ಬೆಂಗಳೂರು:ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ. ಆರೋಪಿಯನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, 8 ತಂಡಗಳನ್ನು ರಚನೆ ಮಾಡಿದ್ದೇವೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದೇವೆ ಎಂದರು.
ವಿಧಿ ವಿಜ್ಞಾನ ಸಿಬ್ಬಂದಿ ಈಗಾಗಲೇ ಮಾದರಿ ಸಂಗ್ರಹಿಸಿ ತಾಂತ್ರಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಒಂದೆರಡು ದಿನ ತಡವಾದ್ರೂ ಖಂಡಿತವಾಗಿ ಆರೋಪಿಯನ್ನು ಬೆಂಗಳೂರು ಕೆಫೆ ಸ್ಫೋಟ: ತನಿಖೆಗೆ ಸವಾಲಾದ ಆರೋಪಿ ಬಳಸಿಕೊಂಡ ಸಮಯಹಿಡಿಯುತ್ತೇವೆ. ಆತ ಯಾವುದಾದರೂ ಸಂಘಟನೆಗೆ ಸೇರಿದ್ದಾನೋ ಅಥವಾ ಬೇರೆ ಕಾರಣಗಳಿಂದ ಈ ಸ್ಫೋಟ ನಡೆಸಿದ್ದಾನೋ ಎಂದು ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಹೊಟೇಲ್ನವರು ಈ ವ್ಯವಹಾರದಲ್ಲಿ ಯಶಸ್ವಿಯಾಗಿದ್ದಾರೆ. 11 ಕಡೆ ಹೊಟೇಲ್ ಪ್ರಾರಂಭ ಮಾಡಿದ್ದಾರೆ. 12ನೇ ಕಡೆ ಓಪನ್ ಮಾಡುತ್ತಿದ್ದರು. ಇದನ್ನು ಸಹಿಸಲಾರದವರು ಈ ರೀತಿ ಮಾಡಿರಬಹುದು ಅಂತ ಜನ ಹೇಳುತ್ತಿದ್ದಾರೆ. ಆ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಇದಲ್ಲದೆ ಚುನಾವಣೆ ಹತ್ತಿರ ಬರುತ್ತಿದೆ. ಯಾವುದಾದರೂ ಸಂಘಟನೆ ಬೆಂಗಳೂರನ್ನು ಅನ್‌ಸೇಫ್ ನಗರ ಮಾಡಬೇಕು ಅಂತ ಹೀಗೆ ಮಾಡಿದ್ರಾ ಎಂದು ತನಿಖೆಯಾಗಬೇಕು. ಬೆಂಗಳೂರಿಗೆ ಹೂಡಿಕೆದಾರರು ಬರ್ತಿದ್ದಾರೆ. ಈ ಸಂದರ್ಭದಲ್ಲಿ ಹೀಗಾದರೆ ಬಂಡವಾಳ ಹಾಕುವವರು ಬರಲ್ಲ. ಈ ರೀತಿಯ ಅನುಮಾನವೂ ಕಾಡುತ್ತಿದೆ ಎಂದರು.