ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರ ಒಂದೇ ದಿನದ ಕಲಾಪದಲ್ಲಿ ಒಟ್ಟು 600 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಪ್ರಧಾನ ಪೀಠದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಕೋರ್ಟ್‌ಹಾಲ್‌ನ ಕಾಸ್‌ಲಿಸ್ಟ್‌ನಲ್ಲಿ (ವ್ಯಾಜ್ಯಗಳ ಪಟ್ಟಿ) 600 ಅರ್ಜಿಗಳನ್ನು ವಿಚಾರಣೆಗೆ ನಿಗದಿಪಪಡಿಸಲಾಗಿತ್ತು. ಅಷ್ಟೂ ಅರ್ಜಿಗಳ ವಿಚಾರಣೆಯನ್ನು ಸಂಜೆ 4 ಗಂಟೆಗೆ ಪೂರ್ಣಗೊಳಿಸಿ ಕಲಾಪ ಪೂರ್ಣಗೊಳಿಸಿದರು.
ನಿಗದಿಪಡಿಸಿದ್ದ ಎಲ್ಲ ಅರ್ಜಿಗಳ ವಿಚಾರಣೆ: ನಿಗದಿಯಾಗಿದ್ದ 600 ಅರ್ಜಿಗಳ ಪೈಕಿ 180 ಅರ್ಜಿಗಳ ಸಂಬಂಧ ಮಧ್ಯಂತರ ಆದೇಶ ಮಾಡಿದ್ದಾರೆ. 87 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ವಿಲೇವಾರಿ ಮಾಡಿದ್ದಾರೆ. ಇನ್ನುಳಿದ ಅರ್ಜಿಗಳನ್ನು ಮುಂದೂಡಿದ್ದಾರೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇದೇ 2024ರ ಮಾ. 22ರಂದು ಒಂದೇ ದಿನದ ಕಲಾಪದಲ್ಲಿ 801 ಅರ್ಜಿಗಳನ್ನು ವಿಚಾರಣೆ ನಡೆಸಿದ್ದರು. ಅವುಗಳ ಪೈಕಿ 36 ಅರ್ಜಿಗಳ ಸಂಬಂಧ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ್ದರು. ಉಳಿದಂತೆ ಸುಮಾರು 572 ಅರ್ಜಿಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದ್ದರು. ಇತ್ಯರ್ಥವಾದ ಪ್ರಕರಣಗಳಲ್ಲಿ 544 ಅರ್ಜಿಗಳು ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ್ದಾಗಿದ್ದವು.