ಕರ್ನಾಟಕ

karnataka

ETV Bharat / state

ಯಾಸೀರ್ ಖಾನ್ ರೌಡಿಶೀಟರ್ ಎಂದಿರುವುದು ಕಾಂಗ್ರೆಸ್​ನವರೇ: ಬಸವರಾಜ ಬೊಮ್ಮಾಯಿ

ಶಿಗ್ಗಾಂವಿ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಮನವೊಲಿಕೆ ನಮಗೇನೂ ಪರಿಣಾಮ ಬೀರಲ್ಲ. ಹೆಚ್ಚು ಮತಗಳ ಅಂತರದಿಂದ ಭರತ್ ಗೆಲ್ಲುತ್ತಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ (Etv Bharat)

By ETV Bharat Karnataka Team

Published : 12 hours ago

Updated : 11 hours ago

ಹಾವೇರಿ:"ಯಾಸೀರ್ ಖಾನ್ ಪಠಾಣ್ ರೌಡಿಶೀಟರ್ ಎಂದು ಅವರ ಪಕ್ಷದವರೇ ಮಾತನಾಡಿದ್ದಾರೆ. ಅವರ ಪಕ್ಷದವರೇ ಸ್ಪಷ್ಟೀಕರಣ ಕೊಡಲಿ" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಶಿಗ್ಗಾಂವಿಯಲ್ಲಿ ಲಿಂಗಾಯತ ಪಂಚಮಸಾಲಿ ಮುಖಂಡರ ಮನೆಮನೆಗೆ ಭೇಟಿ ನೀಡಿ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

"ನಾವು ಎಲ್ಲರೂ ಒಗ್ಗಟ್ಟಿನಲ್ಲಿದ್ದೇವೆ. ನನಗಿಂತ ಹೆಚ್ಚು ಬೆಂಬಲ ಭರತ್‌ಗೆ ಸಿಕ್ಕಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲಾ ಸಮುದಾಯದವರು ಭರತ್‌ಗೆ ಬೆಂಬಲ ವ್ಯಕ್ತಪಡಿಸ್ತಿದ್ದಾರೆ. ಹೆಚ್ಚು ಮತಗಳ ಅಂತರದಿಂದ ಭರತ್ ಗೆಲ್ಲುತ್ತಾನೆ. ಕಾಂಗ್ರೆಸ್​ ಬಂಡಾಯ ಅಭ್ಯರ್ಥಿಅಜ್ಜಂಪೀರ್ ಖಾದ್ರಿ ಮನವೊಲಿಕೆ ಆದರೆ ಅದು ನಮಗೇನೂ ಪರಿಣಾಮ ಬೀರಲ್ಲ" ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ (ETV Bharat)

"ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಒಂದೇ ಒಂದು ಮನೆ ಕೊಟ್ಟಿಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಹಾಸ್ಯಾಸ್ಪದ ಅಷ್ಟೇ, ಹೋಗಿ ನೋಡಿಕೊಂಡು ಬರಲಿ. ಕಾಂಗ್ರೆಸ್ ನಾಯಕರ ಭಾಷಣ ಸುಳ್ಳಿನ ಕಂತೆ ಅಷ್ಟೆ" ತಿರುಗೇಟು ಕೊಟ್ಟರು.

"ಕಾಂಗ್ರೆಸ್​ಗೆ ಯಾವ ಗ್ಯಾರಂಟಿನೂ ಕೈ ಹಿಡಿದಿಲ್ಲ, ಏನೂ ಹಿಡಿದಿಲ್ಲ. ನಾನು ಹೆಚ್ಚಿನ ಸಮಯ ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಇದ್ದ ಕಾರಣ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿತ್ತು. ಈ ಎಲ್ಲಾ ವಿಚಾರ ನಮ್ಮ ಕಾರ್ಯಕರ್ತರಿಗೆ ಮನದಟ್ಟಾಗಿದೆ. ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ವಾತಾವರಣ ಇದೆ. ಕಾಂಗ್ರೆಸ್‌ನವರು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗಲ್ಲ" ಎಂದು ಹೇಳಿದರು.

ಇದನ್ನೂ ಓದಿ:ಶಿಗ್ಗಾಂವಿ ಉಪಚುನಾವಣೆ: 26 ಅಭ್ಯರ್ಥಿಗಳಿಂದ 46 ನಾಮಪತ್ರ ಸಲ್ಲಿಕೆ

Last Updated : 11 hours ago

ABOUT THE AUTHOR

...view details