ಕರ್ನಾಟಕ

karnataka

ETV Bharat / state

ಕೊಪ್ಪಳ: ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಪತಿ ಸೆರೆ - HUSBAND STABBED HIS WIFE

ಅಕ್ರಮ ಸಂಬಂಧ ಹೊಂದಿರುವ ಶಂಕೆಯಿಂದ ಪತಿಯೇ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಬಂಧಿತ ಆರೋಪಿ
ಬಂಧಿತ ಆರೋಪಿ ರಾಜೇಶ್ (ETV Bharat)

By ETV Bharat Karnataka Team

Published : Jan 12, 2025, 3:31 PM IST

ಕೊಪ್ಪಳ: ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ತುರುವೇಕೆರೆ ಮೂಲದ ರಾಜೇಶ್ ಎಂಬಾತ ಕೃತ್ಯ ಎಸಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಗೀತಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ದಂಪತಿ ಕೊಪ್ಪಳ ಜಾತ್ರೆಗೆ ವ್ಯಾಪಾರಕ್ಕೆಂದು ಬಂದಿದ್ದರು. ಅಕ್ರಮ ಸಂಬಂಧ ಶಂಕೆಯಿಂದ ರಾಜೇಶ್​, ಪತ್ನಿ ಜೊತೆ ಜಗಳವಾಡುತ್ತಿದ್ದ. ಜಗಳ ವಿಕೋಪಕ್ಕೆ ತಿರುಗಿ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿ ರಾಜೇಶ್‌ನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಎಸ್​ಪಿ ಡಾ.ರಾಮ್​ (ETV Bharat)

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ರಾಮ್​. ಎಲ್.​ ಪ್ರತಿಕ್ರಿಯಿಸಿ, "ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ರಾಜೇಶ್ ತನ್ನ ಪತ್ನಿಗೆ ಗೀತಾ ಎಂಬವರಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ದಂಪತಿ ತುಮಕೂರು ಜಿಲ್ಲೆಯ ತುರುವೇಕೆರೆಯವರು. ಜಾತ್ರೆಯ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆಂದು ಇಲ್ಲಿಗೆ ಬಂದಿದ್ದರು" ಎಂದು ತಿಳಿಸಿದರು.

ಇದನ್ನೂ ಓದಿ:ಚಪ್ಪಲಿಯಿಂದ ಹೊಡೆದ ಮಹಿಳೆಯ ಪತಿಯ ಕೊಲೆಗೆ ಸ್ಕೆಚ್: ಮದ್ಯದ ನಶೆಯಲ್ಲಿ ಮತ್ತೊಬ್ಬನಿಗೆ ಇರಿದು ಜೈಲುಪಾಲು

ಇದನ್ನೂ ಓದಿ:ಹುಟ್ಟುಹಬ್ಬದ ವೇಳೆ ಗದ್ದಲ: ಪ್ರಶ್ನಿಸಿದ ಪಕ್ಕದ್ಮನೆ ಅಕ್ಕ, ತಮ್ಮನಿಗೆ ಚಾಕು ಇರಿದ ರೌಡಿಶೀಟರ್

ABOUT THE AUTHOR

...view details