ಕರ್ನಾಟಕ

karnataka

ETV Bharat / state

ಕೈಮಗ್ಗ ಅಭಿವೃದ್ಧಿ ನಿಗಮದ ನೌಕರರಿಗೆ ಗಳಿಕೆ ರಜೆ ನಗದೀಕರಣ ವಿಳಂಬ: ಬಡ್ಡಿಯೊಂದಿಗೆ ಪಾವತಿಸಲು ಹೈಕೋರ್ಟ್ ಸೂಚನೆ - high court verdict

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರಿಗೆ ಹೈಕೋರ್ಟ್​ ಸಿಹಿ ಸುದ್ದಿ ನೀಡಿದೆ. ಗಳಿಕೆ ರಜೆ ನಗದೀಕರಣ ವಿಳಂಬ ಮಾಡಿದ್ದಕ್ಕೆ ಶೇಕಡಾ 8 ರಷ್ಟು ಬಡ್ಡಿ ಸೇರಿಸಿ ಮೂರು ತಿಂಗಳಲ್ಲಿ ನೀಡಲು ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Sep 4, 2024, 9:02 PM IST

ಬೆಂಗಳೂರು:ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಬಡ್ಡಿ ಸೇರಿಸಿ ಮುಂದಿನ ಮೂರು ತಿಂಗಳಲ್ಲಿ ಪಾವತಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಂಟಿ ಕಾರ್ಯದರ್ಶಿ ಬಿ.ಎಸ್. ಗುರುಸ್ವಾಮಿ ಹಾಗೂ ಇತರ 20 ಮಂದಿ ನಿವೃತ್ತ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ನಿವೃತ್ತ ನೌಕರರಿಗೆ ಪಿಂಚಣಿ, ಉಪದಾನ, ಪರಿವರ್ತಿತ ಪಿಂಚಣಿ, ನಿವೃತ್ತರ ಮರಣ ಪರಿಹಾರ ಹಾಗೂ ಗಳಿಕೆ ರಜೆ ನಗದೀಕರಣ ಬಿಡುಗಡೆ ಮಾಡಲು ವಿಳಂಬವಾದಲ್ಲಿ ವಾರ್ಷಿಕ ಶೇಕಡಾ 8 ರಂತೆ ಬಡ್ಡಿ ಪಾವತಿಸಬೇಕು ಎಂದು 2003 ರ ಆಗಸ್ಟ್​ 21ರ ಸರ್ಕಾರಿ ಆದೇಶ ನೀಡಲಾಗಿದೆ. ಇದೇ ನಿಗಮದ ನಿವೃತ್ತ ನೌಕರರ ನಿವೃತ್ತಿ ಭತ್ಯೆಗಳಿಗೆ ಸಂಬಂಧಿಸಿದಂತೆ 2021 ರ ಡಿಸೆಂಬರ್ 7 ರಂದು ಹೈಕೋರ್ಟ್ ಕೂಡ ಆದೇಶ ನೀಡಿದೆ. ಹೀಗಾಗಿ ನಿಗಮದ ನಿವೃತ್ತ ನೌಕರರಿಗೆ ಅವರ ರಜೆ ನಗದೀಕರಣ ಬಿಡುಗಡೆ ವಿಳಂಬ ಆಗಿದ್ದಕ್ಕೆ ಶೇ.8ರಂತೆ ಬಡ್ಡಿಯನ್ನು ಮೂರು ತಿಂಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿ ವಿಚಾರಣೆ ವೇಳೆ ಕೈಮಗ್ಗ ಅಭಿವೃದ್ಧಿ ನಿಗಮದ ಪರ ವಕೀಲರು, ಗಳಿಕೆ ರಜೆ ನಗದೀಕರಣ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅದರ ಮೇಲೆ ಬಡ್ಡಿ ಪಾವತಿಸುವುದಕ್ಕೆ ನಿಗಮದ ಸಮ್ಮತಿ ಇದೆ ಎಂದು ಪೀಠಕ್ಕೆ ತಿಳಿಸಿದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೌಕರರೂ ಆಗಿರುವ ಅರ್ಜಿದಾರರ ಪರ ವಕೀಲರು, ನಿಯಮದಂತೆ ನಿವೃತ್ತಿಯಾದ 30 ದಿನಗಳಲ್ಲಿ ಪಿಂಚಣಿ, ಉಪದಾನ, ರಜೆ ನಗದೀಕರಣ ಸೇರಿದಂತೆ ಇತರ ನಿವೃತ್ತಿ ಭತ್ಯೆಗಳನ್ನು ಬಿಡುಗಡೆ ಮಾಡಬೇಕು. ಆದರೆ, ನಿಗಮದ ನಿವೃತ್ತ ನೌಕರರ ರಜೆ ನಗದೀಕರಣ ಬಿಡುಗಡೆ ಮಾಡಲು ಕನಿಷ್ಠ 7 ರಿಂದ 52 ತಿಂಗಳವರೆಗೆ ವಿಳಂಬ ಮಾಡಲಾಗಿದೆ. ಆದ್ದರಿಂದ 2003 ರ ಸರ್ಕಾರದ ಆದೇಶ ಹಾಗೂ 2021 ರ ಹೈಕೋರ್ಟ್ ಆದೇಶದಂತೆ ಗಳಿಕೆ ರಜೆ ನಗದೀಕರಣ ವಿಳಂಬಕ್ಕೆ ಶಿಕ್ಷೆಯಾಗಿ ಬಡ್ಡಿ ಸಮೇತ ಪಾವತಿಸುವಂತೆ ವಾದಿಸಿದರು.

ಇದನ್ನೂ ಓದಿ:ಪಿಂಚಣಿದಾರರಿಗೆ ಗುಡ್​ ನ್ಯೂಸ್​; ಯಾವುದೇ ಬ್ಯಾಂಕಿನ ಯಾವುದೇ ಶಾಖೆಯಿಂದ ಪಿಂಚಣಿ ಪಡೆಯುವ ವ್ಯವಸ್ಥೆ 2025ರ ಜ.1 ರಿಂದ ಜಾರಿ - CENTRALIZED PENSION SYSTEM

ABOUT THE AUTHOR

...view details