ್ಲ. ಈ ಬಾರಿ ಎನ್​ಡಿಎ ಸಾಧನೆ ಹೇಗಿದೆ ಅಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೋಲಿಸಿದರೆ ಈ ಬಾರಿ ಉತ್ತಮವಾಗಿದೆ. ಜಾತಿ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು.

ಮೈತ್ರಿಗೆ ಬೆಂಬಲ:ಮೋದಿ ಅವರನ್ನು ಅತ್ಯಂತ ಟೀಕೆ ಮಾಡಿದ್ದರು. ಕಾಂಗ್ರೆಸ್ ಮಿತ್ರ ಪಕ್ಷಗಳ ಹೆಗಲ‌ ಮೇಲೆ ಕೂತು ಕೆಲಸ ಮಾಡಿದೆ. ಅವರ ಸ್ವಂತ ಬಲದಿಂದ ಅಲ್ಲ. ಮಿತ್ರ ಪಕ್ಷದ ಬಲದಿಂದ ಅಷ್ಟು ಸೀಟು ಗೆದ್ದಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿ ದಕ್ಷಿಣ ಕರ್ನಾಟಕದಲ್ಲಿ ಉತ್ತಮವಾಗಿದೆ. ಉತ್ತಮ‌ ಮತಗಳು ನಮಗೆ ಬಂದಿದೆ. ಜನ ಸರ್ಕಾರದ ವಿರುದ್ಧ ಬೇಸತ್ತು. ಮೈತ್ರಿ ಬೆಂಬಲಿಸಿದ್ದಾರೆ ಎಂದರು.

ಸಿದ್ದರಾಮಯ್ಯ ಮೋದಿ ಗ್ಯಾರಂಟಿ ಫೇಲ್ ಆಗಿದೆ ಎಂದು ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಗ್ಯಾರಂಟಿ ನಡುವೆ ನಾವು ಸಾಧನೆ ಮಾಡಿದ್ದೇವೆ. ಇವರು ಕರ್ನಾಟಕದಲ್ಲಿ‌ 20 ಸ್ಥಾನ ಗೆಲ್ಲುವುದಾಗಿ ಹೇಳಿದ್ದರು. 9ಕ್ಕೆ ಬಂದು ನಿಂತಿದ್ದಾರೆ. ಡಿಕೆ ಬ್ರದರ್ಸ್ ಸೋತಿದ್ದಾರೆ. ಅವರಿಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.

ಇನ್ನು ಸಚಿವ ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಕ್ರಮ ಸಾಬೀತಾಗಿದೆ, ಎಸ್​ಐಟಿ ತನಿಖೆ ಮಾಡುತ್ತಿದೆ. ಸಿಬಿಐ ಎಂಟ್ರಿ ಆಗಿದೆ. ಎಸ್​ಐಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಸ್ಯೆ ಇಲ್ಲ. ಇಲ್ಲದಿದ್ರೆ ಸಿಬಿಐ ತನಿಖೆ ಶುರು ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ:ರಾಜ್ಯ ರಾಜಕಾರಣದಿಂದ ರಾಷ್ಟ್ರಕ್ಕೆ: ಒಟ್ಟಿಗೆ ದೆಹಲಿ ವಿಮಾನವೇರಿದ ಇಬ್ಬರು ಮಾಜಿ ಸಿಎಂಗಳು - Union Cabinet Meeting

ABOUT THE AUTHOR

...view details