ಹೊನ್ನಾರು ಸಂಪ್ರದಾಯ ಕುರಿತು ಗ್ರಾಮಸ್ಥರಿಂದ ಮಾಹಿತಿ ಹಾಸನ:ಯುಗಾದಿ ಹಬ್ಬ ಬಂದಂತೆ ಮುಂಗಾರು ಮಳೆ ಆಗಮಿಸುತ್ತದೆ. ಯುಗಾದಿ ಹಬ್ಬದ ನಿನ್ನೆಯ ದಿನ ಹಳ್ಳಿಗಳಲ್ಲಿ ಗ್ರಾಮದ ಮುಖ್ಯಸ್ಥರು, ರೈತರು ತಮ್ಮ ತಮ್ಮ ಹೊಲದಲ್ಲಿ ನೇಗಿಲನ್ನು ಹೊಡೆದು ಪೂಜೆ ಪುನಸ್ಕಾರಗಳನ್ನು ಮಾಡುವ ಮುನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊನ್ನಾರು ಕಟ್ಟುವುದು ಗ್ರಾಮೀಣ ಭಾಗದ ಸಂಪ್ರದಾಯ.
ಯಾಂತ್ರಿಕೃತ ಬೇಸಾಯ ಆರಂಭವಾದಾಗಿನಿಂದ ಗ್ರಾಮಗಳಲ್ಲಿ ಹೊನ್ನಾರು ಸಂಪ್ರದಾಯ ಕಳೆಗುಂದುತ್ತಿದೆ. ಆದರೂ ಕೆಲವು ಗ್ರಾಮದಲ್ಲಿ ಇಂದಿಗೂ ಹೊನ್ನಾರು ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕುಂಭೇನಹಳ್ಳಿ ಮತ್ತು ಡೈರಿ ಶೆಟ್ಟಿಹಳ್ಳಿಯಲ್ಲಿ ಹೊನ್ನಾರು ಸಂಭ್ರಮ ಪ್ರತಿವರ್ಷ ಜೋರಾಗಿ ಆಚರಿಸಲಾಗುತ್ತದೆ. ಹಾಸನ ಜಿಲ್ಲೆಯ ಕುಂಭೇನಹಳ್ಳಿ ಮತ್ತು ಡೈರಿ ಶೆಟ್ಟಿಹಳ್ಳಿ ಗ್ರಾಮದಲ್ಲಿ ತಲತಲಾಂತರದಿಂದ ಯುಗಾದಿ ಹಬ್ಬದಂದು ಹೊನ್ನಾರು ಕಟ್ಟಿ ಆಚರಿಸಿಕೊಂಡು ಬರಲಾಗುತ್ತಿದೆ.
'ಹೊಸ ವರ್ಷದ ಸಂವತ್ಸರದಲ್ಲಿ ರೈತರು ಎತ್ತುಗಳನ್ನು ಸಿಂಗಾರ ಮಾಡಿ ಭೂಮಿ ತಾಯಿಗೆ ಪೂಜೆ ಮಾಡಿ ಹೊನ್ನಾರು ಹೂಡುವುದು ಸಂಪ್ರದಾಯ. ಹೊನ್ನಾರು ಎಂಬುದು ತ್ರೇತ್ರಾಯುಗದಲ್ಲಿ ಜನಕಮಹಾರಾಜ ಪ್ರಾರಂಭಿಸಿದ ಎನ್ನಲಾಗಿದೆ. ಮುಂಜಾನೆ ಎದ್ದು, ಗ್ರಾಮಸ್ಥರುಗಳು ಎಣ್ಣೆ ಸ್ನಾನ ಮಾಡಿ, ದೇವಾಲಯಕ್ಕೆ ಬಂದು ಪಂಚಾಂಗ ಶ್ರಾವಣ ಓದಿಸಿ ಯಾರ ಹೆಸರಿಗೆ ಹೊನ್ನಾರು ಕಟ್ಟುವುದು ಎಂದು ಹೇಳಲಾಗುತ್ತದೆಯೋ ಅವರು ತಮ್ಮ ಎತ್ತುಗಳನ್ನು ಶೃಂಗಾರ ಮಾಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊನ್ನಾರು ಹೂಡುತ್ತಾರೆ.
