ಚಿಕ್ಕಬಳ್ಳಾಪುರ:ಸಾಕಷ್ಟು ಗೊಂದಲಗಳ ನಡುವೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಫೈನಲ್ ಆಗಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್ ಒಲಿದು ಬಂದಿದೆ. ಸದ್ಯ ಇಂದು ಗೌರಿಬಿದನೂರಿನಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದು, ಇದೇ ವೇಳೆ ಮಾತನಾಡಿದ ಡಾ.ಕೆ. ಸುಧಾಕರ್ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದರು.
ಟಿಕೆಟ್ ಫೈನಲ್ ಆದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಅಭ್ಯರ್ಥಿ ಸುಧಾಕರ್ ಮತಬೇಟೆ ಶುರು ಮಾಡಿದ್ದಾರೆ. "ನಾನು ಸಂಸದನಾಗಲು ಬೇರೆ ಜಿಲ್ಲೆಯಿಂದ ಬಂದಿಲ್ಲ. ನಮ್ಮ ಕರ್ಮಭೂಮಿ ಸಹ ಇದೇ, ನನ್ನ ಸಾವಾದರೂ ಇದೇ ಮಣ್ಣಲ್ಲಿ ಆಗುತ್ತೆ. ಲೋಕಸಭಾ ಚುನಾವಣೆಗೆ ಕೇವಲ 25 ದಿನಗಳಿವೆ. ರಾಜ್ಯದ ಜನತೆ ಕಾಂಗ್ರೆಸ್ ಕೊಡುತ್ತಿರುವ ತಾತ್ಕಾಲಿಕ ಗ್ಯಾರಂಟಿಗಳನ್ನು ನಂಬಬೇಡಿ. ಈಗಿರುವ ಸರ್ಕಾರ ಓಂದೂವರೆ ಲಕ್ಷ ಕೋಟಿ ಸಾಲ ಮಾಡಿ ನಮ್ಮ ತಲೆ ಮೇಲೆ ಹಾಕಿದೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ" ಎಂದು ಆರೋಪ ಮಾಡಿದ್ದಾರೆ.