ಕರ್ನಾಟಕ

karnataka

18 ರಿಂದ ಹುಬ್ಬಳ್ಳಿ- ಪುಣೆ ವಂದೇ ಭಾರತ್ ಸಂಚಾರ ಆರಂಭ: ದರ ಎಷ್ಟು ಗೊತ್ತಾ? - Vande Bharat ticket rate

By ETV Bharat Karnataka Team

Published : Sep 14, 2024, 5:30 PM IST

ವಂದೇ ಭಾರತ ರೈಲು ನಿಲುಗಡೆಯಾಗುವ ನಗರಗಳ ಮಧ್ಯದ ದರ, ಚೇರ್ ಕಾರು ಟಿಕೆಟ್ ದರ ಹಾಗೂ ಕ್ಯಾಟರಿಂಗ್ ಹಾಗೂ ನಾನ್ ಕ್ಯಾಟರಿಂಗ್ ಒಳಗೊಂಡಂತೆ ಹಾಗೂ ಎಕ್ಸಿಕ್ಯೂಟಿವ್ ಟಿಕೆಟ್ ದರ ಹಾಗೂ ಕೆಟರಿಂಗ್ ರೇಟ್ ಒಳಗೊಂಡಂತೆ ಟಿಕೆಟ್​ ದರಪಟ್ಟಿಯನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ.

Vande Bharat
ವಂದೇ ಭಾರತ್ (ETV Bharat)

ಹುಬ್ಬಳ್ಳಿ:ಹುಬ್ಬಳ್ಳಿಯಿಂದ ಪುಣೆಗೆ ಸೆ.18 ರಿಂದ ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾಗಲಿದೆ. ಸೆ.16ರಂದು ಪ್ರಧಾನಿ ಮೋದಿ ವರ್ಚುಯಲ್​ ಸಮಾರಂಭದ ಮೂಲಕ ವಂದೇ ಭಾರತ್‌ ರೈಲಿನ ಉದ್ಘಾಟನೆ ಮಾಡುವರು.

ಹುಬ್ಬಳ್ಳಿಯಿಂದ ಸೆ.18ರಂದು ಸಂಚಾರ ಆರಂಭವಾಗಲಿದ್ದು, ವಾರದಲ್ಲಿ ಮೂರು ಬಾರಿ (ಬುಧವಾರ, ಶುಕ್ರವಾರ ಹಾಗೂ ಭಾನುವಾರ) ಹುಬ್ಬಳ್ಳಿಯಿಂದ ಮತ್ತು ಗುರುವಾರ, ಶನಿವಾರ, ಸೋಮವಾರದಂದು ಪುಣೆಯಿಂದ ಹುಬ್ಬಳ್ಳಿಗೆ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.

ವಂದೇ ಭಾರತ ರೈಲು ನಿಲುಗಡೆಯಾಗುವ ನಗರಗಳ ಮಧ್ಯದ ದರವನ್ನು ನಿಗದಿಪಡಿಸಿದ್ದು, ದರಪಟ್ಟಿಯನ್ನು ರೈಲ್ವೆ ಇಲಾಖೆಯು ಪ್ರಕಟಿಸಿದೆ. ಚೇರ್ ಕಾರು ಟಿಕೆಟ್ ದರ ಹಾಗೂ ಕ್ಯಾಟರಿಂಗ್ ಹಾಗೂ ನಾನ್ ಕ್ಯಾಟರಿಂಗ್ ಒಳಗೊಂಡಂತೆ ಹಾಗೂ ಎಕ್ಸಿಕ್ಯೂಟಿವ್ ಟಿಕೆಟ್ ದರ ಹಾಗೂ ಕೆಟರಿಂಗ್ ರೇಟ್ ಒಳಗೊಂಡಂತೆ ಟಿಕೆಟ್​ ದರ ಪ್ರಕಟಿಸಿದೆ.

ಸಂಚಾರ ದರ (ETV Bharat)

1. ರೈಲು ಸಂಖ್ಯೆ 20669 (ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಪುಣೆ) ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸಲಿದ್ದು, ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ. ಧಾರವಾಡ (5.15-5.17 am), ಬೆಳಗಾವಿ (6.55-7 am), ಮೀರಜ್ (9-9.05 am), ಸಾಂಗ್ಲಿ (9.15-9.17 am) ಮತ್ತು ಸತಾರಾ (10.47-10.50 am) ತಲುಪಲಿದೆ.

