ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ವರ್ಷಧಾರೆ: ಜುಲೈ 9ರ ವರೆಗೆ ಮಳೆ ಮುಂದುವರಿಕೆ - Heavy rain in Bengaluru - HEAVY RAIN IN BENGALURU

ಬೆಂಗಳೂರಿನಲ್ಲಿ ಶುಕ್ರವಾರ ಭಾರೀ ಮಳೆಯಾಗಿದ್ದು, ಹಲವೆಡೆ ರಸ್ತೆಗೆ ನೀರು ನುಗ್ಗಿ ವಾಹನ ದಟ್ಟಣೆ ಉಂಟಾಗಿ ಸವಾರರು ಪರದಾಡಿದ್ದಾರೆ.

ರಾಜಧಾನಿಯ ಹಲವೆಡೆ ವರ್ಷಧಾರೆ
ರಾಜಧಾನಿಯ ಹಲವೆಡೆ ವರ್ಷಧಾರೆ (ETV Bharat)

By ETV Bharat Karnataka Team

Published : Jul 6, 2024, 7:10 AM IST

ಬೆಂಗಳೂರು: ರಾಜಧಾನಿಯ ಹಲವೆಡೆ ಶುಕ್ರವಾರ ರಾತ್ರಿ ಮಳೆಯಾಗಿದೆ. ಪೂರ್ವ, ದಕ್ಷಿಣ, ಯಲಹಂಕ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿರುಸಾಗಿ ಮಳೆ ಸುರಿದಿದೆ. ನಿನ್ನೆ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ಸುಮಾರು 7.30 ಗಂಟೆಗೆ ಶುರುವಾದ ಮಳೆ ಅರ್ಧ ಗಂಟೆ ಕಾಲ ಸುರಿಯಿತು.

ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಬಸವನಗುಡಿ, ಮೆಜೆಸ್ಟಿಕ್, ಜೆ.ಪಿ.ನಗರ, ಬನಶಂಕರಿ, ಜಯನಗರ, ಮಲ್ಲೇಶ್ವರ, ಯವಶಂತಪುರ, ಮೈಸೂರು ರಸ್ತೆ, ನಾಯಂಡಹಳ್ಳಿ, ಕಂಗೇರಿ, ಮಾರುತಿ ಮಂದಿರ, ಸಂಪಂಗಿರಾಮನಗರ, ಹೆಬ್ಬಾಳ‌‌ ಸೇರಿದಂತೆ‌ ನಗರದ ವಿವಿಧ ಭಾಗಗಳಲ್ಲಿ ವರ್ಷಧಾರೆಯಾಯಿತು. ಪ್ರಮುಖ ರಸ್ತೆಗಳಲ್ಲಿ ಮೇಲ್ಸೇತುವೆ ಮೇಲೆ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.‌ ಕೆಲವೆಡೆ ವಾಹನ ದಟ್ಟಣೆ ಉಂಟಾಯಿತು. ಸಂಜೆ ವೇಳೆ ಮಳೆಯಲ್ಲಿಯೇ ವಾಹನ ಸವಾರರು ಮನೆಯತ್ತ ಸಾಗಿದರು.

ಸಿಲಿಕಾನ್ ಸಿಟಿಯಲ್ಲಿ ಮುಂದಿನ ಎರಡು ದಿನ ಹಗುರ ಮಳೆ:ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 21 ಡಿಗ್ರಿ ಆಗಿರಲಿದೆ ಎಂದು ಹೇಳಿದೆ.

ಜುಲೈ 9ರ ವರೆಗೆ ಮಳೆ: ಕರಾವಳಿ ಜಿಲ್ಲೆಗಳಲ್ಲಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 9ರ ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ:ಧರೆಗುರುಳಿದ ಭಾರಿ ಗಾತ್ರದ ಆಲದ ಮರ: ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ - Rain In Chikkamagaluru

ABOUT THE AUTHOR

...view details