ಹುಬ್ಬಳ್ಳಿ:ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆಗೆ ಇನ್ನೇನು ಒಂದು ದಿನ ಬಾಕಿ ಉಳಿದಿದೆ. ಬಣ ರಾಜಕಾರಣದಲ್ಲಿ ನಡುವೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಪ್ರಥಮ ಪ್ರಜೆ ಯಾರಾಗ್ತಾರೆ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ.
ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಪುರುಷ ಹಾಗೂ ಉಪಮೇಯರ್ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಮಹಾನಗರ ಪಾಲಿಕೆಯಲ್ಲಿದ್ದಾರೆ 82 ಜನ ಸದಸ್ಯರು. ಇದರಲ್ಲಿ 38 ಬಿಜೆಪಿ ಸದಸ್ಯರಿದ್ದರೆ ಕಾಂಗ್ರೆಸ್ 33, ಜೆಡಿಎಸ್ನಿಂದ ಓರ್ವ, ಪಕ್ಷೇತರ 6 ಹಾಗೂ ಎಂಐಎಂ ನಿಂದ 3 ಜನ ಸದಸ್ಯರಿದ್ದಾರೆ. ಚುನಾಯಿತ 8 ಜನಪ್ರತಿನಿಧಿಗಳು ಕೂಡ ಹಕ್ಕು ಚಲಾಯಿಸಲಿದ್ದಾರೆ. ಕಾಂಗ್ರೆಸ್ ಇಬ್ಬರು, ಬಿಜೆಪಿಯ 6 ಜನ ಮತ ಚಲಾಯಿಸಲಿದ್ದಾರೆ.