ಹುಬ್ಬಳ್ಳಿ:ವಿದ್ಯಾರ್ಥಿನಿನೇಹಾ ಹಿರೇಮಠ ಹತ್ಯೆ ಪ್ರಕರಣ ಆರೋಪಿ ಫಯಾಜ್ನನ್ನು ಸಿಐಡಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆ ಸಂಬಂಧ ಇಂದು ಇಲ್ಲಿನ ಒಂದನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತದ ಮಾದರಿ ಸಂಗ್ರಹ ಮಾಡಲಿದ್ದು, ನ್ಯಾಯಾಧೀಶರಾದ ನಾಗೇಶ ನಾಯಕ್ ಅವರ ಸಮ್ಮುಖದಲ್ಲಿ ಫಯಾಜ್ನ ಡಿಎನ್‌ಎ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಕಿಮ್ಸ್ ವೈದ್ಯರಿಂದ ರಕ್ತದ ಮಾದರಿ ಸಂಗ್ರಹಿಸಿ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ.
ನೇಹಾ ಹತ್ಯೆ ಪ್ರಕರಣ: ಡಿಎನ್‌ಎ ಪರೀಕ್ಷೆಗಾಗಿ ಫಯಾಜ್ನನ್ನು ನ್ಯಾಯಾಲಯಕ್ಕೆ ಕರೆತಂದ ಸಿಐಡಿ ಅಧಿಕಾರಿಗಳು - Neha murder case - NEHA MURDER CASE
ನೇಹಾ ಹತ್ಯೆ ಪ್ರಕರಣ ಆರೋಪಿ ಫಯಾಜ್ನನ್ನು ಇಂದು ಇಲ್ಲಿನ ಒಂದನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಕರೆತರಲಾಗಿದೆ.
ನೇಹಾ ಹತ್ಯೆ ಪ್ರಕರಣ
Published : Apr 27, 2024, 2:52 PM IST