ಬೆಂಗಳೂರು: ಬಿಜೆಪಿ ನಾಯಕನಿಗೆ ಹನಿಟ್ರ್ಯಾಪ್ ಮಾಡಲೆತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ್ಯೋತಿ, ಧರ್ಮೇಂದ್ರ ಹಾಗೂ ಬಾಲು ಎಂಬವರ ವಿರುದ್ಧ ಬಿಜೆಪಿ ನಾಯಕ ದೂರು ನೀಡಿದ್ದಾರೆ.
ಹೊಳೆನರಸೀಪುರದಲ್ಲಿ ವಾಸವಾಗಿರುವ ಜ್ಯೋತಿ, ಇವರ ಪತಿ ಧರ್ಮೇಂದ್ರ ಹಾಗು ಸ್ನೇಹಿತ ಬಾಲು ಸೇರಿಕೊಂಡು ವಿಡಿಯೋ ಕಾಲ್ ಮಾಡಿ ಅಶ್ಲೀಲ ವಿಡಿಯೋ ತೋರಿಸಿ ರೆಕಾರ್ಡ್ ಮಾಡಿಕೊಂಡಿದ್ದರು. ಕರೆ ಸ್ಥಗಿತಗೊಂಡ ಬಳಿಕ ರೆಕಾರ್ಡ್ ಮಾಡಿದ ವಿಡಿಯೋ ವೈರಲ್ ಮಾಡದೇ ಇರಲು 2 ಕೋಟಿ ರೂ. ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು ಎಂದು ಬಿಜೆಪಿ ನಾಯಕ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.