ಕರ್ನಾಟಕ

karnataka

ETV Bharat / state

ಅಪ್ರಾಪ್ತ ಎಂದು ಬಾಲಾಪರಾಧಿಯಾದವರು ನ್ಯಾಯಾಲಯದ ಮೆಟ್ಟಿಲೇರಬಹುದು: ಹೈಕೋರ್ಟ್ - High Court - HIGH COURT

ಬಾಲಾಪರಾಧಿ ಕಾಯ್ದೆಯಡಿ ವಿಚಾರಣೆಗೊಳಪಡಿಸಬೇಕು ಎಂದು ಕೋರಿ ಅತ್ಯಾಚಾರ ಆರೋಪಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ನಡೆಸಿತು.

high-court-heard-plea-filed-by-rape-accused-seeking-trial-under-juvenile-offenders-act
ತಾನು ಅಪ್ರಾಪ್ತ ಎಂದು ಬಾಲಾಪರಾಧಿಯಾದವರು ನ್ಯಾಯಾಲಯದ ಮೆಟ್ಟಿಲೇರಬಹುದು : ಹೈಕೋರ್ಟ್

By ETV Bharat Karnataka Team

Published : Apr 22, 2024, 9:47 PM IST

ಬೆಂಗಳೂರು:ಅಪರಾಧ ಎಸಗುವ ಸಮಯದಲ್ಲಿ ಅಪ್ರಾಪ್ತ ವಯಸ್ಕನಾಗಿದ್ದ ಆರೋಪಿ ತಾನು ಬಾಲಾಪರಾಧಿ ಎಂಬುದಾಗಿ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಅವಕಾಶವಿದೆ ಎಂದು ಹೈಕೋರ್ಟ್ ತಿಳಿಸಿದೆ. ಅಲ್ಲದೆ, ಆರೋಪಿಯ ವಿರುದ್ಧದ ಪ್ರಕರಣವೊಂದರ ಮರು ವಿಚಾರಣೆ ನಡೆಸುವಂತೆ ಬಾಲ ನ್ಯಾಯಮಂಡಳಿಗೆ ನಿರ್ದೇಶನ ನೀಡಿದೆ.

