ಹುಬ್ಬಳ್ಳಿ:ಹೈಡ್ರೋಜನ್ ಅನಿಲ ಹೊತ್ತು ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಹುಬ್ಬಳ್ಳಿ ಹೊರವಲಯದ ರಾಯನಾಳ ಸೇತುವೆ ಬಳಿ ಇಂದು ನಡೆದಿದೆ.
ಲಾರಿ ಪಲ್ಟಿಯಾಗಿ ಬಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು. ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಾಯದಿಂದ ಟ್ಯಾಂಕರ್ ತೆರವು ಮಾಡಲಾಯಿತು.