ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ: ಏ. 22ರ ವರೆಗೆ ಮಳೆ‌ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ - rain

ಶನಿವಾರ ಬೆಳಗಿನಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ಭಾಗಗಳಲ್ಲಿ ಗಾಳಿ ಹಾಗೂ ಗುಡುಗು ಸಹಿತ ಭಾರೀ ಮಳೆ ಸುರಿದಿದೆ.

raining in Uttara Kannada
ಉತ್ತರಕನ್ನಡದಲ್ಲಿ ಮಳೆ ಬೀಳುತ್ತಿರುವುದು

By ETV Bharat Karnataka Team

Published : Apr 20, 2024, 6:18 PM IST

Updated : Apr 20, 2024, 11:04 PM IST

ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ: ಏ. 22ರ ವರೆಗೆ ಮಳೆ‌ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಕಾರವಾರ:ಉತ್ತರಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಸಿಂಚನವಾಗಿದೆ. ಕಳೆದ ಕೆಲ‌‌‌ ದಿನಗಳಿಂದ ಕವಿದುಕೊಂಡಿದ್ದ ಮೋಡ ಶನಿವಾರ ಮುಂಜಾನೆಯಿಂದ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ.

ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ‌ ತಾಲೂಕುಗಳಲ್ಲಿ ಕಳೆದ ಎರಡು ದಿನಗ‌ಳಿಂದ ಮಳೆ ಸುರಿದಿತ್ತು, ಆದರೆ ಜಿಲ್ಲೆಯ ಕರಾವಳಿ ಭಾಗದ ತಾಲೂಕುಗಳಲ್ಲಿ ಮೋಡದ ವಾತಾವರಣ ಮಾತ್ರ ಕಂಡು ಬಂದಿತು. ಆದರೆ ಶನಿವಾರ ಬೆಳಗಿನಿಂದ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ಭಾಗಗಳಲ್ಲಿ ಗಾಳಿ ಹಾಗೂ ಗುಡುಗು ಸಹಿತ ಭಾರೀ ಮಳೆಯಾಗಲಾರಂಭಿಸಿದೆ.

ಉಳಿದಂತೆ ಘಟ್ಟದ ‌ಮೇಲಿನ ತಾಲೂಕುಗಳಾದ ಹಳಿಯಾಳ, ಮುಂಡಗೋಡ, ಶಿರಸಿ, ಸಿದ್ದಾಪುರ, ಜೋಯಿಡಾ ಭಾಗದಲ್ಲಿಯೂ ಗುಡುಗು ಸಹಿತ ಮಳೆಯಾಗುತ್ತಿದೆ. ಬಿಸಿಲಿನ‌ ಬೇಗೆಯಲ್ಲಿದ್ದ ಇಳೆಗೆ ಮಳೆಯ ಸಿಂಚನವಾಗಿರುವುದು ತಂಪಾದ ವಾತಾವರಣ ಸೃಷ್ಟಿಯಾಗಿದೆ. ಇನ್ನು ಅಕಾಲಿಕ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮದುವೆ ಇತರೆ ಸಮಾರಂಭಗಳಿಗೆ ಮಳೆ ಅಡ್ಡಿಯಾಗಿ ತೊಂದರೆ ಪಡುವಂತಾಗಿದೆ.

ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಇನ್ನು ಏಪ್ರಿಲ್ 22ರ ವರೆಗೆ ಜಿಲ್ಲೆಯಾದ್ಯಂತ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದನ್ನೂಓದಿ:ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ, ಜನರ ಮೊಗದಲ್ಲಿ ಮಂದಹಾಸ - First Rain

Last Updated : Apr 20, 2024, 11:04 PM IST

ABOUT THE AUTHOR

...view details