2. ರೈಲು ಸಂಖ್ಯೆ 20670 (ಪುಣೆಯಿಂದ SSS ಹುಬ್ಬಳ್ಳಿ) ಗುರುವಾರ, ಶನಿವಾರ ಮತ್ತು ಸೋಮವಾರ, ಮಧ್ಯಾಹ್ನ 2:15 ಕ್ಕೆ ಪುಣೆಯಿಂದ ಹೊರಡುತ್ತದೆ. ಮತ್ತು 10.45ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ. ಸತಾರಾ (4.37-4.40 pm), ಸಾಂಗ್ಲಿ (6.10-6.12 pm), ಮೀರಜ್ (6.40-6.45 pm), ಬೆಳಗಾವಿ (8.35-8.40 pm) ಮತ್ತು ಧಾರವಾಡ (10.20-10.22 pm)ಕ್ಕೆ ತಲುಪಲಿದೆ.

ವಂದೇ ಭಾರತ್ 8 ಕೋಚ್‌ಗಳನ್ನು ಒಳಗೊಂಡಿದ್ದು, 52 ಎಕ್ಸಿಕ್ಯೂಟಿವ್ ವರ್ಗದ ಸೀಟುಗಳಿವೆ. ಮತ್ತು 478 ಚೇರ್ ಕಾರ್ ಸೀಟುಗಳನ್ನು ‌ಒಳಗೊಂಡಿದೆ. ಹುಬ್ಬಳ್ಳಿಯಿಂದ ಪುಣೆಗೆ ಕಾರ್ ಚೇರ್ ಟಿಕೆಟ್ ದರ 1,530 ರೂ. ಆಗಿದ್ದು, ಇದು ಕ್ಯಾಟರಿಂಗ್ ದರವನ್ನೂ ಒಳಗೊಂಡಿದೆ. ಅದರಂತೆ ಎಕ್ಸಿಕ್ಯೂಟಿವ್ ವರ್ಗಕ್ಕೆ 2,780 ರೂ. ಇದ್ದು, ಇದು ಕೂಡ ಕ್ಯಾಟರಿಂಗ್ ದರವನ್ನು ‌ಒಳಗೊಂಡಿದೆ. ಕ್ಯಾಟರಿಂಗ್ ಹೊರತುಪಡಿಸಿ ಚೇರ್ ಕಾರಿಗೆ 1,185 ಹಾಗೂ ಎಕ್ಸಿಕ್ಯೂಟಿವ್ ವರ್ಗಕ್ಕೆ 2,385 ಟಿಕೆಟ್ ದರ ನಿಗದಿಪಡಿಸಿದೆ.

ಅದರಂತೆ ಹುಬ್ಬಳ್ಳಿ-ಬೆಳಗಾವಿ, ಹುಬ್ಬಳ್ಳಿ-ಮಿರಜ್, ಹುಬ್ಬಳ್ಳಿ -ಮಿರಜ್, ಹುಬ್ಬಳ್ಳಿ-ಸತಾರಾಗಳಿಗೆ ಪ್ರತ್ಯೇಕ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇನ್ನು ಹುಬ್ಬಳ್ಳಿ-ಧಾರವಾಡದ ಜನ ವಂದೇ ಭಾರತ ರೈಲಿನಲ್ಲಿ ಸಂಚರಿಸಬೇಕಾದರೆ ಚೇರ್ ಕಾರಿಗೆ 365 ಹಾಗೂ ಎಕ್ಸಿಕ್ಯೂಟಿವ್ ಕ್ಲಾಸಿಗೆ 690 ರೂ. ಕೊಟ್ಟು ಸಂಚರಿಸಬಹುದುದಾಗಿದೆ.

ಇದನ್ನೂ ಓದಿ:ವಂದೇ ಭಾರತ್​ ರೈಲು ಸಂಚಾರ ಆರಂಭ: ಧಾರವಾಡದಿಂದ ಹುಬ್ಬಳ್ಳಿಗೆ ಪ್ರಯಾಣಿಸಿ ಖುಷಿಪಟ್ಟ ಗೆಹ್ಲೋಟ್, ಪ್ರಹ್ಲಾದ್​ ಜೋಶಿ​

ABOUT THE AUTHOR

...view details