ಅಪರಾಧ ಘಟನೆ ನಡೆದ ಸಂದರ್ಭದಲ್ಲಿ ತನಗೆ ವಯಸ್ಸು 15 ಆಗಿದ್ದು, ಬಾಲಾಪರಾಧಿ ಕಾಯ್ದೆಯಡಿ ತನ್ನನ್ನು ವಿಚಾರಣೆಗೊಳಪಡಿಸಬೇಕು ಎಂದು ಕೋರಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕಾನೂನು ಸಂಘರ್ಷಕ್ಕೊಳಗಾದ ಯುವಕ ಅರ್ಜಿ ಸಲ್ಲಿಸಿದ್ದ. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಅರ್ಜಿದಾರರು ಅವಿದ್ಯಾವಂತ, ಅವರು ತಮ್ಮ ಜೀವನದ ಯಾವುದೇ ಹಂತದಲ್ಲಿ ಶಾಲೆಗೆ ಹೋಗಿಲ್ಲ ಮತ್ತು ಆದ್ದರಿಂದ ಅವರ ಶಾಲಾ ದಾಖಲೆಗಳು ಲಭ್ಯವಿಲ್ಲ. ಒಸಿಫಿಕೇಶನ್ (ಮೂಳೆ ರಚನೆಯ ನೈಸರ್ಗಿಕ ಪ್ರಕ್ರಿಯೆ) ಪರೀಕ್ಷೆಯು ನಿರ್ಣಾಯಕವಲ್ಲ, ಇದು ಒಂದು ಅಥವಾ ಎರಡು ವರ್ಷ ಬದಲಾಗಬಹುದು ಮತ್ತು ವ್ಯತ್ಯಾಸವು ಬಾಲಾಪರಾಧಿಯ ಅನುಕೂಲಕ್ಕಾಗಿ ಕನಿಷ್ಠ ಒಂದು ವರ್ಷದವರೆಗೆ ಇರಬೇಕು ಮತ್ತು ಬಾಲಾಪರಾಧಿಯನ್ನು ಬಾಲಾಪರಾಧಿ ನ್ಯಾಯ ಮಂಡಳಿ ವಿಚಾರಣೆ ನಡೆಸಬೇಕು ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಸಾಮಾನ್ಯ ನ್ಯಾಯಾಲಯದಿಂದ ವಿಚಾರಣೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೆ, ಸುಪ್ರೀಂ ಕೋರ್ಟ್​​ನ ಹಲವಾರು ತೀರ್ಪುಗಳು ಮತ್ತು ದಾಖಲೆಯಲ್ಲಿರುವ ಪರಿಗಣಿಸಿದ ನ್ಯಾಯಪೀಠ, ರಾಮ್ ವಿಜಯ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಉತ್ತರಾಖಂಡ್ ಪ್ರದೇಶ ಪ್ರಕರಣವನ್ನು ಉಲ್ಲೇಖಿಸಿದೆ. ದಾಖಲೆಗಳು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ಅನುಪಸ್ಥಿತಿಯಲ್ಲಿ ವಯಸ್ಸನ್ನು ನಿರ್ಧರಿಸುವ ಕಾರ್ಯವಿಧಾನವನ್ನು ವ್ಯವಹರಿಸುವ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ನಿಯಮಗಳು, 2007ರ ನಿಯಮ 12ರಲ್ಲಿ ತಿಳಿಸಿರುವಂತೆ ಬಾಲಾಪರಾಧಿಯ ವಯಸ್ಸನ್ನು ಘೋಷಿಸುವ ಸೂಕ್ತವಾಗಿ ರಚಿಸಲಾದ ವೈದ್ಯಕೀಯ ಮಂಡಳಿಯಿಂದ ವೈದ್ಯಕೀಯ ಅಭಿಪ್ರಾಯ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೆ, ನಿಖರವಾದ ವಯಸ್ಸನ್ನು ನಿರ್ಣಯಿಸಲು ಸಾಧ್ಯವಿಲ್ಲ ಮತ್ತು ಒಂದು ವರ್ಷದ ಅಂತರದೊಳಗೆ ಅವನ ಅಥವಾ ಅವಳ ವಯಸ್ಸನ್ನು ಪರಿಗಣಿಸಿ ಮಗುವಿಗೆ ಮನವಿಯನ್ನು ಪರಿಗಣಿಸಬೇಖು ಎಂದು ಸುಪ್ರೀಂ ಕೋರ್ಟ್​​ ಹೇಳಿದೆ. ಹೀಗಾಗಿ, ವಯಸ್ಸನ್ನು ನಿರ್ಧರಿಸುವುದು ವೈದ್ಯಕೀಯ ಪರೀಕ್ಷೆಯಲ್ಲಿದ್ದರೆ, ಅದನ್ನು ಒಂದು ವರ್ಷ ಕಡಿಮೆ ಮಾಡಬೇಕು. ಈ ಕುರಿತ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:2016ರಲ್ಲಿ ಸುಮಾರು 15 ವರ್ಷದವನಾಗಿದ್ದ ಆರೋಪಿಯು ಪಕ್ಕದ ಮನೆಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಸಂತ್ರಸ್ತೆಯ ಅಜ್ಜಿ ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಸುಮಾರು 16 ವರ್ಷ ವಯಸ್ಸಿನವರಾಗಿದ್ದರಿಂದ ಮತ್ತು ಆರೋಪಿ ಬಾಲಕನ ಬಗ್ಗೆ ನಿರ್ದಿಷ್ಟ ವಯಸ್ಸಿನ ಪುರಾವೆಗಳು ಲಭ್ಯವಿಲ್ಲದ ಕಾರಣ, ಒಸಿಫಿಕೇಶನ್ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಆರೋಪಿ 16 ರಿಂದ 18 ವರ್ಷದೊಳಗಿನವ ಎಂಬ ಅಂಶ ತಿಳಿದು ಬಂದಿತ್ತು.

ಅದರ ಆಧಾರದಲ್ಲಿ ಪ್ರಕರಣವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012ರ ಅಡಿಯಲ್ಲಿ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರಕ್ರಿಯೆಯನ್ನು ಆರೋಪಿಯು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಅಲ್ಲದೆ, ತನ್ನನ್ನು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಬೇಕಿತ್ತು ಎಂದು ವಾದಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರ ಪ್ರಕರಣದ ವಿಚಾರಣೆ ಪ್ರಾರಂಭವಾಗಿದ್ದು, ಮುಕ್ತಾಯದ ಹಂತದಲ್ಲಿದೆ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿತ್ತು.

ಇದನ್ನೂ ಓದಿ:ಹುಕ್ಕಾ ಬಾರ್ ನಿಷೇಧ:​ ಸರ್ಕಾರದ ಕ್ರಮ ಎತ್ತಿ ಹಿಡಿದ ಹೈಕೋರ್ಟ್ - Hookah Bar Ban

ABOUT THE AUTHOR

...view details