ಹೊನ್ನಾರು ಕಾರ್ಯಕ್ರಮವನ್ನು ಕೆಲ ಗ್ರಾಮಗಳಲ್ಲಿ ರೈತರು ಸಾಮೂಹಿಕವಾಗಿ ಮಾಡುತ್ತಾರೆ. ರೈತರು ಹೆಗಲಿಗೆ ಹಸಿರು ಶಾಲು ಹಾಕಿಕೊಂಡು, ಎತ್ತುಗಳಿಗೆ ಪೂಜೆ ಸಲ್ಲಿಸಿ ಅವುಗಳಿಗೆ ನೈವೇದ್ಯ ಕೊಟ್ಟು ನೇಗಿಲು ಹಿಡಿದು ಭೂಮಿ ಉಳುಮೆ ಮಾಡುತ್ತಾರೆ. ಗ್ರಾಮದ ಸಂಜೀವಿನಿ ಆಂಜನೇಯ ದೇವಾಲಯಕ್ಕೆ ಸಿಂಗಾರಗೊಂಡ ಜೋಡೆತ್ತುಗಳನ್ನು ತಂದು ಅವುಗಳಿಗೆ, ನೇಗಿಲಿಗೆ ನೊಗವನ್ನು ಕಟ್ಟಲಾಗುತ್ತದೆ. ಬಳಿಕ ಗ್ರಾಮದ ದೇವತೆಗಳಾದ ಆಂಜನೇಯ ಮತ್ತು ಸತ್ಯಮ್ಮ ಮತ್ತು ಶೆಟ್ಟಾಳಮ್ಮ ದೇವಾಲಯದಿಂದ ಹೊರಟ ಹೊನ್ನಾರು ತಮಟೆ, ಜಾಗಟೆ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಬಂದು, ವಿಶೇಷ ನೇಗಿಲ ಹೂಡಿ ವರ್ಷದ ಮೊದಲ ಉಳುಮೆ ಮಾಡಿ ಯುಗಾದಿ ಸಂವತ್ಸರದ ಪ್ರಕಾರ ಹೊಸ ವರ್ಷವನ್ನು ಹಾಗೂ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ'.
'ಯಾಂತ್ರೀಕೃತ ಬೇಸಾಯ ಆರಂಭವಾದಾಗಿನಿಂದ ಗ್ರಾಮಗಳಲ್ಲಿ ಹೊನ್ನಾರು ಸಂದ್ರಾಯ ಕಳೆಗುಂದುತ್ತಿದೆ. ಆದರೂ ಕೆಲವು ಗ್ರಾಮದಲ್ಲಿ ಇಂದಿಗೂ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ಮುಂಗಾರು ಮಳೆ ಹಿನ್ನೆಲೆಯಲ್ಲಿ ನೇಗಿಲು ಹೂಡುವ ಹೊನ್ನಾರು ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.
ಎತ್ತುಗಳಿಗೆ ಪೂಜೆ ಸಲ್ಲಿಸಿ ಅವುಗಳಿಗೆ ನೈವೇದ್ಯ ಕೊಟ್ಟು ನೇಗಿಲು ಹಿಡಿದು ಭೂಮಿ ಉಳುಮೆ ಮಾಡುತ್ತಾರೆ. ಯುಗಾದಿ ಹಬ್ಬಕ್ಕೆ ಊರಿನವರೆಲ್ಲ ಒಟ್ಟಿಗೆ ಸೇರಿ 3 ಅಥವಾ 5 ಜೊತೆ ಎತ್ತುಗಳ ಮೂಲಕ ಹೊನ್ನಾರು ಕಟ್ಟಿಕೊಂಡು ದೇವಾಲಯದಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸಿ, ನಂತರ ಊರಿನ ಜಮೀನಿನಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ. ಯುಗಾದಿಯಂದು ಹೊನ್ನಾರು ಕಟ್ಟಿದರೆ ಮಳೆ ಸಮೃದ್ಧಿಯಾಗಿ ಬಂದು ಭೂಮಿಯಲ್ಲಿ ಉತ್ತಮವಾಗಿ ಬೆಳೆ ಬರುತ್ತದೆ ಎಂಬ ನಂಬಿಕೆಯಿಂದ ಪೂರ್ವಜರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.
ಇದನ್ನೂ ಓದಿ:ಗಂಗಾವತಿ: ಯುಗಾದಿಯಂದು ರಥ ಎಳೆದು ಸಂಭ್ರಮಿಸಿದ ನೂರಾರು ಮಹಿಳೆಯರು - women pulled Ratha